ಬೆಂಗಳೂರು: ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಆರೋಪಿಸುವ ದರಪಟ್ಟಿ ಹಿಡಿದು ಬಿಜೆಪಿ ನಾಯಕರ ಪ್ರತಿಭಟನೆ
ಬಿಜೆಪಿ ನಾಯಕರು ಪ್ರತಿಭಟನೆಗೆ ಹೊಸ ವಿಧಾನ ಹುಡುಕಿದ್ದರೆ ಚೆನ್ನಾಗಿತ್ತು. ಯಾಕೆಂದರೆ ಹೀಗೆ ದರಪಟ್ಟಿಯ ಪ್ಲಕಾರ್ಡ್ ಗಳನ್ನು ಹಿಡಿದು ಹಿಂದೆ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ಮಾಡಿದ್ದರು. ಅಸಲಿಗೆ ಕಾಂಗ್ರೆಸ್ ದರಪಟ್ಟಿಯ ಜಾಹೀರಾತುಗಳನ್ನು ಪತ್ರಿಕೆಗಳಲ್ಲೂ ಪ್ರಕಟಿಸಿದ್ದರು. ವಿಧಾನಸಭಾ ಚುನಾವಣೆಯಲ್ಲಿ ಅದು ಬಿಜೆಪಿ ಹಿನ್ನಡೆಗೆ ಕಾರಣವಾಗಿತ್ತು.
ಬೆಂಗಳೂರು: ಬಿಜೆಪಿ ನಾಯಕರು ಇಂದು ವಿಧಾನಸೌಧ ಅವರಣದಲ್ಲಿರುವ ಮಹಾತ್ಮಾ ಗಾಂಧಿ ಪ್ರತಿಮೆಯ ಕೆಳಗೆ ನಿಂತು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಇವರಲ್ಲಿ ಹೆಚ್ಚಿನವರು ವಿಧಾನ ಪರಿಷತ್ ಸದಸ್ಯರು. ಸಿಟಿ ರವಿ, ಎನ್ ರವಿಕುಮಾರ್ ಮೊದಲಾದವರನ್ನು ನೋಡಬಹುದು. ಕಾಂಗ್ರೆಸ್ ಸರ್ಕಾರ ಭ್ರಷ್ಟ ಸರ್ಕಾರ ಎಂದು ಸೂಚಿಸುವ ಹಾಗೆ ಯಾವ್ಯಾವ ಇಲಾಖೆಯಲ್ಲಿ ನೇಮಕಾತಿಗೆ, ವರ್ಗಾವಣೆಗೆ ಎಷ್ಟೆಷ್ಟು ಲಂಚ ನಡೆಯುತ್ತಿದೆ ಎನ್ನುವುದನ್ನು ಸೂಚಿಸುವ ಪ್ಲಕಾರ್ಡ್ ಗಳನ್ನು ನಾಯಕರು ಕೈಯಲ್ಲಿ ಹಿಡಿದು ಪ್ರತಿಭಟನೆ ನಡೆಸಿದರು. ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ, ರೈತ ಮತ್ತು ಶಿಕ್ಷಕರ ವಿರೋಧಿ ಸರ್ಕಾರಕ್ಕೆ ಧಿಕ್ಕಾರ, ದಲಿತ ವಿರೋಧಿ ಸರ್ಕಾರಕ್ಕೆ ಧಿಕ್ಕಾರ, ವ್ಯಾಪಾರ ವ್ಯಾಪಾರ ಎಲ್ಲದರಲ್ಲೂ ವ್ಯಾಪಾರ ಅಂತ ಘೋಷಣೆಗಳನ್ನು ಬಿಜೆಪಿ ನಾಯಕರು ಕೂಗಿದರು. ಅಬ್ಕಾರಿ ಇಲಾಖೆಯಲ್ಲಿ ಅಬ್ಕಾರಿ ನಿರೀಕ್ಷಕನ ಹುದ್ದೆಗೆ ₹ 30-50 ಲಕ್ಷ, ಅಬ್ಕಾರಿ ಕಮೀಷನರ್ ಹುದ್ದೆಗೆ ₹ 75 ಲಕ್ಷದಿಂದ 1.5 ಕೋಟಿ ರೂ. ಹೀಗೆ ಆಯಾ ಇಲಾಖೆಯಲ್ಲಿ ಎಷ್ಟೆಷ್ಟು ಲಂಚ ಪಡೆಯಲಾಗುತ್ತಿದೆ ಅನ್ನೋದನ್ನು ಪ್ಲಕಾರ್ಡ್ ಗಳ ಮೇಲೆ ಬರೆಯಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿ ನಾಯಕರ ಬೃಹತ್ ಹೋರಾಟ: ವಾಲ್ಮೀಕಿ ನಿಗಮದ ಹಗರಣ ಖಂಡಿಸಿ ಪ್ರತಿಭಟನೆ