Karnataka Politics: ರಾಜ್ಯ ಬಿಜೆಪಿಯಲ್ಲಿ ಮಂತ್ರಿಗಿರಿ ಚರ್ಚೆ; ವಕ್ತಾರರು ಏನಂತಾರೆ?

Karnataka Politics: ರಾಜ್ಯ ಬಿಜೆಪಿಯಲ್ಲಿ ಮಂತ್ರಿಗಿರಿ ಚರ್ಚೆ; ವಕ್ತಾರರು ಏನಂತಾರೆ?

TV9 Web
| Updated By: shivaprasad.hs

Updated on: Jan 27, 2022 | 9:09 AM

ರಾಜ್ಯ ಬಿಜೆಪಿಯಲ್ಲಿ ನಾಯಕತ್ವ, ಮಂತ್ರಿಗಿರಿ ಕುರಿತಂತೆ ಚರ್ಚೆ ಜೋರಾಗಿದೆ. ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ಈ ಚರ್ಚೆ ಮಹತ್ವ ಪಡೆದಿದೆ. ಈ ಕುರಿತು ಟಿವಿ9 ಡಿಜಿಟಲ್ ಲೈವ್​ನಲ್ಲಿ ಚರ್ಚಿಸಲಾಗಿದೆ.

ರಾಷ್ಟ್ರ ಗಣರಾಜ್ಯೋತ್ಸವ ಅಚರಿಸುವ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ನಡೆಯಿತು. ಇದೇ ಸಂದರ್ಭದಲ್ಲಿ ಮಂತ್ರಿ ಹುದ್ದೆಯ ಆಕಾಂಕ್ಷಿಗಳು ಹಾದಿ- ಬೀದಿಯಲ್ಲಿ ಮಾತನಾಡುತ್ತಿದ್ದಾರೆ. ಚುನಾವಣೆ ಸಮೀಪವಾಗುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಯೊಳಗಿನ ಈ ಬೆಳವಣಿಗೆ ಪರಿಣಾಮ ಏನಾಗಬಹುದು? ಇದನ್ನು ಪಕ್ಷ ಹೇಗೆ ನೋಡುತ್ತದೆ? ಜನರ ಪ್ರತಿಕ್ರಿಯೆ ಏನಿರಬಹುದು? ಈ ಕುರಿತು ಬುಧವಾರದ ಟಿವಿ9 ಡಿಜಿಟಲ್​ ಲೈವ್​ನಲ್ಲಿ ಚರ್ಚಿಸಲಾಗಿದೆ. ಆ್ಯಂಕರ್​ ಪ್ರಮೋದ್​ ಈ ಚರ್ಚೆಯನ್ನು ನಡೆಸಿಕೊಟ್ಟಿದ್ದಾರೆ. ಚರ್ಚೆಯಲ್ಲಿ ಬಿಜೆಪಿ ವಕ್ತಾರೆ ಹಾಗೂ ವಿಧಾನ ಪರಿಷತ್ ಸದಸ್ಯೆ ಡಾ.ತೇಜಸ್ವಿನಿ, ಕಾಂಗ್ರೆಸ್ ವಕ್ತಾರ ನಾಗರಾಜ್ ಯಾದವ್ ಹಾಗೂ ಜೆಡಿಎಸ್​ನಿಂದ ಗಂಗಾಧರ್ ಮೂರ್ತಿ ಭಾಗಿಯಾಗಿದ್ದಾರೆ.

ಇದನ್ನೂ ಓದಿ:

ಅತಂತ್ರ ಫಲಿತಾಂಶ ಬಂದರೆ ಮಾತ್ರ ಜೆಡಿಎಸ್​ಗೆ ಸ್ವಾತಂತ್ರ್ಯ: ಸಿಎಂ ಬಸವರಾಜ ಬೊಮ್ಮಾಯಿ ವ್ಯಂಗ್ಯ

ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗೋಕೆ ಕರೆಯುತ್ತಿದ್ದಾರಾ? ಮತ್ತೆ ಬೊಮ್ಮಯಿ ಸರ್ಕಾರ ಬರುತ್ತೆ -ಸಿದ್ದುಗೆ ರಮೇಶ್ ಜಾರಕಿಹೊಳಿ ಸವಾಲ್