ನಮ್ಮ ನೀರು-ನಮ್ಮ ಹಕ್ಕು ಎಂದು ಬಿರಿಯಾನಿ ತಿನ್ನುತ್ತಾ ಪಾದಯಾತ್ರೆ ಮಾಡಿದವರು ಇಂದು ತಮಿಳುನಾಡಿಗೆ ನೀರು ಬಿಡುತ್ತಿದ್ದಾರೆ: ಎಚ್ಡಿ ಕುಮಾರಸ್ವಾಮಿ ಆಕ್ರೋಶ
ಕಾಂಗ್ರೆಸ್ ನಾಯಕರು ಸಂಗಮ ಸುತತಮುತ್ತ ನಮ್ಮ ನೀರು-ನಮ್ಮ ಹಕ್ಕು (Namma Neeru Namma Hakku) ಎಂದು ನಡೆಸಿದ ಪಾದಯಾತ್ರೆ (Mekedatu Padayatra) ಬಿರಿಯಾನಿ ಮತ್ತು ಚಿಕನ್ ಲೆಗ್ ಪೀಸ್ ತಿನ್ನುವುದಕ್ಕಾಗೇ ಹೊರತು ಬೇರೆ ಯಾವುದೇ ಪುರುಷಾರ್ಥಕ್ಕಲ್ಲ -ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವ್ಯಂಗ್ಯ
ಕಾಂಗ್ರೆಸ್ ನಾಯಕರಾದ ಡಿಕೆ ಶಿವಕುಮಾರ್ ಮೇಕೆದಾಟು ಯೋಜನೆ ಆಗ್ರಹಿಸಿ ಕನಕಪುರ ಸಂಗಮ ಸುತತಮುತ್ತ ನಮ್ಮ ನೀರು-ನಮ್ಮ ಹಕ್ಕು (Namma Neeru Namma Hakku) ಎಂದು ನಡೆಸಿದ ಪಾದಯಾತ್ರೆ (Mekedatu Padayatra) ಬಿರಿಯಾನಿ ಮತ್ತು ಚಿಕನ್ ಲೆಗ್ ಪೀಸ್ ತಿನ್ನುವುದಕ್ಕಾಗೇ ಹೊರತು ಬೇರೆ ಯಾವುದೇ ಪುರುಷಾರ್ಥಕ್ಕಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ನಿನ್ನೆ ಭಾನುವಾರ ತಮ್ಮ ಬಿಡದಿ ನಿವಾಸದದಲ್ಲಿ ರಾಮನಗರ ಜೆಡಿಎಸ್ ಮುಖಂಡರ ಸಭೆಯಲ್ಲಿ ಮಾತನಾಡಿದ H.D. ಕುಮಾರಸ್ವಾಮಿ ಹಾಲಿ ಕಾಂಗ್ರೆಸ್ ಸರ್ಕಾರ ಪತನ ಗ್ಯಾರಂಟಿ, ಡಿಕೆ ಶಿವಕುಮಾರ್ ತಿಹಾರ್ ಜೈಲಿಗೆ ಹೋಗೋದು ಖಚಿತ.. ನಮ್ಮನ್ನ ಹಾಸನಕ್ಕೆ ಕಳಿಸಬಹುದು, ಆದರೆ ಅವರು ತಿಹಾರ್ಗೆ ಓಡುವ ಕಾಲ ಹತ್ತಿರವಿದೆ. ಡಿ.ಕೆ.ಶಿವಕುಮಾರ್ ಒಮ್ಮೆ ತಿಹಾರ್ ಜೈಲು ನೋಡಿಕೊಂಡು ಬಂದಿದ್ದಾರೆ.. ಮುಂದೆ ಡಿಕೆಶಿವಕುಮಾರ್ ಶಾಶ್ವತವಾಗಿ ತಿಹಾರ್ಗೆ ಹೋದರೂ ಅಚ್ಚರಿ ಅಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ