ಬನ್ನಿ ಕೊಡುವ ನೆಪದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದು ರಾಯಚೂರು ಜಿಲ್ಲೆ ಕೋಠಾ ಗ್ರಾಮ ಪಂಚಾಯಿತಿಯ ಪಿಡಿಒ ಗಜದಂಡಯ್ಯರ ಬರ್ಬರ ಹತ್ಯೆ!
ಲಭ್ಯವಾಗಿರುವ ಮಾಹಿತಿ ಪ್ರಕಾರ ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಅವರನ್ನು ಕೊಲ್ಲಲಾಗಿದೆ. ಅವರು ಕೊಲೆಯಾದ ಸ್ಥಳದಲ್ಲಿ ಜನ ಮತ್ತು ಪೊಲೀಸರು ನೆರೆದಿರುವುದನ್ನು ಮತ್ತು ದುಃಖತಪ್ತ ಕುಟುಂಬ ಸದಸ್ಯರು ರೋದಿಸುತ್ತಿರುವುದನ್ನು ನೋಡಬಹುದು
ರಾಯಚೂರು: ಜಿಲ್ಲೆಯ ಕೋಠಾ ಗ್ರಾಮದ ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಗಜದಂಡಯ್ಯ (Gajadandaiah) ಅವರ ಸಾವು ನಿಜಕ್ಕೂ ದಾರುಣ. ಬಂದು ಬನ್ನಿ ತೆಗೆದುಕೊಂಡು ಹೋಗಿ ಅಂತ ಅವರನ್ನು ಲಿಂಗಸೂಗೂರು (Lingasugur) ತಾಲ್ಲೂಕಿನಲ್ಲಿರುವ ಸೀಮೆ ಈರಣ್ಣ ದೇಗುಲ ಬಳಿ ಅವರನ್ನು ಕರೆಸಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಅವರನ್ನು ಕೊಲ್ಲಲಾಗಿದೆ. ಅವರು ಕೊಲೆಯಾದ ಸ್ಥಳದಲ್ಲಿ ಜನ ಮತ್ತು ಪೊಲೀಸರು ನೆರೆದಿರುವುದನ್ನು ಮತ್ತು ದುಃಖತಪ್ತ ಕುಟುಂಬ ಸದಸ್ಯರು ರೋದಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಲಿಂಗಸೂಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Latest Videos