ಹುಬ್ಬಳ್ಳಿಯಲ್ಲಿ ಕಳ್ಳಿಯರ ಗುಂಪು ಉಪಾಯದಿಂದ ಚಿನ್ನದ ಗಟ್ಟಿಯನ್ನು ಕಳುವು ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ!

ಹುಬ್ಬಳ್ಳಿಯಲ್ಲಿ ಕಳ್ಳಿಯರ ಗುಂಪು ಉಪಾಯದಿಂದ ಚಿನ್ನದ ಗಟ್ಟಿಯನ್ನು ಕಳುವು ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 22, 2022 | 1:53 PM

ತಮ್ಮ ದುಪ್ಪಟ್ಟಾಗಳಿಂದ ಮಾಲೀಕನ ನೋಟವನ್ನು ಮರೆಮಾಡಿ ತಮ್ಮ ಗುಂಪಿನಲ್ಲಿರುವ ಒಬ್ಬ ಬಾಲಕಿಯ ಮೂಲಕ 200 ಗ್ರಾಂ ಚಿನ್ನದ ಗಟ್ಟಿಯನ್ನು ಲಪಟಾಯಿಸಿ ಮೆತ್ತಗೆ ಅಲ್ಲಿಂದ ಜಾರಿಕೊಳ್ಳುತ್ತಾರೆ.

ಹುಬ್ಬಳ್ಳಿ: ಇದು ಕಳ್ಳತನದ ಹೊಸ ಮಾದರಿ ಮಾರಾಯ್ರೇ. ಹುಬ್ಬಳ್ಳಿಯ ಗಂಟಿಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಚಿನ್ನಾಭರಣ ಅಂಗಡಿಯೊಂದಕ್ಕೆ (jewelry shop) ಭಿಕ್ಷೆ ಬೇಡುವ ನೆಪದಲ್ಲಿ ನುಗ್ಗುವ ಮಹಾ ಕಳ್ಳಿಯರ (thieves) ಗುಂಪೊಂದು ಮೊದಲು ಅಂಗಡಿ ಮಾಲೀಕನ (shop owner) ಗಮನ ಬೇರೆಡೆ ಸೆಳೆಯುತ್ತದೆ. ಆಮೇಲೆ ತಮ್ಮ ದುಪ್ಪಟ್ಟಾಗಳಿಂದ ಮಾಲೀಕನ ನೋಟವನ್ನು ಮರೆಮಾಡಿ ತಮ್ಮ ಗುಂಪಿನಲ್ಲಿರುವ ಒಬ್ಬ ಬಾಲಕಿಯ ಮೂಲಕ 200 ಗ್ರಾಂ ಚಿನ್ನದ ಗಟ್ಟಿಯನ್ನು ಲಪಟಾಯಿಸಿ ಮೆತ್ತಗೆ ಅಲ್ಲಿಂದ ಜಾರಿಕೊಳ್ಳುತ್ತಾರೆ. ತಾವು ಎಸಗುತ್ತಿರುವ ಅಪರಾಧ ಸಿಸಿಟಿವಿ ಕೆಮೆರಾದಲ್ಲಿ ಸೆರೆಯಾಗುತ್ತಿದೆ ಎಂಬ ಪ್ರಜ್ಞೆ ಕೂಡ ಅವರಿಗಿಲ್ಲ.