ವಾವ್​! ಸ್ವರ್ಗಕ್ಕೆ ಕಿಚ್ಚು ಹಚ್ಚಿದ ‘ಚಿಕಲೆ’ ಜಲಪಾತದ ಜಲ ವೈಭವ..

|

Updated on: Jul 14, 2024 | 7:11 PM

ಬೆಳಗಾವಿ ಜಿಲ್ಲೆಯ ಖಾನಾಪುರ(Khanapur) ತಾಲೂಕಿನ ಚಿಕಲೆ ಗ್ರಾಮದ ಸಮೀಪವಿರುವ ಕಣಕುಂಬಿ ವಲಯದ ಪರಿಸರದಲ್ಲಿ ಈ ‘ಚಿಕಲೆ’ ಫಾಲ್ಸ್​ ಇದೆ. ಈ ಪ್ರಕೃತಿ ಸ್ವರ್ಗ ನೋಡಲು ಕಾಲ್ನಡಿಗೆ ಮೂಲಕ ಕಾಡಿನ ನಡುವೆ ಹೆಜ್ಜೆ ಹಾಕಬೇಕು. ಅದರಂತೆ ಸ್ವರ್ಗಕ್ಕೆ ಕಿಚ್ಚು ಹಚ್ಚಿದ ಚಿಕಲೆ ಜಲಪಾತದ ಜಲ ವೈಭವ ಇಲ್ಲಿದೆ.

ಬೆಳಗಾವಿ, ಜು.14: ‘ಚಿಕಲೆ’ ಜಲಪಾತ, ಬೆಳಗಾವಿ ಜಿಲ್ಲೆಯ ಖಾನಾಪುರ(Khanapur) ತಾಲೂಕಿನ ಚಿಕಲೆ ಗ್ರಾಮದ ಸಮೀಪ ಇರುವ ಕಣಕುಂಬಿ ವಲಯದ ಪರಿಸರದಲ್ಲಿ ಈ ‘ಚಿಕಲೆ’ ಫಾಲ್ಸ್​ ಇದೆ. ಇದರ ಒಂದು ಕಿಲೋ ಮೀಟರ್​ ಅಂತರದಲ್ಲಿ ‘ಪಾರವಾಡ’ ಎಂಬ ಜಲಪಾತವಿದೆ. ಇನ್ನು ಈ ಜಲಪಾತಕ್ಕೆ ಬೆಳಗಾವಿ-ಗೋವಾ ಹೆದ್ದಾರಿಯಲ್ಲಿ ಸಾಗುವ ಪ್ರವಾಸಿಗರಲ್ಲಿ ಕೆಲವೇ ಕೆಲವು ಜನರು ಮಾತ್ರ ಭೇಟಿ ನೀಡುತ್ತಾರೆ. ಏಕೆಂದರೆ ಈ ಪ್ರಕೃತಿ ಸ್ವರ್ಗ ನೋಡಲು ಕಾಲ್ನಡಿಗೆ ಮೂಲಕ ಕಾಡಿನ ನಡುವೆ ಹೆಜ್ಜೆ ಹಾಕಬೇಕು. ಇನ್ನು ಈ ಹಿಂದೆ ದುರ್ಗಮ ಪಾಲ್ಸ್​ಗೆ ಭೇಟಿ ನೀಡುವ ಪ್ರವಾಸಿಗರ ಬಳಿ ಅರಣ್ಯ ಇಲಾಖೆ ಶುಲ್ಕ ವಸೂಲಿ ಮಾಡುತ್ತಿತ್ತು. ಬಳಿಕ ಅಂದಿನ ಜಿಲ್ಲಾಧಿಕಾರಿಗಳು ಇದಕ್ಕೆ ಬ್ರೇಕ್​ ಹಾಕಿದ್ದರು. ಮತ್ತು ಇದೀಗ ಪ್ರವಾಸಿಗರ ಓಡಾಟ ಜಾಸ್ತಿಯಾಗಿದೆ. ಸ್ವರ್ಗಕ್ಕೆ ಕಿಚ್ಚು ಹಚ್ಚಿದ ಚಿಕಲೆ ಜಲಪಾತದ ಜಲ ವೈಭವ ಇಲ್ಲಿದೆ.

ರಾಜ್ಯದ ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ