Karnataka legislative assembly session: ವಿಪಕ್ಷಗಳ ಏನಿಲ್ಲ ಏನಿಲ್ಲ ಧರಿಣಿ ಮಧ್ಯೆ 3 ವಿಧೇಯಕ ಮಂಡಿಸಿದ ಸರ್ಕಾರ

|

Updated on: Jul 20, 2024 | 9:53 AM

ಕರ್ನಾಟಕ ವಿಧಾನ ಮಂಡಲ ಮುಂಗಾರು ಅಧಿವೇಶನ ಆರಂಭವಾಗಿದ್ದು, ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಮೂರನೇ ದಿನ ಸದನ ವಾಲ್ಮೀಕಿ ಹಗರಣ ಚರ್ಚೆಯಲ್ಲೇ ಕಳೆದು ಹೋಯ್ತು. ಇಂದು ವಿಪಕ್ಷಗಳ ಪ್ರತಿಭಟನೆ ನಡುವೆ ಮೂರು ವಿಧೇಯಕಗಳು ಮಂಡನೆಯಾದವು.

ಬೆಂಗಳೂರು, ಜುಲೈ 19: ಕರ್ನಾಟಕ ವಿಧಾನ ಮಂಡಲ ಮುಂಗಾರು ಅಧಿವೇಶನ (Karnataka Legislative Assembly Session) ಆರಂಭವಾಗಿದ್ದು, ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಮೂರನೇ ದಿನ ಕೂಡ ಸದನ ವಾಲ್ಮೀಕಿ ಹಗರಣ ಚರ್ಚೆಯಲ್ಲೇ ಕಳೆದು ಹೋಯ್ತು. ಇಂದು (ಜು.19) ಅಧಿವೇಶನ ಆರಂಭವಾಗುತ್ತಿದ್ದಂತೆ ವಿಪಕ್ಷ ಬಿಜೆಪಿ-ಜೆಡಿಎಸ್​ ನಾಯಕರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಸದನ ಗದ್ದಲದಿಂದ ಕೂಡಿತು. ಗದ್ದಲದ ನಡುವೆಯೇ ಸದನದಲ್ಲಿ ಸರ್ಕಾರ ಮೂರು ವಿಧೇಯಕಗಳನ್ನು ಮಂಡನೆ ಮಾಡಿತು.

2024ನೇ ಸಾಲಿನ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ವಿಧೇಯಕ, 2024ನೇ ಸಾಲಿನ ವಿಧಾನಮಂಡಲ (ಅನರ್ಹತಾ ನಿವಾರಣಾ) ವಿಧೇಯಕ, ಕರ್ನಾಟಕ ಸಿನಿ & ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ವಿಧೇಯಕ ಮಂಡಿಸಲಾಯಿತು.

ಇದನ್ನೂ ಓದಿ: ಅಧಿವೇಶನ ವೇಳೆ ಮಧ್ಯಾಹ್ನದ ಕಿರು ನಿದ್ರೆಗಾಗಿ ಶಾಸಕರಿಗೆ ಪ್ರತ್ಯೇಕ ಆಸನ ವ್ಯವಸ್ಥೆ

ವಿಧೇಯಕ ಮಂಡನೆ ವೇಳೆ ವಿಪಕ್ಷಗಳು ಸರ್ಕಾರದ ವಿರುದ್ಧ ದಿಕ್ಕಾರ ಕೂಗಿದವು. ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂ. ಹಣ ನುಗ್ಗಿದ ಸರ್ಕಾರದ ವಿರುದ್ಧ ದಿಕ್ಕಾರ ಅಂತ ವಿಪಕ್ಷಗಳು ಕೂಗಿದವು. ಜೊತೆಗೆ ಏನಿಲ್ಲ ಏನಿಲ್ಲ ಸರ್ಕಾರದ ಬಳಿ ಹಣವಿಲ್ಲ, ಶಾಸಕರಿಗೆ ಅನುದಾನ ನೀಡಲು ಸರ್ಕಾರದ ಬಳಿ ಹಣವಿಲ್ಲ ಎಂದು ಹಾಡು ಹಾಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published on: Jul 19, 2024 01:27 PM