ಕುಡಿದ ಮತ್ತಿನಲ್ಲಿ ಕಾರನ್ನು ಮಲ್ಲೇಶ್ವರಂನಲ್ಲಿರುವ ಮಾಲೊಂದರ ಮುಂದೆ ರಸ್ತೆ ವಿಭಜಕಕ್ಕೆ ಗುದ್ದಿದ ಚಾಲಕ ಹಾಗೂ ಇನ್ನೊಬ್ಬ ಅಸ್ಪತ್ರೆ ಸೇರಿದರು

ಕುಡಿದ ಮತ್ತಿನಲ್ಲಿ ಕಾರನ್ನು ಮಲ್ಲೇಶ್ವರಂನಲ್ಲಿರುವ ಮಾಲೊಂದರ ಮುಂದೆ ರಸ್ತೆ ವಿಭಜಕಕ್ಕೆ ಗುದ್ದಿದ ಚಾಲಕ ಹಾಗೂ ಇನ್ನೊಬ್ಬ ಅಸ್ಪತ್ರೆ ಸೇರಿದರು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 27, 2022 | 3:52 PM

ಪೊಲೀಸರ ಪ್ರಾಥಮಿಕ ತಪಾಸಣೆಯಲ್ಲಿ ಮದ್ಯದ ಬಾಟಲಿಯೊಂದು ಕಾರಿನೊಳಗೆ ಇದ್ದಿದ್ದು ಪತ್ತೆಯಾಗಿದೆ. ಇನ್ ಫ್ಯಾಕ್ಟ್, ವಿಡಿಯೋನಲ್ಲಿ ಬಾಟಲಿ ಕಾಣಿಸುತ್ತಿದೆ. ಅದರರ್ಥ ಕಾರಿನ ಚಾಲಕ ಮದ್ಯ ಸೇವಿಸಿ ಡ್ರೈವ್ ಮಾಡುತ್ತಿದ್ದ. ಅವನನೊಂದಿಗಿದ್ದ ವ್ಯಕ್ತಿಯೂ ಮದ್ಯ ಸೇವಿಸಿರುವ ಸಾಧ್ಯತೆ ಇದೆ.

ಕೋವಿಡ್-19 ಮಹಾಮಾರಿಯ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ (Karnataka Government) ರಾತ್ರಿ ಕರ್ಫ್ಯೂ ಜಾರಿ ಮಾಡಿದಾಗಿನಿಂದ ಅಪಘಾತ ಹೆಚ್ಚುತ್ತ್ತಿರುವುದು ಆತಂಕಕಾರಿ ವಿಷಯವಾಗಿದೆ. ಬುಧವಾರ ರಾತ್ರಿ ಸಮಯ ಒಂದು ಅಪಘಾತ ಮಲ್ಲೇಶ್ವರಂನ (Malleshwaram) ಸಂಪಿಗೆ ರಸ್ತೆಯಲ್ಲಿರುವ ಮಂತ್ರಿ ಮಾಲ್ ಬಳಿ ಜರುಗಿದೆ. ವೇಗವಾಗಿ ಚಲಿಸುತ್ತಿದ್ದ ಕಾರು ಚಾಲಕನ ನಿಯಣತ್ರಣ ತಪ್ಪಿ ರಸ್ತೆ ಡಿವೈಡರ್ಗೆ ಅಪ್ಪಳಿಸಿದೆ. ಐಷಾರಾಮಿ ಕಾರಿನ ಮುಂಭಾಗ ಸಂಪೂರ್ಣವಾಗಿ ನುಜ್ಜುಗುಜ್ಜಾಗಿರುವುದು ವಿಡಿಯೋನಲ್ಲಿ ನಿಮಗೆ ಕಾಣಿಸುತ್ತದೆ. ಹೈಗ್ರೌಂಡ್ಸ್ ಸಂಚಾರಿ ವಿಭಾಗದ (High Grounds Traffic Police) ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಕಾರಿನ ಚಾಲಕ ಮತ್ತು ಕಾರಿನಲ್ಲಿದ್ದ ಮತ್ತೊಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ ಹಾಗೂ ಅವರಿಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗಳ ಸ್ವರೂಪ ಗೊತ್ತಾಗಿಲ್ಲ ಮತ್ತು ಕಾರು ಯಾರಿಗೆ ಸೇರಿದ್ದು ಎಂಬ ವಿವರ ಸಹ ಪೊಲೀಸರು ಹಂಚಿಕೊಂಡಿಲ್ಲ.

ಪೊಲೀಸರ ಪ್ರಾಥಮಿಕ ತಪಾಸಣೆಯಲ್ಲಿ ಮದ್ಯದ ಬಾಟಲಿಯೊಂದು ಕಾರಿನೊಳಗೆ ಇದ್ದಿದ್ದು ಪತ್ತೆಯಾಗಿದೆ. ಇನ್ ಫ್ಯಾಕ್ಟ್, ವಿಡಿಯೋನಲ್ಲಿ ಬಾಟಲಿ ಕಾಣಿಸುತ್ತಿದೆ. ಅದರರ್ಥ ಕಾರಿನ ಚಾಲಕ ಮದ್ಯ ಸೇವಿಸಿ ಡ್ರೈವ್ ಮಾಡುತ್ತಿದ್ದ. ಅವನನೊಂದಿಗಿದ್ದ ವ್ಯಕ್ತಿಯೂ ಮದ್ಯ ಸೇವಿಸಿರುವ ಸಾಧ್ಯತೆ ಇದೆ.

ಬುಧವಾರ ಗಣರಾಜ್ಯೋತ್ಸವದ ಅಂಗವಾಗಿ ರಜಾ ದಿನವಾಗಿತ್ತು. ಹಾಲಿಡೇಗಳ ಸಂದರ್ಭ ಮತ್ತು ವೀಕೆಂಡ್ನಲ್ಲಿ ರಸ್ತೆ ಅಪಘಾತಗಳು ಜಾಸ್ತಿ ಆಗುತ್ತವೆ. ಕುಡಿದು ವಾಹನಗಳನ್ನು ಓಡಿಸುವ ಜನ ರಸ್ತೆಗಳಲ್ಲಿ ಪೊಲೀಸರನ್ನು ಕಂಡ ಕೂಡಲೇ ಅವರಿಂದ ತಪ್ಪಿಸಿಕೊಳ್ಳಲು ಹುಚ್ಚು ಸಾಹಸಗಳಿಗೆ ಮುಂದಾಗುತ್ತಾರೆ. ಆಗ ಅಪಘಾತಗಳು ಸಂಭವಿಸುವುದು ಸ್ವಾಭಾವಿಕ. ಅವರಿಂದಾಗಿ ಅಮಾಯಕರು ಸಹ ಅಪಾಯಕ್ಕೆ ಸಿಲುಕುತ್ತಾರೆ.

ಸದರಿ ಪ್ರಕರಣವು ಹೈ ಗ್ರೌಂಡ್ಸ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಇದನ್ನೂ ಓದಿ:   Mouni Roy: ಸದ್ದಿಲ್ಲದೇ ಆರಂಭವಾಗಿದೆ ಕೆಜಿಎಫ್ ಬೆಡಗಿಯ ವಿವಾಹ ಸಮಾರಂಭ; ಇಲ್ಲಿದೆ ಫೋಟೋ ಹಾಗೂ ವಿಡಿಯೋ