ಮುಂದಿನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಘೋಷಣೆ, ಹೌದೋ ಹುಲಿಯಾ ಎಂದ ಅಭಿಮಾನಿಗಳು
ಮುಂದಿನ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಬೆಂಬಲಿಗರು ಘೋಷಣೆ ಕೂಗಿದ್ದು, ಹೌದೋ ಹುಲಿಯಾ ಎಂದು ಕೆಲವು ಅಭಿಮಾನಿಗಳು ಧ್ವನಿಗೂಡಿಸಿದ್ದಾರೆ.
ವಿಜಯಪುರ: ಮುಂದಿನ ಕರ್ನಾಟಕದ ಮುಖ್ಯಮಂತ್ರಿ ಬಗ್ಗೆ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಬಣಗಳ ನಡುವೆ ಪೈಪೋಟಿ ನಡೆಯುತ್ತಿದೆ. ಸಿದ್ದರಾಮಯ್ಯ ಅವರ ಬಣ ಒಂದು ಹೆಜ್ಜೆ ಮುಂದೆ ಹೋಗಿ ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ ಎಂದು ಹೇಳುತ್ತಲೇ ಇದ್ದಾರೆ. ಇದೀಗ ವಿಜಯಪುರದಲ್ಲೂ ಬೆಂಬಲಿಗರು ಇದನ್ನೇ ಘೋಷಣೆ ಮಾಡಿದ್ದಾರೆ. ನಿನ್ನೆ ರಾತ್ರಿ ಯಾದಗಿರಿಯಿಂದ ವಿಜಯಪುರ ಜಿಲ್ಲೆಯ ಆಲಮಟ್ಟಿಗೆ ತೆರಳೋ ವೇಳೆ ಜಟ್ಟಗಿ ಗ್ರಾಮಕ್ಕೆ ಸಿದ್ದರಾಮಯ್ಯ ಭೇಟಿ ನೀಡಿದ್ದರು. ಈ ವೇಳೆ ಜಟ್ಟಗಿ ಗ್ರಾಮದ ಬಿ ಕೆ ಬಿರಾದಾರ್ ನಿವಾಸಕ್ಕೆ ಆಗಮಿಸಿದಾಗ ಭಾರಿ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಈ ವೇಳೆ ಸಿದ್ದರಾಮಯ್ಯ ಪರ ಘೋಷಣೆ ಕೂಗುತ್ತಿದ್ದಾಗ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಅಭಿಮಾನಿಗಳು ಘೋಷಣೆ ಕೂಗಲಾಯಿತು. ಇದಕ್ಕೆ ಹೌದೋ ಹುಲಿಯಾ ಎಂದು ಧ್ವನಿಗೂಡಿಸಲಾಯಿತು. ಅಲ್ಲದೆ ಸಿದ್ದರಾಮಯ್ಯರನ್ನು ಭೇಟಿಯಾಗಲು ಯುವಕರು ದುಂಬಾಲು ಬಿದ್ದರು.
ಇದನ್ನೂ ಓದಿ: Shocking Video: ಫೋಟೋ ಆಸೆಯಿಂದ ಸಮುದ್ರದಲ್ಲಿ ಕೊಚ್ಚಿ ಹೋದ ಕುಟುಂಬ; ಶಾಕಿಂಗ್ ವಿಡಿಯೋ ವೈರಲ್