ನಮ್ಮ ನೀರು-ನಮ್ಮ ಹಕ್ಕು ಎಂದು ಬಿರಿಯಾನಿ ತಿನ್ನುತ್ತಾ ಪಾದಯಾತ್ರೆ ಮಾಡಿದವರು ಇಂದು ತಮಿಳುನಾಡಿಗೆ ನೀರು ಬಿಡುತ್ತಿದ್ದಾರೆ: ಎಚ್​ಡಿ ಕುಮಾರಸ್ವಾಮಿ ಆಕ್ರೋಶ

|

Updated on: Oct 09, 2023 | 7:09 PM

ಕಾಂಗ್ರೆಸ್ ನಾಯಕರು ಸಂಗಮ ಸುತತಮುತ್ತ  ನಮ್ಮ ನೀರು-ನಮ್ಮ ಹಕ್ಕು (Namma Neeru Namma Hakku) ಎಂದು ನಡೆಸಿದ ಪಾದಯಾತ್ರೆ (Mekedatu Padayatra) ಬಿರಿಯಾನಿ ಮತ್ತು ಚಿಕನ್ ಲೆಗ್ ಪೀಸ್ ತಿನ್ನುವುದಕ್ಕಾಗೇ ಹೊರತು ಬೇರೆ ಯಾವುದೇ ಪುರುಷಾರ್ಥಕ್ಕಲ್ಲ -ಮಾಜಿ ಮುಖ್ಯಮಂತ್ರಿ ಹೆಚ್ ಡಿ ​ ಕುಮಾರಸ್ವಾಮಿ ವ್ಯಂಗ್ಯ

ಕಾಂಗ್ರೆಸ್ ನಾಯಕರಾದ ಡಿಕೆ ಶಿವಕುಮಾರ್ ಮೇಕೆದಾಟು ಯೋಜನೆ ಆಗ್ರಹಿಸಿ ಕನಕಪುರ ಸಂಗಮ ಸುತತಮುತ್ತ  ನಮ್ಮ ನೀರು-ನಮ್ಮ ಹಕ್ಕು (Namma Neeru Namma Hakku) ಎಂದು ನಡೆಸಿದ ಪಾದಯಾತ್ರೆ (Mekedatu Padayatra) ಬಿರಿಯಾನಿ ಮತ್ತು ಚಿಕನ್ ಲೆಗ್ ಪೀಸ್ ತಿನ್ನುವುದಕ್ಕಾಗೇ ಹೊರತು ಬೇರೆ ಯಾವುದೇ ಪುರುಷಾರ್ಥಕ್ಕಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ​ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ನಿನ್ನೆ ಭಾನುವಾರ ತಮ್ಮ ಬಿಡದಿ ನಿವಾಸದದಲ್ಲಿ ರಾಮನಗರ ಜೆಡಿಎಸ್​​ ಮುಖಂಡರ ಸಭೆಯಲ್ಲಿ ಮಾತನಾಡಿದ H.D. ಕುಮಾರಸ್ವಾಮಿ ಹಾಲಿ ಕಾಂಗ್ರೆಸ್​​ ಸರ್ಕಾರ ಪತನ ಗ್ಯಾರಂಟಿ, ಡಿಕೆ ಶಿವಕುಮಾರ್​​ ತಿಹಾರ್​ ಜೈಲಿಗೆ ಹೋಗೋದು ಖಚಿತ.. ನಮ್ಮನ್ನ ಹಾಸನಕ್ಕೆ ಕಳಿಸಬಹುದು, ಆದರೆ ಅವರು ತಿಹಾರ್​ಗೆ ಓಡುವ ಕಾಲ ಹತ್ತಿರವಿದೆ. ಡಿ.ಕೆ.ಶಿವಕುಮಾರ್ ಒಮ್ಮೆ ತಿಹಾರ್​​ ಜೈಲು ನೋಡಿಕೊಂಡು ಬಂದಿದ್ದಾರೆ.. ಮುಂದೆ ಡಿಕೆಶಿವಕುಮಾರ್​ ಶಾಶ್ವತವಾಗಿ ತಿಹಾರ್​ಗೆ ಹೋದರೂ ಅಚ್ಚರಿ ಅಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Oct 09, 2023 07:08 PM