ಸೀರೆಗಳನ್ನು ಹೀಗೂ ಕಳುವು ಮಾಡಬಹುದಾ? ವಿಡಿಯೊ ನೋಡಿ ದಂಗಾಗುತ್ತೀರಿ ಮಾರಾಯ್ರೇ!

ಸೀರೆಗಳನ್ನು ಹೀಗೂ ಕಳುವು ಮಾಡಬಹುದಾ? ವಿಡಿಯೊ ನೋಡಿ ದಂಗಾಗುತ್ತೀರಿ ಮಾರಾಯ್ರೇ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 11, 2022 | 3:33 PM

ಸದ್ಗೃಹಿಣಿಯರಂತೆ ಕಾಣುವ ಮಹಿಳೆಯರು ಸುಮಾರು 80,000 ಬೆಲೆ ಬಾಳುವ ಸೀರೆಗಳನ್ನು ತಮ್ಮ ಕಾಲುಗಳಲ್ಲಿ ಸಿಕ್ಕಿಸಿಕೊಂಡು ಅಂಗಡಿಯಿಂದ ಹೊರಬೀಳುತ್ತಿರುವುದು ಶಾಪಿನಲ್ಲಿ ಅಳವಡಿಸಲಾಗಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Bengaluru: ಸೀರೆಯುಟ್ಟ ಮಹಿಳೆಯರು ಸೀರೆ ಅಂಗಡಿಯೊಂದಕ್ಕೆ ಹೋಗಿ ಸೇಲ್ಸ್ ಗರ್ಲ್ ಗಮನವನ್ನು ಬೇರೆಡೆ ಸೆಳೆದು ದುಬಾರಿ ಬೆಲೆಯ ಸೀರೆಗಳನ್ನು ತಮ್ಮ ಕಾಲುಗಳ ಮಧ್ಯೆ ಇಟ್ಟುಕೊಂಡು ಮಳ್ಳಿಗಳ ಹಾಗೆ ಅಂಗಡಿಯಿಂದ ಪರಾರಿಯಾಗುವುದು ಸಾಧ್ಯವೇ? ಖಂಡಿತ ಸಾಧ್ಯ ಮಾರಾಯ್ರೇ. ಈ ವಿಡಿಯೋ ನೋಡಿದರೆ ನಿಮಗೆ ಗೊತ್ತಾಗುತ್ತದೆ. ಇದು ಬೆಂಗಳೂರಿನ ಹೆಸರಘಟ್ಟ ರಸ್ತೆ ಹಾವನೂರು ಬಡಾವಣೆಯಲ್ಲಿರುವ ಬಟ್ಟೆ ಅಂಗಡಿಯಲ್ಲಿ ನಡೆದಿರುವ ಘಟನೆ. ಮೂವರು ಪುರುಷರೊಂದಿಗೆ ಬರುವ ಸದ್ಗೃಹಿಣಿಯರಂತೆ ಕಾಣುವ ಮಹಿಳೆಯರು ಸುಮಾರು 80,000 ಬೆಲೆ ಬಾಳುವ ಸೀರೆಗಳನ್ನು ತಮ್ಮ ಕಾಲುಗಳಲ್ಲಿ ಸಿಕ್ಕಿಸಿಕೊಂಡು ಅಂಗಡಿಯಿಂದ ಹೊರಬೀಳುತ್ತಿರುವುದು ಶಾಪಿನಲ್ಲಿ ಅಳವಡಿಸಲಾಗಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.