Maruti Suzuki: ನೆಕ್ಸಾ ಕಾರುಗಳ ಮಾರಾಟದಲ್ಲಿ ಮಾರುತಿ ಸುಜುಕಿ ಹೊಸ ದಾಖಲೆ

Maruti Suzuki: ನೆಕ್ಸಾ ಕಾರುಗಳ ಮಾರಾಟದಲ್ಲಿ ಮಾರುತಿ ಸುಜುಕಿ ಹೊಸ ದಾಖಲೆ

Praveen Sannamani
|

Updated on: Mar 25, 2023 | 9:00 AM

ಮಾರುತಿ ಸುಜುಕಿ ಕಂಪನಿಯು ತನ್ನ ಪ್ರಿಮಿಯಂ ಕಾರು ಮಾರಾಟ ವಿಭಾಗವಾದ ನೆಕ್ಸಾದಿಂದ ಭಾರೀ ಪ್ರಮಾಣದಲ್ಲಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕಂಪನಿಯು ಇದೀಗ ನೆಕ್ಸಾ ಪ್ಲ್ಯಾಟ್ ಫಾರ್ಮ್ ಮೂಲಕ ಸುಮಾರು 20 ಲಕ್ಷ ಕಾರುಗಳನ್ನ ಮಾರಾಟ ಮಾಡಿದೆ.

ಹೊಸ ಕಾರುಗಳ ಮಾರಾಟಕ್ಕಾಗಿ ಮಾರುತಿ ಸುಜುಕಿ ಕಂಪನಿಯು ಅರೆನಾ ಮತ್ತು ನೆಕ್ಸಾ ಶೋರೂಂ ಪ್ಲ್ಯಾಟ್ ಫಾರ್ಮ್ ಹೊಂದಿದ್ದು, ನೆಕ್ಸಾ ಶೋರೂಂ ಮೂಲಕ ಪ್ರಿಮಿಯಂ ಕಾರುಗಳನ್ನ ಮಾರಾಟ ಮಾಡುತ್ತಿದೆ. ನೆಕ್ಸಾ ಶೋರೂಂನಲ್ಲಿ ಇಗ್ನಿಸ್, ಬಲೆನೊ, ಸಿಯಾಜ್, ಎಕ್ಸ್ಎಲ್6, ಗ್ರ್ಯಾಂಡ್ ವಿಟಾರಾ ಲಭ್ಯವಿದ್ದು, ಇದರಲ್ಲಿ ಬಲೆನೊ ಕಾರು ಅತ್ಯಧಿಕ ಬೇಡಿಕೆ ಪಡೆದುಕೊಂಡಿದೆ.