ಅದೃಷ್ಟ ಅಂದ್ರೆ ಇದಪ್ಪಾ..! 25 ಕೋಟಿ ರೂ. ಲಾಟರಿ ಗೆದ್ದ ಮಂಡ್ಯದ ಅಲ್ತಾಫ್​ನ​ ಮನದಾಳದ ಮಾತು

| Updated By: ರಮೇಶ್ ಬಿ. ಜವಳಗೇರಾ

Updated on: Oct 10, 2024 | 4:07 PM

ಈ ಬಾರಿ ಕೇರಳದ ಲಾಟರಿ ಲಕ್ಷ್ಮೀ ಕರ್ನಾಟಕದ ಬಡ ವ್ಯಕ್ತಿಗೆ ಒಲಿದಿದ್ದಾಳೆ. ಓಣಂ ಹಬ್ಬದ ಹಿನ್ನೆಲೆಯಲ್ಲಿ ಕೇರಳದಲ್ಲಿ ನಡೆಸುವ ಬಂಪರ್ ಜಾಕ್​ಪಾಟ್​ ಮಂಡ್ಯದ ಮೂಲದ ಬೈಕ್ ಮೆಕಾನಿಕ್​ ಹೊಡೆದಿದೆ. ಈ ಹಿನ್ನೆಲೆಯಲ್ಲಿ ರಸ್ತೆ ಪಕ್ಕ ಮೆಕಾನಿಕ್​ ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾನೆ.

ಮೈಸೂರು, (ಅಕ್ಟೋಬರ್ 10): ಮನುಷ್ಯನಿಗೆ ಅದೃಷ್ಟ ಖುಲಾಯಿಸಿದ್ರೆ ಹಾಗೆನೇ, ಫುಟ್​ಬಾತ್​ನಲ್ಲಿದ್ದವರನ್ನೂ ಸಹ ಅರಮನೆಯಲ್ಲಿ ಕೂರಿಸುತ್ತೆ. ಅದರಂತೆ ಮಂಡ್ಯದ ಬೈಕ್​ ಮೆಕಾನಿಕ್​ಗೆ ಅದೃಷ್ಟ ಖುಲಾಯಿಸಿದ್ದು,ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾನೆ. ಹೌದು…ಮಂಡ್ಯ ಜಿಲ್ಲೆ ಪಾಂಡವಪುರ ಪಟ್ಟಣದ ನಿವಾಸಿಯಾಗಿರುವ ಅಲ್ತಾಫ್ ಪಾಷಾಗೆ ಕೇರಳ‌ದ ಬಂಪರ್ ಲಾಟರಿ ಹೊಡೆದಿದೆ. ಮೃತ್ತಿಯಲ್ಲಿ ಬೈಕ್​ ಮೆಕ್ಯಾನಿಕ್ ಆಗಿರುವ ಆಲ್ತಾಫ್​ ಪಾಷಾ ಲಾಟರಿಯಲ್ಲಿ ಬರೋಬ್ಬರಿ 25 ಕೋಟಿ ರೂಪಾಯಿ ಗೆದ್ದಿದ್ದಾರೆ. ಇತ್ತೀಚಿಗಷ್ಟೆ ಕೇರಳಕ್ಕೆ ಹೋಗಿದ್ದಾಗ 500 ರೂ ಕೊಟ್ಟು ಲಾಟರಿ ಖರೀದಿ ಮಾಡಿದ್ದರು. ಇದೀಗ 25 ಕೋಟಿ ರೂ. ಲಾಟರಿ ಹೊಡೆದಿರುವ ವಿಚಾರ ತಿಳಿಯುತ್ತಿದ್ದಂತೆಯೇ ಹಣದ ಮೂಟೆ ಕಟ್ಟಿಕೊಂಡು ಬರಲು ಕೇರಳದತ್ತ ಹೊರಟ್ಟಿದ್ದಾರೆ. ಅದಕ್ಕೂ ಮೊದಲು ಲಾಟರಿ ಹೊಡೆದಿರುವ ಬಗ್ಗೆ ಟಿವಿ9 ಜತೆ ಅಲ್ತಾಫ್​ ತಮ್ಮ ಮನದಾಳದ ಮಾತು ಹಂಚಿಕೊಂಡಿದ್ದಾರೆ. ಹಾಗಾದ್ರೆ,  ಈ 25 ಕೋಟಿ ರೂ. ಜಾಕ್​ಪಾಟ್ ಹೊಡೆದಿರುವುದಕ್ಕೆ ಅಲ್ತಾಫ್ ಹೇಳಿದ್ದೇನು? ಇಷ್ಟೊಂದು ಹಣವನ್ನು ಏನು ಮಾಡ್ತಾರೆ ಎನ್ನುವುದನ್ನು ಬಿಚ್ಚಿಟ್ಟಿದ್ದಾರೆ.​