PM Modi In Bengaluru: ಕೋವಿಡ್-19 ಪಿಡುಗಿನಿಂದಾಗಿ ವಿಶ್ವವೇ ಸ್ತಬ್ಧಗೊಂಡಿದ್ದರೂ ಕೆಂಪೇಗೌಡ ಪ್ರತಿಮೆ ನಿರ್ಮಾಣ ಕಾರ್ಯ ನಿಂತಿರಲಿಲ್ಲ: ಶ್ರೀ ನಿರ್ಮಲಾನಂದ ಸ್ವಾಮೀಜಿ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 11, 2022 | 2:43 PM

ಕೆಂಪೇಗೌಡರ ಹಾಗೆ ಪ್ರಧಾನಿ ಮೋದಿಯವರು ಸಹ ಜ್ಞಾನದ ಜೊತೆಗೆ ಕರ್ಮಜ್ಞಾನವನ್ನು ಬೆರೆಸಿ ಆಡಳಿತ ನಡೆಸುತ್ತಿದ್ದಾರೆ ಎಂದು ಸ್ವಾಮೀಜಿ ಹೇಳಿದರು.

ಬೆಂಗಳೂರು: ನಾಡಪ್ರಭು ಕೆಂಪೇಗೌಡರ (Nadagowda Kempegowda) ಪ್ರತಿಮೆ ಅನಾವರಣ ನಡೆದ ನಂತರ ಆಯೋಜಿಸಲಾಗಿದ್ದ ಸಮಾವೇಶದಲ್ಲಿ ಮಾತಾಡಿದ ಆದಿ ಚುಂಚನಗುರಿ ಮಠದ ಶ್ರೀ ನಿರ್ಮಲಾನಂದ ಸ್ವಾಮೀಜಿ (Sri Nirmalanada Swamiji) ಅವರು 2020 ಜೂನ್ 27 ರಂದು ಕೊರೋನಾ ಪಿಡುಗು (pandemic) ಉತ್ತುಂಗಲ್ಲಿದ್ದ ಅವಧಿಯಲ್ಲಿ ಕೆಂಪೇಗೌಡ ಪ್ರತಿಮೆ ನಿರ್ಮಾಣಕ್ಕೆ ಅಸ್ತಿವಾರ ಹಾಕಲಾಗಿತ್ತು, ಪಿಡುಗುನಿಂದಾಗಿ ಪ್ರಪಂಚೆದೆಲ್ಲೆಡೆ ಕೆಲಸ ಕಾರ್ಯ, ಜನಜೀವನ ಸ್ಥಗಿತಗೊಂಡಿದ್ದರೂ ಪ್ರಗತಿಯ ಪ್ರತಿಮೆ ನಿರ್ಮಾಣ ಕಾರ್ಯ ಮಾತ್ರ ನಿಲ್ಲದೆ ಎರಡು ವರ್ಷಗಳಲ್ಲಿ ಸಂಪೂರ್ಣಗೊಂಡು ಇವತ್ತು ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಂದ ಅನಾವರಣಗೊಂಡಿದೆ ಎಂದು ಹೇಳಿದರು. ಕೆಂಪೇಗೌಡರ ಹಾಗೆ ಪ್ರಧಾನಿ ಮೋದಿಯವರು ಸಹ ಜ್ಞಾನದ ಜೊತೆಗೆ ಕರ್ಮಜ್ಞಾನವನ್ನು ಬೆರೆಸಿ ಆಡಳಿತ ನಡೆಸುತ್ತಿದ್ದಾರೆ ಎಂದು ಸ್ವಾಮೀಜಿ ಹೇಳಿದರು.