‘ಎಷ್ಟೇ ಮುನ್ನೆಚ್ಚರಿಕೆ ತೆಗೆದುಕೊಂಡ್ರೂ ಅವಘಡ ಸಂಭವಿಸುತ್ತದೆ’; ‘ಮಾಸ್ತಿಗುಡಿ’ ಘಟನೆ ನೆನಪಿಸಿಕೊಂಡ ಥ್ರಿಲ್ಲರ್ ಮಂಜು

|

Updated on: Mar 25, 2023 | 7:46 AM

‘ಮಾಸ್ತಿಗುಡಿ’ ಸಿನಿಮಾ ಚಿತ್ರೀಕರಣದ ವೇಳೆ ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಬಿದ್ದ ಇಬ್ಬರು ಖಳನಟರು ಮೃತಪಟ್ಟಿದ್ದರು. ಈ ಘಟನೆ ಬಗ್ಗೆ ಥ್ರಿಲ್ಲರ್ ಮಂಜು ಮಾತನಾಡಿದ್ದಾರೆ.

‘ಮಾಸ್ತಿಗುಡಿ’ ಸಿನಿಮಾ (Mastigudi Movie) ಶೂಟಿಂಗ್ ವೇಳೆ ನಡೆದ ಘಟನೆ ಎಂದಿಗೂ ಮರೆಯುವಂಥದ್ದಲ್ಲ. ಚಿತ್ರೀಕರಣದ ವೇಳೆ ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಬಿದ್ದ ಇಬ್ಬರು ಖಳನಟರು ಮೃತಪಟ್ಟಿದ್ದರು. ಈ ಘಟನೆ ಬಗ್ಗೆ ಥ್ರಿಲ್ಲರ್ ಮಂಜು ಮಾತನಾಡಿದ್ದಾರೆ. ‘ನಾವು ಎಷ್ಟೇ ಮುನ್ನೆಚ್ಚರಿಕೆ ತೆಗೆದುಕೊಂಡರೂ ಅವಘಡ ಸಂಭವಿಸುತ್ತದೆ. ಚಿಕ್ಕ-ಪುಟ್ಟ ಶಾಟ್ಸ್​ಗೆ ನಾವು ಹೆಚ್ಚು ಎಚ್ಚರಿಕೆ ವಹಿಸುತ್ತೇವೆ. ಹಾಗಿರುವಾಗ ದೊಡ್ಡ ಸಾಹಸ ದೃಶ್ಯಗಳ ಬಗ್ಗೆಯೂ ನಾವು ಪ್ರಿಕಾಷನ್ ತೆಗೆದುಕೊಂಡಿರುತ್ತೇವೆ. ಒಮ್ಮೊಮ್ಮೆ ನಡೆಯಬಾರದ್ದು ನಡೆದು ಹೋಗುತ್ತದೆ’ ಎಂದಿದ್ದಾರೆ ಮಂಜು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published on: Mar 25, 2023 07:45 AM