ಮಂಡ್ಯದ ಜನ ಕುಮಾರಣ್ಣಗೆ ಕೊಟ್ಟ ಆ ವಿಗ್ರಹ ಯಾವ್ದು ಗೊತ್ತಾ?

ಮಂಡ್ಯದ ಜನ ಕುಮಾರಣ್ಣಗೆ ಕೊಟ್ಟ ಆ ವಿಗ್ರಹ ಯಾವ್ದು ಗೊತ್ತಾ?

ಕಿರಣ್ ಹನುಮಂತ್​ ಮಾದಾರ್
|

Updated on: Jul 14, 2024 | 10:13 PM

ಮಂಡ್ಯದ ಪಾಂಡವಪುರ(Pandavapura) ಪಟ್ಟಣದಲ್ಲಿ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ(HD Kumaraswamy) ಅವರಿಗೆ ಅಭಿನಂದನೆ ಹಾಗೂ ಕೃತಜ್ಞತಾ ಸಮಾವೇಶವನ್ನು ಆಯೋಜನೆ ಮಾಡಲಾಗಿದ್ದು, ಪಾಂಡವಪುರ ಕ್ರೀಡಾಂಗಣದ ಸಮೀಪ ಬೃಹತ್ ವೇದಿಕೆ ನಿರ್ಮಿಸಲಾಗಿತ್ತು. ಈ ವೇಳೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಗೆ ಅವರಿಗೆ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್-ಬಿಜೆಪಿ ವತಿಯಿಂದ ಸನ್ಮಾನ ಮಾಡಿ ಕಂಚಿನ ವಿಗ್ರಹವನ್ನು ನೀಡಲಾಯಿತು.

ಮಂಡ್ಯ, ಜು.14: ಇಂದು(ಭಾನುವಾರ) ಮಂಡ್ಯದ ಪಾಂಡವಪುರ(Pandavapura) ಪಟ್ಟಣದಲ್ಲಿ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ(HD Kumaraswamy) ಅವರಿಗೆ ಅಭಿನಂದನೆ ಹಾಗೂ ಕೃತಜ್ಞತಾ ಸಮಾವೇಶವನ್ನು ಆಯೋಜನೆ ಮಾಡಲಾಗಿದ್ದು, ಪಾಂಡವಪುರ ಕ್ರೀಡಾಂಗಣದ ಸಮೀಪ ಬೃಹತ್ ವೇದಿಕೆ ನಿರ್ಮಿಸಲಾಗಿತ್ತು. ಈ ವೇಳೆ ಮೇಲುಕೋಟೆ ಕ್ಷೇತ್ರದ ಮತದಾರರಿಗೆ ಭರ್ಜರಿ ಬಾಡೂಟ ವ್ಯವಸ್ಥೆ ಮಾಡಲಾಗಿದ್ದು,  ಕಾರ್ಯಕ್ರಮ ಸಮೀಪದ ಖಾಸಗಿ ಸಮುದಾಯ ಭವನದಲ್ಲಿ ಊಟದ ವ್ಯವಸ್ಥೆ ಕೂಡ ಮಾಡಲಾಗಿತ್ತು.  ಈ ವೇಳೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಗೆ ಅವರಿಗೆ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್-ಬಿಜೆಪಿ ವತಿಯಿಂದ ಸನ್ಮಾನ ಮಾಡಿ, ‘ಶ್ರೀಕೃಷ್ಣ’ ಕಂಚಿನ ವಿಗ್ರಹವನ್ನು ನೀಡಿ, ಶಾಲು ಹೊದಿಸಿ, ಹಾರ ಹಾಕಿ ಸನ್ಮಾನಿಸಲಾಯಿತು.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ