ನೆಲಮಂಗಲದಲ್ಲಿ ಕಾರಿನ ಗ್ಲಾಸ್ ಒಡೆದು 11 ಲಕ್ಷ ರೂ. ಕಳ್ಳತನ: ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಯ್ತು ದೃಶ್ಯ

Updated on: Jun 01, 2025 | 12:13 PM

ಕಾರಿನಲ್ಲಿ ದೊಡ್ಡ ಮೊತ್ತದ ಹಣ, ಆಭರಣ ಇಟ್ಟು ಹೋಗುವವರು ಗಮನಿಸಲೇಬೇಕಾದ ವಿಚಾರವಿದು. ಕಾರಿನ ಗಾಜು ಒಡೆದು 11.5 ಲಕ್ಷ ರೂ. ನಗದು ಕಳವು ಮಾಡಿದ ವಿದ್ಯಮಾನ ನೆಲಮಂಗಲದಲ್ಲಿ ನಡೆದಿದೆ. ಸದ್ಯ ಕಳವು ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಖತರ್​ನಾಕ್ ಕಳ್ಳರು ಕಾರಿನಿಂದ ಹಣ ಎಗರಿಸಿದ ಸಿಸಿಟಿವಿ ವಿಡಿಯೋ ಇಲ್ಲಿದೆ.

ನೆಲಮಂಗಲ, ಜೂನ್ 1: ಕಾರಿನ ಗ್ಲಾಸ್ ಒಡೆದು 11.5 ಲಕ್ಷ ರೂ. ನಗದು ದೋಚಿ ಪರಾರಿಯಾದ ಘಟನೆ ನೆಲಮಂಗಲದಲ್ಲಿ ನಡೆದಿದೆ. ದಾಬಸ್​​ಪೇಟೆಯಲ್ಲಿ ಲಾಜಿಸ್ಟಿಕ್ಸ್ ನಡೆಸುತ್ತಿದ್ದ ಅತೀಕ್ ರೆಹಮಾನ್ ಎಂಬವರಿಗೆ ಸೇರಿದ ಕಾರಿನಿಂದ ಹಣ ಕಳವು ಮಾಡಲಾಗಿದೆ. ದಾಬಸ್​​ಪೇಟೆಟೆಯಿಂದ ಹಣ ತೆಗೆದುಕೊಂಡು ಬಂದಿದ್ದ ಅತೀಕ್, ನೆಲಮಂಗಲದಲ್ಲಿ ಮಿಕ್ಸಿ ರಿಪೇರಿ ಮಾಡಿಸಲು ಹೋಗಿದ್ದರು. ಕಾರಿನಲ್ಲಿ ಹಣದ ಬ್ಯಾಗ್ ಇಟ್ಟು ತೆರಳಿದ್ದರು. ವಾಪಸ್ ಬಂದು ನೋಡಿದಾಗ ಹಣ ಕಳ್ಳತನವಾಗಿದ್ದು ಬೆಳಕಿಗೆ ಬಂದಿದೆ. ಈ ಸಂಬಂಧ ನೆಲಮಂಗಲ ಟೌನ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ.

ವರದಿ, ವಿಡಿಯೋ: ಮಂಜುನಾಥ್, ಟಿವಿ9

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ