ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ಮೂಲಭೂತ ಸೌಕರ್ಯಗಳಿಲ್ಲದ ಕಿಕ್ಕೇರಿಕಟ್ಟೆ ಗ್ರಾಮದ ಜನರಿಂದ ಮತದಾನಕ್ಕೆ ಬಹಿಷ್ಕಾರ!
ಗ್ರಾಮಸ್ಥರು ಲೋಕಸಭಾ ಚುನಾವಣೆಗಾಗಿ ನಡೆಯುವ ಮತದಾನವನ್ನು ಬಹಿಷ್ಕರಿಸಿದ್ದಾರೆ. ಅದಕ್ಕೆ ಕಾರಣಗಳನ್ನು ಅವರೇ ಹೇಳುತ್ತಾರೆ. ಊರಿಂದ ಪಟ್ಟಣದ ಕಡೆ ಹೋಗಲು ಅವರಿಗೆ ಸರಿಯಾದ ರಸ್ತೆಯಿಲ್ಲ, ಊರಲ್ಲಿ ಸಮರ್ಪಕ ಕುಡಿಯುವ ನೀರಿನ ವ್ಯವಸ್ತೆಯಿಲ್ಲ, ಮತ್ತು ವಿದ್ಯುತ್ ಸಂಪರ್ಕ ನಾಮಕಾವಾಸ್ತೆ! ಪರಿಸ್ಥಿತಿ ಹೀಗಿರುವಾಗ ಇದನ್ನು ಕುಗ್ರಾಮವೆನ್ನದೆ ಮತ್ತೇನನ್ನಬೇಕು?
ಮೈಸೂರು: ಭಾರತಕ್ಕೆ ಸ್ವಾತಂತ್ರ್ಯ (Independence) ಸಿಕ್ಕು 77 ವರ್ಷಗಳಾದವು ಮತ್ತು ನಮ್ಮ ನಾಯಕರು ಪ್ರತಿ ಗ್ರಾಮಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದ್ದಾಗಿ ಹೇಳುತ್ತಿರುತ್ತಾರೆ. ಆದರೆ ಇಲ್ನೋಡಿ, ಇದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ (CM Siddaramaiah) ತವರು ಜಿಲ್ಲೆ ಮೈಸೂರಿನ ಹುಣಸೂರು ತಾಲ್ಲೂಕಿನಲ್ಲಿರುವ ಕಿಕ್ಕೇರಿಕಟ್ಟೆ (Kikkerikatte ) ಗ್ರಾಮ. ಇಲ್ಲಿ 50 ಮನೆಗಳಿವೆ ಮತ್ತು ಸುಮಾರು 200 ಕ್ಕೂ ಹೆಚ್ಚು ಮತದಾರರಿದ್ದಾರೆ. ಗ್ರಾಮಸ್ಥರು ಲೋಕಸಭಾ ಚುನಾವಣೆಗಾಗಿ ನಡೆಯುವ ಮತದಾನವನ್ನು ಬಹಿಷ್ಕರಿಸಿದ್ದಾರೆ. ಅದಕ್ಕೆ ಕಾರಣಗಳನ್ನು ಅವರೇ ಹೇಳುತ್ತಾರೆ. ಊರಿಂದ ಪಟ್ಟಣದ ಕಡೆ ಹೋಗಲು ಅವರಿಗೆ ಸರಿಯಾದ ರಸ್ತೆಯಿಲ್ಲ, ಊರಲ್ಲಿ ಸಮರ್ಪಕ ಕುಡಿಯುವ ನೀರಿನ ವ್ಯವಸ್ತೆಯಿಲ್ಲ, ಮತ್ತು ವಿದ್ಯುತ್ ಸಂಪರ್ಕ ನಾಮಕಾವಾಸ್ತೆ! ಪರಿಸ್ಥಿತಿ ಹೀಗಿರುವಾಗ ಇದನ್ನು ಕುಗ್ರಾಮವೆನ್ನದೆ ಮತ್ತೇನನ್ನಬೇಕು? ಆರೋಗ್ಯಕ್ಕೆ ಸಂಬಂಧಿಸಿದ ತುರ್ತು ಸ್ಥಿತಿಯಲ್ಲಿ, ಹೆರಿಗೆ ನೋವು ಕಾಣಿಸಿಕೊಂಡಾಗ ಬೇಗ ಆಸ್ಪತ್ರೆ ತಲುಪುವುದು ಸಾಧ್ಯವೇ ಇಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ. ಅವರು ಮತದಾನ ಬಹಿಷ್ಕರಿಸಿರುವುದಲ್ಲಿ ಯಾವುದೇ ಆಶ್ಚರ್ಯವಿಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸ್ವಕ್ಷೇತ್ರ ಮೈಸೂರಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆಯಲ್ಲಿ ರೊಚ್ಚಿಗೆದ್ದ ಕಾಂಗ್ರೆಸ್ ಕಾರ್ಯಕರ್ತರು!