Rare Angel Fish: ಮಲ್ಪೆ ಕಡಲತೀರದಲ್ಲಿ ಸಿಕ್ಕ ಹೊನ್ನಿನ ಬಣ್ಣದ ಆ್ಯಂಜೆಲ್ ಮೀನು ತೂಗಿದ್ದು 16 ಕೆಜಿ! ಮಾರಾಟವಾಗಿದ್ದು ರೂ. 9,600 ಗಳಿಗೆ!!

| Updated By: Digi Tech Desk

Updated on: Jan 27, 2023 | 12:02 PM

ಮಲ್ಪೆ ನಿವಾಸಿ ಸುರೇಶ್ ಅನ್ನುವವರು ಇದನ್ನು ರೂ. 9,600 ಗಳಿಗೆ ಖರೀದಿಸಿದ್ದಾರೆ. ಅಂದಹಾಗೆ ಮೀನು 16 ಕೆಜಿ ತೂಗಿದೆಯಂತೆ.

ಉಡುಪಿ: ಹೊನ್ನು (gold) ಅಥವಾ ಹೊನ್ನಿನ ಬಣ್ಣವೇ ಹಾಗೆ ಮಾರಾಯ್ರೇ, ನಮ್ಮಲ್ಲಿ ವಿಪರೀತವೆನಿಸುವಷ್ಟು ಆಸಕ್ತಿ ಕುತೂಹಲ ಹುಟ್ಟಿಸಿಬಿಡುತ್ತದೆ. ಈ ವಿಡಿಯೋ ನೋಡಿ, ಮಲ್ಪೆ ಕಡಲತೀರದ (Malpe coast) ಮೀನುಗಾರರು ಆ್ಯಂಜೆಲ್ (angel) ಅಂತ ಕರೆಸಿಕೊಳ್ಳುವ ಮೀನನ್ನು ಹಿಡಿದಿದ್ದಾರೆ. ಪ್ರಾಯಶಃ ಇದು ಅಪರೂಪಕ್ಕೊಮ್ಮೆ ಸಿಗುವ ಮೀನು ಆಗಿರಬಹುದು. ಯಾಕೆ ಗೊತ್ತಾ? ಮಲ್ಪೆ ನಿವಾಸಿ ಸುರೇಶ್ ಅನ್ನುವವರು ಇದನ್ನು ರೂ. 9,600 ಗಳಿಗೆ ಖರೀದಿಸಿದ್ದಾರೆ. ಅಂದಹಾಗೆ ಮೀನು 16 ಕೆಜಿ ತೂಗಿದೆಯಂತೆ. ಅಂದರೆ ಸುರೇಶ್ ಪ್ರತಿ ಕೆಜಿಗೆ ರೂ. 600 ರಂತೆ ಕೊಟ್ಟಂತಾಯಿತು!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jan 27, 2023 10:47 AM