AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಗರೇಟ್ ಸೇದಿದ್ರೆ ರಜತ್ ದೊಡ್ಡ ಹೀರೋನಾ? ದೂರು ನೀಡಿದ ಕಾರ್ಯಕರ್ತರ ಪ್ರತಿಕ್ರಿಯೆ

ಸಿಗರೇಟ್ ಸೇದಿದ್ರೆ ರಜತ್ ದೊಡ್ಡ ಹೀರೋನಾ? ದೂರು ನೀಡಿದ ಕಾರ್ಯಕರ್ತರ ಪ್ರತಿಕ್ರಿಯೆ

ರಾಮ್​, ಮೈಸೂರು
| Edited By: |

Updated on: Feb 05, 2026 | 4:52 PM

Share

‘ರೀಲ್ಸ್ ಮೂಲಕ ಸಮಾಜಕ್ಕೆ ಸಂದೇಶ ನೀಡಬೇಕು. ರಾಜ್​ಕುಮಾರ್ ಸಿನಿಮಾಗಳಲ್ಲಿ ಉತ್ತಮ ಸಂದೇಶ ಇರುತ್ತಿತ್ತು. ಆದರೆ ರಜತ್ ಅವರು ಇಂಥ ರೀಲ್ಸ್ ಮಾಡಿದ್ದು ಸರಿಯಲ್ಲ. ಕೆಟ್ಟ ಸಂದೇಶ ನೀಡುವವರ ಮೇಲೆ ಕ್ರಮ ತೆಗೆದುಕೊಳ್ಳಬೇಕು’ ಎಂದು ‘ಕರ್ನಾಟಕ ಸೇನಾ ಪಡೆ’ ಕಾರ್ಯಕರ್ತರು ದೂರು ಹೇಳಿದ್ದಾರೆ. ವಿಡಿಯೋ ನೋಡಿ..

ನಟ, ಮಾಜಿ ಬಿಗ್ ಬಾಸ್ ಸ್ಪರ್ಧಿ ರಜತ್ (Rajath Kishan) ಅವರು ಈ ಮೊದಲು ಮಚ್ಚು ಹಿಡಿದು ರೀಲ್ಸ್ ಮಾಡಿದ್ದಕ್ಕೆ ಸಂಕಷ್ಟ ಎದುರಿಸುವಂತಾಗಿತ್ತು. ಈಗ ಅವರು ಪಾರಂಪರಿಕ ಕಟ್ಟಡದ ಎದುರು ಸಿಗರೇಟ್ ಸೇದಿದ್ದಕ್ಕೆ ದೂರು ದಾಖಲಾಗಿದೆ. ‘ಕರ್ನಾಟಕ ಸೇನಾ ಪಡೆ’ (Karnataka Sena Pade) ಕಾರ್ಯಕರ್ತರು ದೂರು ನೀಡಿದ್ದಾರೆ. ಈ ಬಗ್ಗೆ ಕಾರ್ಯಕರ್ತರು ಪ್ರತಿಕ್ರಿಯೆ ನೀಡಿದ್ದಾರೆ. ‘ಮೈಸೂರಿನ ಪಾರಂಪರಿಕ ಕಟ್ಟಡ ಆಗಿರುವ ನಮ್ಮ ಡಿಸಿ ಕಚೇರಿ ಎದುರು ರಜತ್ ಸಿಗರೇಟ್ ಸೇದಿ, ರೀಲ್ಸ್ ಮಾಡಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ. ಸಾರ್ವಜನಿಕವಾಗಿ ಸಿಗರೇಟ್ ಸೇದುವುದು ಅಪರಾಧ. ಅಂಥದ್ದರಲ್ಲಿ ಸೆಲೆಬ್ರಿಟಿ ಆದ ಇವರು ಈ ರೀತಿ ಮಾಡಿದ್ದು ಎಷ್ಟರಮಟ್ಟಿಗೆ ಸರಿ? ಇದರಿಂದ ಯುವ ಜನತೆಗೆ ಏನು ಸಂದೇಶ ನೀಡುತ್ತಾರೆ? ಸಿಗರೇಟ್ ಸೇದಿದರೆ ಇವರೇನೂ ದೊಡ್ಡ ಹೀರೋ ಅಂದುಕೊಂಡಿದ್ದಾರಾ? ರಜತ್ (Rajath)​ ಅವರಿಗೆ ಈ ರೀತಿ ಫೋಟೋಶೂಟ್ ಮಾಡಲು ಅನುಮತಿ ಕೊಟ್ಟವರು ಯಾರು? ರಜತ್ ಮೇಲೆ ಕ್ರಮ ತೆಗೆದುಕೊಳ್ಳಬೇಕು’ ಎಂದು ಕಾರ್ಯಕರ್ತರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.