Rains damage crops: ವಿಜಯಪುರದಲ್ಲಿ ಜೋರು ಗಾಳಿ ಮತ್ತು ಮಳೆಗೆ ದಾಳಿಂಬೆ ಮತ್ತು ನಿಂಬೆ ಬೆಳೆ ನಾಶ, ರೈತರು ಕಂಗಾಲು
ನಾಶವಾಗಿರುವ ದಾಳಿಂಬೆ ಮತ್ತು ನಿಂಬೆ ಬೆಳೆಯನ್ನು ತೋಟಗಾರಿಕೆ ಬೆಳೆ ಎನ್ನಲಾಗಿದ್ದು ರೈತರು ಪರಿಹಾರಕ್ಕಾಗಿ ಸರ್ಕಾರದ ಮೊರೆಹೊಕ್ಕಿದ್ದಾರೆ.
ವಿಜಯಪುರ: ಮಳೆಯ ಆಟ ಗೊತ್ತು ಮಾಡಿಕೊಳ್ಳುವುದು ಕಷ್ಟವಾಗುತ್ತಿದೆ. ಮೊನ್ನೆ ರಾತ್ರಿ ಕೋಲಾರದಲ್ಲಿ (Kolar) ಸುರಿದ ಬಿರುಗಾಳಿ ಸಹಿತ ಮಳೆ, ಬೀನ್ಸ್ ಮತ್ತು ಮಾವಿನ ಫಸಲನ್ನು ನಾಶ ಮಾಡಿದ ವಿಡಿಯೋ ನಿಮಗೆ ತೋರಿಸಿದ್ದೇವೆ. ನಿನ್ನೆ ರಾತ್ರಿ ವಿಜಯಪುರದಲ್ಲಿ (Vijayapura) ಸುರಿದ ಧಾರಾಕಾರ ಮಳೆ ಮತ್ತು ಗಾಳಿ ದಾಳಿಂಬೆ (pomegranate) ಮತ್ತು ನಿಂಬೆಹಣ್ಣಿನ (lemon) ಗಿಡಗಳನ್ನು ನೆಲಕ್ಕುರಿಳಿಸಿ ಬೆಳೆನಾಶ ಮಾಡಿವೆ, ವಿಜಯಪುರ ತಾಲ್ಲೂಕಿನ ಆಹೇರಿ ಮತ್ತು ಜಂಬಗಿ ಗ್ರಾಮಗಳಲ್ಲಿನ ದೃಶ್ಯವನ್ನು ವಿಡಿಯೋದಲ್ಲಿ ನೋಡಬಹುದು. ನಾಶವಾಗಿರುವ ದಾಳಿಂಬೆ ಮತ್ತು ನಿಂಬೆ ಬೆಳೆಯನ್ನು ತೋಟಗಾರಿಕೆ ಬೆಳೆ ಎನ್ನಲಾಗಿದ್ದು ರೈತರು ಪರಿಹಾರಕ್ಕಾಗಿ ಸರ್ಕಾರದ ಮೊರೆಹೊಕ್ಕಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ