Daily Devotional: ಪುಟ್ಟ ಮಕ್ಕಳ ಕೈಗೆ ಕಪ್ಪು ಮಣಿ, ತಾಮ್ರದ ಕಡಗ ಹಾಕುವುದರ ಹಿಂದಿದೆ ಹಲವು ಅಧ್ಯಾತ್ಮಿಕ ಪ್ರಯೋಜನ

Daily Devotional: ಪುಟ್ಟ ಮಕ್ಕಳ ಕೈಗೆ ಕಪ್ಪು ಮಣಿ, ತಾಮ್ರದ ಕಡಗ ಹಾಕುವುದರ ಹಿಂದಿದೆ ಹಲವು ಅಧ್ಯಾತ್ಮಿಕ ಪ್ರಯೋಜನ

ವಿವೇಕ ಬಿರಾದಾರ
|

Updated on: Dec 20, 2024 | 6:38 AM

ಸಣ್ಣ ಮಕ್ಕಳ ಕೈಗೆ ಕಪ್ಪು ದಾರ ಅಥವಾ ಮಣಿ, ತಾಮ್ರದ ಕಡಗ ಹಾಕುವುದರ ಹಿಂದಿನ ಆಧ್ಯಾತ್ಮಿಕ ಮಹತ್ವ ಏನು? ಇದರಿಂದ ಮಕ್ಕಳಿಗೇನು ಪ್ರಯೋಜನ? ಎಲ್ಲ ಪೋಷಕರೂ ಯಾಕೆ ಈ ರೀತಿ ಮಾಡಬೇಕು ಎಂಬುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ತಜ್ಞ ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ. ವಿಡಿಯೋ ನೋಡಿ.

ಪುಟ್ಟ ಮಕ್ಕಳಲ್ಲಿ ಸಣ್ಣಪುಟ್ಟ ಅನಾರೋಗ್ಯ ಬಂದಾಗ, ಬಾಲಗ್ರಹ ದೋಷಗಳ ಪರಿಣಾಮ ಆರೋಗ್ಯ ಸಮಸ್ಯೆ ಎದುರಾದಾಗ ಪೋಷಕರು ಆತಂಕಕ್ಕೊಳಗಾಗುತ್ತಾರೆ. ಇಂಥ ಸಂದರ್ಭಗಳನ್ನು ಎದುರಿಸಲು ಸಣ್ಣ ಅಧ್ಯಾತ್ಮ ಪರಿಹಾರ ಮಾಡಿಕೊಳ್ಳಬಹುದು ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ತಜ್ಞ ಬಸವರಾಜ ಗುರೂಜಿ ತಿಳಿಸಿದ್ದು, ಅದೇನೆಂಬುದನ್ನೂ ವಿವರಿಸಿದ್ದಾರೆ.

ಒಂದು ವರ್ಷದ, ಮೂರು ವರ್ಷ ವರೆಗಿನ ಅಥವಾ ಆರು ವರ್ಷದ ವರೆಗೂ ಮಕ್ಕಳ ಎಡ ಕೈಗೆ, ಹೆಣ್ಣು ಮಕ್ಕಳಾದರೆ ಕಪ್ಪು ದಾರ ಅಥವಾ ಕಪ್ಪು ಮಣಿಯನ್ನು ಕಟ್ಟುವುದನ್ನು ನೋಡಿದ್ದೇವೆ. ಗಂಡು ಮಕ್ಕಳಾದರೆ ಅವರ ಬಲಕೈಗೆ ಕಪ್ಪು ದಾರ ಅಥವಾ ಕಪ್ಪು ಮಣಿಯ ಜತೆಗೆ ತಾಮ್ರದ ಸಣ್ಣ ಕಡಗ ಅಥವಾ ಬಳೆಯನ್ನು ಹಾಕುತ್ತಾರೆ. ಅಥವಾ ತಾಮ್ರದ ಅಂಶ ಇರುವ ಯಾವುದೇ ವಸ್ತುವನ್ನಾದರೂ ಹಾಕಬಹುದು. ಇದು ಹೆಣ್ಣು ಮಕ್ಕಳಿಗೂ ಹಾಕಬಹುದು. ಇದರಿಂದ ಅದ್ಭುತ ಪ್ರಯೋಜನಗಳಿವೆ ಎಂದಿದ್ದಾರೆ ಬಸವರಾಜ ಗುರೂಜಿ. ಇದಕ್ಕೆ ಅವರು ನೀಡಿರುವ ವಿವರಣೆ ಇಲ್ಲಿದೆ. ವಿಡಿಯೋ ನೋಡಿ.