ಇದು ಮೋದಿಗಾಗಿ ನಡೆಯುತ್ತಿರುವ ಚುನಾವಣೆ, ಈಶ್ವರಪ್ಪ ನಿರ್ಧಾರ ದುರದೃಷ್ಟಕರ: ಕೆ ಅಣ್ಣಾಮಲೈ

|

Updated on: Apr 25, 2024 | 11:45 AM

ಅಸೆಂಬ್ಲಿ ಚುನಾವಣೆಯಲ್ಲಿ ಈಶ್ವರಪ್ಪನವರಿಗೆ ಟಿಕೆಟ್ ಮಿಸ್ ಆದಾಗ ಖುದ್ದು ಪ್ರಧಾನಿ ಮೋದಿಯವರು ಫೋನ್ ಮಾಡಿ ಸಮಾಧಾನ ಹೇಳಿದ್ದರು, ದೇಶದಲ್ಲಿ ಮೋದಿಯವರು ಎಷ್ಟು ಜನಕ್ಕೆ ಹಾಗೆ ಫೋನ್ ಮಾಡುತ್ತಾರೆ? ಈಶ್ವರಪ್ಪ ಮೇಲೆ ಗೌರವ ಇರುವ ಕಾರಣಕ್ಕೆ ಫೋನ್ ಮಾಡಿದ್ದು ತಾನೇ? ಎಂದು ಅಣ್ಣಾಮಲೈ ಕೇಳಿದರು.

ಶಿವಮೊಗ್ಗ: ನಿನ್ನೆ ಪೇಪರ್ ಟೌನ್ ಭದ್ರಾವತಿಯಲ್ಲಿ ಬಿವೈ ರಾಘವೇಂದ್ರ (BY Raghavendra) ಪರ ಪ್ರಚಾರ ಮಾಡಿದ ಬಳಿಕ ಪತ್ರಿಕಾ ಗೋಷ್ಟಿ ನಡೆಸಿ ಮಾತಾಡಿದ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ (K Annamalai) ಪಕ್ಷದ ವಿರುದ್ಧ ಹಿರಿಯ ನಾಯಕ ಬಂಡಾಯವೆದ್ದಿರುವುದು ದುರದೃಷ್ಟಕರ ಎಂದು ಹೇಳಿದರು. ಬಿಜೆಪಿ ಒಂದು ದೊಡ್ಡ ಕುಟುಂಬವಿದ್ದಂತೆ (large family) ಮತ್ತು ಎಲ್ಲರ ಮೇಲೂ ಅವರ ಸಾಮರ್ಥ್ಯಕ್ಕನುಗುಣವಾದ ಜವಾಬ್ದಾರಿಗಳಿರುತ್ತವೆ, ಅವಗಳನ್ನು ನಿಭಾಯಿಸಬೇಕಾಗುತ್ತದೆ. ತಮಿಳುನಾಡುನಲ್ಲಿ ತಾನು ಮೂರು ವಾರಗಳ ಕಡು ಬಿಸಿಲಲ್ಲಿ ಪ್ರತಿದಿನ 18 ತಾಸುಗಳ ಕಾಲ ಕೆಲಸ ಮಾಡಿ, ಅಲ್ಲಿ ಚುನಾವಣೆ ಮುಗಿಯುತ್ತಿದ್ದಂತೆ ಕರ್ನಾಟಕಕ್ಕೆ ಬಂದೆ, ಇದು ಚುನಾವಣಾ ಸಮಯ, ರೆಸ್ಟ್ ಮಾಡಲು ಅವಕಾಶವಿಲ್ಲ ಎಂದು ಅಣ್ಣಾಮಲೈ ಹೇಳಿದರು. ಚುನಾವಣೆಗಾಗಿ ಟಿಕೆಟ್ ಹಂಚುವಾಗ ಸ್ವಲ್ಪ ಹೆಚ್ಚು ಕಡಿಮೆಯಾಗುತ್ತೆ ಮತ್ತು ಅದು ಇನ್ನೊಂದು ಚುನಾವಣೆಯಲ್ಲಿ ಸರಿಹೋಗುತ್ತದೆ. ಅಸೆಂಬ್ಲಿ ಚುನಾವಣೆಯಲ್ಲಿ ಈಶ್ವರಪ್ಪನವರಿಗೆ ಟಿಕೆಟ್ ಮಿಸ್ ಆದಾಗ ಖುದ್ದು ಪ್ರಧಾನಿ ಮೋದಿಯವರು ಫೋನ್ ಮಾಡಿ ಸಮಾಧಾನ ಹೇಳಿದ್ದರು, ದೇಶದಲ್ಲಿ ಮೋದಿಯವರು ಎಷ್ಟು ಜನಕ್ಕೆ ಹಾಗೆ ಫೋನ್ ಮಾಡುತ್ತಾರೆ? ಈಶ್ವರಪ್ಪ ಮೇಲೆ ಗೌರವ ಇರುವ ಕಾರಣಕ್ಕೆ ಫೋನ್ ಮಾಡಿದ್ದು ತಾನೇ? ಈಗ ನಡೆಯುತ್ತಿರುವುದು ಲೋಕಲ್ ಚುನಾವಣೆಯಲ್ಲ, ಮೋದಿಯವರಿಗಾಗಿ ಅದು ನಡೆಯುತ್ತಿದೆ, ನಾವೆಲ್ಲ ಅವರಿಗಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಅಣ್ಣಾಮಲೈ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  K. Annamalai: ನೇಹಾ ಕೊಲೆ ಬಗ್ಗೆ ಕೆ ಅಣ್ಣಾಮಲೈ ಮಾತು: ಕಾಂಗ್ರೆಸ್​ ವಿರುದ್ಧ ವಾಗ್ದಾಳಿ

Follow us on