ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಫೀಲ್ಡಿಗಿಳಿದ ನಟ ದರ್ಶನ್, ಕಾರ್ಯಕರ್ತರಲ್ಲಿ ಉನ್ಮಾದ, ಉತ್ಸಾಹ!

ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಫೀಲ್ಡಿಗಿಳಿದ ನಟ ದರ್ಶನ್, ಕಾರ್ಯಕರ್ತರಲ್ಲಿ ಉನ್ಮಾದ, ಉತ್ಸಾಹ!

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 18, 2024 | 12:31 PM

ಮಳವಳ್ಳಿಯ ಹಲಗೂರುನಲ್ಲಿ ಅವರು ಸ್ಥಳೀಯ ಶಾಸಕ ನರೇಂದ್ರ ಸ್ವಾಮಿ ಮತ್ತು ಮದ್ದೂರು ಶಾಸಕ ಕದಲೂರು ಉದಯ್ ಜೊತೆ ಇಂದು ಪ್ರಚಾರಕ್ಕೆ ಅಗಮಿಸಿದಾಗ ಜನ ಹುಚ್ಚೆದ್ದು ಕುಣಿಯಲಾರಂಭಿಸಿದರು. ಬೃಹತ್ ಗಾತ್ರದ ಹಾರವೊಂದನ್ನು ದರ್ಶನ್ ಗಾಗಿ ಸಿದ್ಧಪಡಿಸಲಾಗಿತ್ತು.

ಮಂಡ್ಯ: ಮಂಡ್ಯ ಜಿಲ್ಲೆಯಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ (Rebel Star) ನಂತರ ಅತಿಹೆಚ್ಚು ಫ್ಯಾನ್ ಫಾಲೊಯಿಂಗ್ ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan) ಅವರಿಗಿರಬಹುದು. ಕೇವಲ ಮಂಡ್ಯದಲ್ಲಿ ಮಾತ್ರ ಅಲ್ಲ ಇಡೀ ರಾಜ್ಯದಲ್ಲಿ ದರ್ಶನ್ ಗೆ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ, ಆ ವಿಚಾರ ಬೇರೆ. ಇಲ್ನೋಡಿ, ಅವರು ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ (Mandya LS constituency) ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಪರ ಪ್ರಚಾರ ಮಾಡುವುದು ಗೊತ್ತಾಗುತ್ತಿದ್ದಂತೆಯೇ ಅಭಿಮಾನಿಗಳಲ್ಲಿ ವಿದ್ಯುತ್ ಸಂಚಾರವುಂಟಾಗಿದೆ. ಮಳವಳ್ಳಿಯ ಹಲಗೂರುನಲ್ಲಿ ಅವರು ಸ್ಥಳೀಯ ಶಾಸಕ ನರೇಂದ್ರ ಸ್ವಾಮಿ ಮತ್ತು ಮದ್ದೂರು ಶಾಸಕ ಕದಲೂರು ಉದಯ್ ಜೊತೆ ಇಂದು ಪ್ರಚಾರಕ್ಕೆ ಅಗಮಿಸಿದಾಗ ಜನ ಹುಚ್ಚೆದ್ದು ಕುಣಿಯಲಾರಂಭಿಸಿದರು. ಬೃಹತ್ ಗಾತ್ರದ ಹಾರವೊಂದನ್ನು ದರ್ಶನ್ ಗಾಗಿ ಸಿದ್ಧಪಡಿಸಲಾಗಿತ್ತು. ಸುಮಲತಾ ಅಂಬರೀಶ್ ಅವರು ಬಿಜೆಪಿ ಸೇರಿದ ಬಳಿಕ ಕೆಲ ದಿನಗಳ ಕಾಲ ಮೌನವಾಗಿದ್ದ ದರ್ಶನ್ ಈಗ ಕಾಂಗ್ರೆಸ್ ಪರ ಪ್ರಚಾರ ಮಾಡಲು ಬಂದಿದ್ದಾರೆ. ಮಂಡ್ಯ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಹೆಚ್ ಡಿ ಕುಮಾರಸ್ವಾಮಿ ಪರ ಪ್ರಚಾರ ಮಾಡಲು ಸುಮಲತಾ ಇದುವರೆಗೆ ಮುಂದಾಗಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ‘ಏನೇನೋ ಅಂದ್ಕೊಬೇಡಿ’; ಮಂಡ್ಯದಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದಕ್ಕೆ ದರ್ಶನ್ ಸ್ಪಷ್ಟನೆ