ತೆಂಗಿಕಾಯಿಗಳನ್ನ ಮುಗಿಲಿಗೆಸೆಯುವ ಭಕ್ತರು: ಓಬಳೇಶ್ವರ ಜಾತ್ರೆ ವಿಶಿಷ್ಟ ಸಂಪ್ರದಾಯ ಹೇಗಿದೆ ನೋಡಿ!
ಗಿರಿಯಾಲ ಗ್ರಾಮದಲ್ಲಿ ಓಬಳೇಶ್ವರ ಜಾತ್ರೆ ವೇಳೆ ವಿಶಿಷ್ಟ ಸಂಪ್ರದಾಯ ಆಚರಣೆ. ಚಿಕ್ಕಮಕ್ಕಳಿಗೆ ತೆಂಗಿನಕಾಯಿ ತುಲಾಭಾರ ನೆರವೇರಿಸಿ ತೆಂಗಿನಕಾಯಿ ಮುಗಿಲಿಗೆ ಎಸೆಯುವ ಭಕ್ತರು.
ಬೆಳಗಾವಿ: ಪ್ರತಿ ವರ್ಷ ವಿಜಯದಶಮಿಯಂದು ಅದ್ಧೂರಿ ಜಾತ್ರೆ (fair) ನಡೆಯುತ್ತಿದ್ದು, ಜಾತ್ರೆ ವೇಳೆ ಚಿಕ್ಕ ಚಿಕ್ಕ ಮಕ್ಕಳಿಗೆ ತುಲಾಭಾರ ಮಾಡಲಾಗಿದೆ. ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗಿರಿಯಾಲ ಗ್ರಾಮದಲ್ಲಿ ಓಬಳೇಶ್ವರ ಜಾತ್ರೆ ವೇಳೆ ವಿಶಿಷ್ಟ ಸಂಪ್ರದಾಯ ಆಚರಿಸಲಾಗುತ್ತದೆ. ಚಿಕ್ಕಮಕ್ಕಳಿಗೆ ತೆಂಗಿನಕಾಯಿ ತುಲಾಭಾರ ನೆರವೇರಿಸಿ ಭಕ್ತರು ತೆಂಗಿನಕಾಯಿ ಮುಗಿಲಿಗೆ ಎಸೆಯುತ್ತಾರೆ. ನಿನ್ನೆ ನಡೆದ ಜಾತ್ರೆ ವೇಳೆ ಈ ದೃಶ್ಯ ಕಂಡು ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.