ಬಿವೈ ರಾಘವೇಂದ್ರ ನಾಮಪತ್ರ ಸಲ್ಲಿಸುವಾಗ ಜೊತೆಗಿದ್ದಿದ್ದು ಮೂವರು ಮಾಜಿ ಮುಖ್ಯಮಂತ್ರಿಗಳು ಮತ್ತು ಸಹಸ್ರಾರು ಕಾರ್ಯಕರ್ತರು

|

Updated on: Apr 18, 2024 | 2:32 PM

ದೃಶ್ಯಗಳಲ್ಲಿ ಕಾಣುವ ಹಾಗೆ ತೆರೆದ ವಾಹನದಲ್ಲಿ ಮೂವರು ಮಾಜಿ ಮುಖ್ಯಮಂತ್ರಿಗಳಿದ್ದಾರೆ-ಬಿಎಸ್ ಯಡಿಯೂರಪ್ಪ, ಹೆಚ್ ಡಿ ಕುಮಾರಸ್ವಾಮಿ ಮತ್ತು ಬಸವರಾಜ ಬೊಮ್ಮಾಯಿ. ಅವರೊಂದಿಗೆ ಶಿವಮೊಗ್ಗ ಶಾಸಕ ಚನ್ನಬಸ್ಸಪ್ಪ ಮತ್ತು ಮಾಜಿ ಶಾಸಕ ಹಾಗೂ ಶಿವಮೊಗ್ಗ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಗೀತಾ ಶಿವರಾಜಕುಮಾರ್ ಸಹೋದರ ಕುಮಾರ್ ಬಂಗಾರಪ್ಪ ಸಹ ಇದ್ದಾರೆ.

ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ (BY Raghavendra) ಇಂದು ನಾಮಪತ್ರ ಸಲ್ಲಿಸುವಾಗಲೂ ನಗರದ ರಸ್ತೆಗಳು ಕೇಸರಿಮಯ ಮತ್ತು ಸಾವಿರಾರು ಕಾರ್ಯಕರ್ತರಿಂದ ಭರ್ಜರಿ ಮೆರವಣಿಗೆ! ಇಷ್ಟು ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರು (party workers) ಸೇರುವುದು ಬಿಜೆಪಿ ನಾಯಕರಿಗೆ ಅತ್ಯವಶ್ಯಕವಾಗಿತ್ತು. ಯಾಕೆಂದರೆ ಪಕ್ಷದ ರಾಜ್ಯ ನಾಯಕತ್ವ ವಿರುದ್ಧ ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಹಿರಿಯ ನಾಯಕ ಕೆಎಸ್ ಈಶ್ವರಪ್ಪ (KS Eshwarappa) ನಾಮಪತ್ರ ಸಲ್ಲಿಸುವಾಗ ಅವರೇ ಹೇಳಿಕೊಂಡಂತೆ ಸುಮಾರು 35,000 ಬೆಂಬಲಿಗರು ಜೊತೆಗಿದ್ದರು ಮತ್ತು ಅವತ್ತು ಸಹ ನಗರ ಕೇಸರಿಮಯಗೊಂಡಿತ್ತು. ನಾಮಪತ್ರ ಸಲ್ಲಿಸುವಾಗ ಪಕ್ಷಗಳು ಮತ್ತು ಉಮೇದುವಾರರು ಶಕ್ತಿ ಪ್ರದರ್ಶನ ನಡೆಸುವುದು ಬಹಳ ವರ್ಷಗಳಿಂದ ನಡೆದುಕೊಂಡು ಬಂದಿರುವ ಪದ್ಧತಿ. ನಿಮಗೆ ದೃಶ್ಯಗಳಲ್ಲಿ ಕಾಣುವ ಹಾಗೆ ತೆರೆದ ವಾಹನದಲ್ಲಿ ಮೂವರು ಮಾಜಿ ಮುಖ್ಯಮಂತ್ರಿಗಳಿದ್ದಾರೆ-ಬಿಎಸ್ ಯಡಿಯೂರಪ್ಪ, ಹೆಚ್ ಡಿ ಕುಮಾರಸ್ವಾಮಿ ಮತ್ತು ಬಸವರಾಜ ಬೊಮ್ಮಾಯಿ. ಅವರೊಂದಿಗೆ ಶಿವಮೊಗ್ಗ ಶಾಸಕ ಚನ್ನಬಸ್ಸಪ್ಪ ಮತ್ತು ಮಾಜಿ ಶಾಸಕ ಹಾಗೂ ಶಿವಮೊಗ್ಗ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಗೀತಾ ಶಿವರಾಜಕುಮಾರ್ ಸಹೋದರ ಕುಮಾರ್ ಬಂಗಾರಪ್ಪ ಸಹ ಇದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಈಶ್ವರಪ್ಪ ಬಂಡಾಯದ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಬಿವೈ ರಾಘವೇಂದ್ರ