ನಟನಾಗಿ ಚಿತ್ರರಂಗಕ್ಕೆ ಬಂದ ತರುಣ್​ ಸುಧೀರ್​ ನಂತರ ನಿರ್ದೇಶಕನಾಗಿದ್ದು ಯಾಕೆ? ಅವರೇ ಕೊಟ್ರು ಉತ್ತರ

| Updated By: ಮದನ್​ ಕುಮಾರ್​

Updated on: Jan 02, 2024 | 6:23 PM

‘ನನ್ನ ಜೀವನದಲ್ಲಿ ನಾನು ಪ್ಲ್ಯಾನ್​ ಮಾಡಿಲ್ಲ. ಚಿತ್ರರಂಗದಲ್ಲಿ ಕೆಲಸ ಮಾಡಬೇಕು ಎಂಬುದಷ್ಟೇ ನನಗೆ ಗೊತ್ತಿರುವುದು. ನಮ್ಮ ತಂದೆ ಇಲ್ಲಿ ಸೇವೆ ಮಾಡಿದ್ದಾರೆ. ಅವರ ಹೆಸರಿಗೆ ಧಕ್ಕೆ ಬಾರದಂತೆ ನಡೆದುಕೊಳ್ಳಬೇಕು’ ಎಂದು ತರುಣ್​ ಸುಧೀರ್​ ಹೇಳಿದ್ದಾರೆ. ‘ಕಾಟೇರ’ ಚಿತ್ರದ ಯಶಸ್ಸಿನಿಂದ ಅವರ ಡಿಮ್ಯಾಂಡ್​ ಹೆಚ್ಚಾಗಿದೆ.

ಕನ್ನಡ ಚಿತ್ರರಂಗದಲ್ಲಿ ತರುಣ್​ ಸುಧೀರ್​ (Tharun Sudhir) ಅವರು ಭರವಸೆಯ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ. ಅವರು ನಿರ್ದೇಶನ ಮಾಡಿರುವ ‘ಕಾಟೇರ’ ಸಿನಿಮಾ (Kaatera) ಸೂಪರ್​ ಹಿಟ್​ ಆಗಿದೆ. ಅಚ್ಚರಿ ಎಂದರೆ ತರುಣ್​ ಸುಧೀರ್ ಅವರು ಮೊದಲು ಚಿತ್ರರಂಗಕ್ಕೆ ಕಾಲಿಟ್ಟಿದ್ದು ನಟನಾಗಬೇಕು ಎಂಬ ಆಸೆಯಿಂದ. ಆದರೆ ಅದು ಅವರಿಗೆ ಫಲ ನೀಡಲಿಲ್ಲ. ನಂತರ ಅವರ ಗಮನ ನಿರ್ದೇಶನದತ್ತ ಹರಿಯಿತು. ‘ಕಾಟೇರ’ ಸಕ್ಸಸ್​ ಮೀಟ್​ನಲ್ಲಿ ಮಾತಿಗೆ ಸಿಕ್ಕ ಅವರು ಆ ವಿಚಾರ ನೆನಪಿಸಿಕೊಂಡಿದ್ದಾರೆ. ‘ನನ್ನ ಜೀವನದಲ್ಲಿ ನಾನು ಪ್ಲ್ಯಾನ್​ ಮಾಡಿಲ್ಲ. ಚಿತ್ರರಂಗದಲ್ಲಿ ಕೆಲಸ ಮಾಡಬೇಕು ಎಂಬುದಷ್ಟೇ ನನಗೆ ಗೊತ್ತಿರುವುದು. ನಮ್ಮ ತಂದೆ ಇಲ್ಲಿ ಸೇವೆ ಮಾಡಿದ್ದಾರೆ. ಅವರ ಹೆಸರಿಗೆ ಧಕ್ಕೆ ಬಾರದಂತೆ ನಡೆದುಕೊಳ್ಳಬೇಕು. ನಟನಾಗಿ ಒಂದಷ್ಟು ವರ್ಷ ಶ್ರಮಪಟ್ಟೆ. ಆದರೆ ಅದು ನನಗೆ ವಕೌರ್ಟ್​ ಆಗಲಿಲ್ಲ. ನಿರ್ದೇಶನ ಟ್ರೈ ಮಾಡು ಅಂತ ಸ್ನೇಹಿತರು ಹೇಳಿದರು. ಆಗ ಸಹ-ನಿರ್ದೇಶಕನಾಗಿ ಕೆಲಸ ಮಾಡಿ ಅನುಭವ ಪಡೆದೆ. ಆಮೇಲೆ ‘ಚೌಕ’ ಚಿತ್ರ ನಿರ್ದೇಶನ ಮಾಡಿದೆ’ ಎಂದು ತರುಣ್​ ಸುಧೀರ್​ ಅವರು ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.