ಈ ಕಟ್ಟಡದ ಮುಂಭಾಗ ರೀಲ್ಸ್ ಮಾಡಿ ವಿವಾದ ಮೈಮೇಲೆ ಎಳೆದುಕೊಂಡ ರಜತ್
‘ಬಿಗ್ ಬಾಸ್ ಕನ್ನಡ’ ಶೋ ಮೂಲಕ ಫೇಮಸ್ ಆದ ರಜತ್ ಕಿಶನ್ ಈಗ ಮತ್ತೆ ವಿವಾದದ ಕೇಂದ್ರಬಿಂದು ಆಗಿದ್ದಾರೆ. ಮೈಸೂರಿನ ಪಾರಂಪರಿಕ ಕಟ್ಟಡದ ಮುಂದೆ ಸಿಗರೇಟ್ ಸೇದುತ್ತಾ ಬಿಂದಾಸ್ ಫೋಟೋ ಶೂಟ್ ಮಾಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..
ಇದು ಮೈಸೂರಿನ ಹಳೇ ಜಿಲ್ಲಾಧಿಕಾರಿ ಕಚೇರಿ ಕಟ್ಟಡ. ಇತಿಹಾಸದ ಸ್ಮಾರಕ, ಸರ್ಕಾರಿ ಆಸ್ತಿ, ಪಾರಂಪರಿಕ ಮಹತ್ವ ಹೊಂದಿರುವ ಕಟ್ಟಡ. ಇದೇ ಕಟ್ಟಡದ ಮುಂದೆ ಬಿಗ್‌ಬಾಸ್ ಖ್ಯಾತಿಯ ರಜತ್ (Rajath Kishan) ಸಿಗರೇಟ್ ಸೇದುತ್ತಾ, ಕಾರಿನಿಂದ ಇಳಿಯುತ್ತಾ ವಿಲನ್ ಲುಕ್‌ನಲ್ಲಿ ವಿಡಿಯೋ ಶೂಟ್ ಮಾಡಿದ್ದಾರೆ. ಕಪ್ಪು ಉಡುಪು, ಬಿಂದಾಸ್ ಸ್ಟೈಲ್, ಬಾಯಲ್ಲಿ ಸಿಗರೇಟ್ ಇಟ್ಟುಕೊಂಡು ರೀಲ್ಸ್ ಮತ್ತು ವಿಡಿಯೋಗಳನ್ನು ತಮ್ಮ ಅಧಿಕೃತ ಇನ್ಸ್ಟಾಗ್ರಾಂ ಖಾತೆಗೆ ಅಪ್‌ಲೋಡ್ ಮಾಡಿದ್ದಾರೆ. ದೂರು ಸ್ವೀಕರಿಸಿರುವ ಲಕ್ಷ್ಮಿಪುರಂ ಪೊಲೀಸರು ಪ್ರಾಥಮಿಕವಾಗಿ ಎನ್‌ಸಿಆರ್ ದಾಖಲಿಸಿದ್ದಾರೆ. ಅನುಮತಿ ಇಲ್ಲದೇ ಶೂಟಿಂಗ್ ನಡೆದಿದೆಯೇ? ಸಾರ್ವಜನಿಕ ಆಸ್ತಿಗೆ ಧಕ್ಕೆ ಆಗಿದೆಯೇ? ಕಾನೂನು ಉಲ್ಲಂಘನೆ ಆಗಿದೆಯೇ ಎನ್ನುವ ಬಗ್ಗೆ ಪರಿಶೀಲನೆ ನಡೆಯುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
