ಚಿಕ್ಕಬಳ್ಳಾಪುರ ಪ್ರವೇಶಿಸುವ ಮೊದಲು ಚುನಾವಣಾಧಿಕಾರಿಗಳಿಂದ ತಪಾಸಣೆಗೊಳಗಾದ ಸಿದ್ದರಾಮಯ್ಯ ವಿಶೇಷ ವಾಹನ

ಐಬಿ ಬಳಿಯ ಚೆಕ್ ಪೋಸ್ಟ್ ಬಳಿ ಸಿದ್ದರಾಮಯ್ಯ ಇರುವ ವಾಹನ ಬಂದಿರುವ ಸಂಗತಿ ಗೊತ್ತಾದ ಕೂಡಲೇ ಪಕ್ಕದಲ್ಲೇ ಇದ್ದ ಪೆಟ್ರೋಲ್ ಬಂಕೊಂದರ ಸಿಬ್ಬಂದಿ ವಾಹನದ ಬಳಿಗೋಡಿ ಮುಖ್ಯಮಂತ್ರಿಯವರ ಫೋಟೋಗಳನ್ನು ತಮ್ಮ ಮೊಬೈಲ್ ನಲ್ಲಿ ತೆಗೆದುಕೊಂಡರು. ಹವಾನಿಯಂತ್ರಿತ ವಾಹನದಲ್ಲಿ ಸಿದ್ದರಾಮಯ್ಯ ನಿರ್ಭಾವುಕರಅಗಿ ಕುಳಿತಿರುವುದನ್ನು ಮತ್ತು ಹೊರಗೆ ಸುಡುಬಿಸಿಲಲ್ಲಿ ನಿಂತಿದ್ದ ಜನರತ್ತ ಕೈ ಬೀಸುವುದನ್ನು ದೃಶ್ಯಗಳಲ್ಲಿ ನೋಡಬಹುದು.

ಚಿಕ್ಕಬಳ್ಳಾಪುರ ಪ್ರವೇಶಿಸುವ ಮೊದಲು ಚುನಾವಣಾಧಿಕಾರಿಗಳಿಂದ ತಪಾಸಣೆಗೊಳಗಾದ ಸಿದ್ದರಾಮಯ್ಯ ವಿಶೇಷ ವಾಹನ
|

Updated on: Apr 18, 2024 | 1:58 PM

ಚಿಕ್ಕಬಳ್ಳಾಪುರ: ವ್ಯಕ್ತಿಯ ಹುದ್ದೆ, ಅಂತಸ್ತು, ಸ್ಥಾನಮಾನ ಏನೇ ಆಗಿರಲಿ, ಚುನಾವಣೆ ಸಮಯದಲ್ಲಿ ಮಾದರಿ ನೀತಿ ಸಂಹಿತೆ (Model Code of Conduct) ಎಲ್ಲರಿಗೂ ಅನ್ವಯಿಸುತ್ತದೆ. ನಿನ್ನೆ ಮಂಡ್ಯಗೆ ಚುನಾವಣಾ ಪ್ರಚಾರಕ್ಕೆ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಮತ್ತು ರಾಹುಲ್ ಗಾಂಧಿ (Rahul Gandhi) ಆಗಮಿಸಿದ್ದ ಹೆಲಿಕಾಪ್ಟರ್ ಅನ್ನು ಕೂಲಂಕುಷವಾಗಿ ತಪಾಸಣೆ ಮಾಡಲಾಗಿತ್ತು. ಚುನಾವಣಾ ಸಮಯದಲ್ಲಿ ಪ್ರಚಾರಕ್ಕೆಂದು ವಿಶೇಷವಾಗಿ ವಿನ್ಯಾಸಗೊಳಿಸಲಾಗಿರುವ ಬಸ್ಸಿನಂಥ ವಾಹನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಚಿಕ್ಕಬಳ್ಳಾಪುರಕ್ಕೆ ಹೋದಾಗ ನಗರದ ಹೊರವಲಯದ ಚೆಕ್ ಪೋಸ್ಟ್ ಒಂದರ ಬಳಿ ಅದನ್ನು ತಡೆದು ತಪಾಸಣೆ ನಡೆಸಲಾಯಿತು. ಚುನಾವಣಾಧಿಕಾರಿಗಳು ವಾಹನಗಳನ್ನು ಬಹಳ ಮುತುವರ್ಜಿಯಿಂದ ತಪಾಸಣೆ ಮಾಡುತ್ತಾರೆಯೇ ಹೊರತು ಅದನ್ನು ಕಾಟಾಚಾರದ ಪ್ರಕ್ರಿಯೆ ಅಂತ ಪರಿಗಣಿಸಲ್ಲ. ಐಬಿ ಬಳಿಯ ಚೆಕ್ ಪೋಸ್ಟ್ ಬಳಿ ಸಿದ್ದರಾಮಯ್ಯ ಇರುವ ವಾಹನ ಬಂದಿರುವ ಸಂಗತಿ ಗೊತ್ತಾದ ಕೂಡಲೇ ಪಕ್ಕದಲ್ಲೇ ಇದ್ದ ಪೆಟ್ರೋಲ್ ಬಂಕೊಂದರ ಸಿಬ್ಬಂದಿ ವಾಹನದ ಬಳಿಗೋಡಿ ಮುಖ್ಯಮಂತ್ರಿಯವರ ಫೋಟೋಗಳನ್ನು ತಮ್ಮ ಮೊಬೈಲ್ ನಲ್ಲಿ ತೆಗೆದುಕೊಂಡರು. ಹವಾನಿಯಂತ್ರಿತ ವಾಹನದಲ್ಲಿ ಸಿದ್ದರಾಮಯ್ಯ ನಿರ್ಭಾವುಕರಅಗಿ ಕುಳಿತಿರುವುದನ್ನು ಮತ್ತು ಹೊರಗೆ ಸುಡುಬಿಸಿಲಲ್ಲಿ ನಿಂತಿದ್ದ ಜನರತ್ತ ಕೈ ಬೀಸುವುದನ್ನು ದೃಶ್ಯಗಳಲ್ಲಿ ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ಮೂಲಭೂತ ಸೌಕರ್ಯಗಳಿಲ್ಲದ ಕಿಕ್ಕೇರಿಕಟ್ಟೆ ಗ್ರಾಮದ ಜನರಿಂದ ಮತದಾನಕ್ಕೆ ಬಹಿಷ್ಕಾರ!

Follow us