ಯಾರು ಧರ್ಮವನ್ನು ರಕ್ಷಿಸುತ್ತಾರೋ ಧರ್ಮ ಅವರನ್ನು ಕಾಪಾಡುತ್ತದೆ: ಡಿಕೆ ಶಿವಕುಮಾರ್
ಹಾಗೆ ನೋಡಿದರೆ ಶಿವಕುಮಾರ್ ಅವರು ರಾಜಕೀಯದ ಬಗ್ಗೆ ಮಾತಾಡಲು ಇಷ್ಟಪಡಲಿಲ್ಲ. ಆದರೆ ಅವರು ಶೃಂಗೇರಿ ಮಠಕ್ಕೆ ಬಂದಾಗೆಲ್ಲ ರಾಜಕೀಯ ಸನ್ನಿವೇಶಗಳು ಬದಲಾದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ಯಾವ ರಾಜಕೀಯ ತಿರುವುಗಳೂ ಇಲ್ಲ, ತಾನು ಮತ್ತು ಸಿದ್ದರಾಮಯ್ಯ ಐದು ವರ್ಷಗಳ ಕಾಲ ಪಕ್ಷದ ಹೈಕಮಾಂಡ್ ಹೇಳಿದ ಹಾಗೆ ಹಾಗೆ ಸರ್ಕಾರವನ್ನು ನಡೆಸಿಕೊಂಡು ಹೋಗುತ್ತೇವೆ ಎಂದರು.
ಚಿಕ್ಕಮಗಳೂರು: ಶೃಂಗೇರಿ ಶಾರದಾ ಪೀಠದ ಭಾರತೀತೀರ್ಥ ಸ್ವಾಮೀಜೀಯವರ 50ನೇ ವರ್ಷದ ಸನ್ಯಾಸ ಸ್ವೀಕಾರ ಅಂಗವಾಗಿ ಏರ್ಪಡಿಸಲಾಗಿರುವ ಸುವರ್ಣ ಭಾರತೀ, ಸುವರ್ಣ ಸ್ತೋತ್ರ ತ್ರಿವೇಣಿ ಕಾರ್ಯಕ್ರಮದಲ್ಲಿ ಭಾಗಿಯಾದ ಡಿಸಿಎಂ ಡಿಕೆ ಶಿವಕುಮಾರ್, ಇಲ್ಲಿನ ಮೆಣಸೆ ಹೆಲಿಪ್ಯಾಡ್ ನಲ್ಲಿ ಮಾತಾಡುವಾಗ ರಾಜಕೀಯದ ಬದಲು ಧಾರ್ಮಿಕತೆ ಮತ್ತು ಆಧ್ಯಾತ್ಮಕ್ಕೆ ಹೆಚ್ಚು ಒತ್ತು ನೀಡಿದರು. 50 ವರ್ಷಗಳ ಹಿಂದೆ ಸ್ವಾಮೀಜಿವರು ಪ್ರಾಪಂಚಿಕ ವೈಭೋಗಗಳನ್ನು ತ್ಯಜಿಸಿ ಸನ್ಯಾಸ ಸ್ವೀಕರಿಸಿದ್ದರ ಬಗ್ಗೆ ಮಾತಾಡಿದ ಶಿವಕುಮಾರ್, ಧರ್ಮ ಕಾಪಾಡುವವರನ್ನು ಧರ್ಮವೇ ರಕ್ಷಿಸುತ್ತದೆ, ಧರ್ಮೋ ರಕ್ಷತಿ ರಕ್ಷಿತಃ ಎಂದರು. ಶಾರದಾ ಪೀಠದ ಮೇಲೆ ತನಗೆ ವಿಶೇಷವಾದ ನಂಬಿಕೆ ಇದೆ, ಸರ್ಕಾರದ ಪ್ರತಿನಿಧಿ ಹಾಗೂ ವೈಯಕ್ತಿಕವಾಗಿ ಇಲ್ಲಿಗೆ ಬಂದಿದ್ದೇನೆ, ತಾನು ಧರ್ಮದ ಮೇಲೆ ನಂಬಿಕೆ ಇಟ್ಟವನು ಪ್ರತಿದಿನ ಪೂಜೆ ಮಾಡ್ತೇನೆ ಎಂದು ಅವರು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಶೃಂಗೇರಿಯಲ್ಲಿ ಕೇಳಿಬಂತು ‘ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್’ ಘೋಷಣೆ: ಏನಂದ್ರು ಡಿಸಿಎಂ?