Updated on: May 23, 2023 | 9:01 PM
ಸೋಮವಾರ ಸಂಜೆ ಸುರಿದ ಭಾರಿ ಗಾಳಿ, ಮಳೆಯಿಂದಾಗಿ ಬಾಗಲಕೋಟೆ ಜಿಲ್ಲೆಯ ಜನರು ಕಂಗಾಲಾಗಿದ್ದಾರೆ. ಭಾರಿ ಗಾಳಿಯಿಂದ ಬಾದಾಮಿ ತಾಲ್ಲೂಕಿನ ಹೂಲಗೇರಿಯ ರಾಷ್ಟ್ರೀಯ ಹೆದ್ದಾರಿ ೨೧೮ರಲ್ಲಿ ಬೃಹತ್ ಬೇವಿನ ಮರ ಬಿದ್ದ ಪರಿಣಾಮ ಒಂದು ಕಾರು, ಎರಡು ಬೈಕ್ ಜಖಂ ಆಗಿದೆ.
ನಿನ್ನೆ ರಾತ್ರಿ ಬೀಸಿದ ಗಾಳಿ ಹಾಗೂ ಮಳೆಗೆ ಅಪಾರ ಬೆಳೆ ಹಾನಿ ಆಗಿದ್ದು, ಕಲಾದಗಿ ಗ್ರಾಮದ ವ್ಯಾಪ್ತಿಯಲ್ಲಿ ದಾಳಿಂಬೆ, ಕಬ್ಬು, ಪಪ್ಪಾಯಿ ಬೆಳೆ ನಾಶವಾಗಿದೆ. ಮಳೆ ಗಾಳಿ ಹೊಡೆತಕ್ಕೆ ಪಪ್ಪಾಯಿ, ನೆಲಕ್ಕುರುಳಿದರೆ, ಆಲಿಕಲ್ಲಿಗೆ ದಾಳಿಂಬೆ ಹಣ್ಣು ಹಾನಿಯಾಗಿದೆ.
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹಲವು ಗ್ರಾಮಗಳಲ್ಲಿ ಗಾಳಿ ಸಹಿತ ಮಳೆಯಾಗಿದ್ದು, ಮಳೆಯ ಆರ್ಭಟಕ್ಕೆ ಜನರು ಕಂಗಾಲಾಗಿದ್ದಾರೆ. ಗಾಳಿ, ಮಳೆ ಆರ್ಭಟಕ್ಕೆ ತೆಂಗಿನ ಮರಗಳು ಉರುಳಿ ಮನೆಗಳ ಮೇಲೆ ಬೀಳುತ್ತಿವೆ. ಸಿಡಿಲು ಬಡಿದು ಕುರಿಗಾಹಿ ಓರ್ವ ಸಾವನ್ನಪ್ಪಿದ್ದಾರೆ.
ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಗೆ ಬೃಹತ್ ಗಾತ್ರದ ಮರ ಒಂದು ಧರೆಗುರುಳಿದ್ದು, ಮನೆ ಮೇಲೆ ಬಿದಿದೆ. ಮನೆಯಲ್ಲಿ ಯಾರು ಇಲ್ಲದಿದ್ದರಿಂದ ಭಾರಿ ಅನಾಹುತ ತಪ್ಪಿದೆ.
ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಗೆ ಮನೆ ಮುಂಭಾಗದಲ್ಲಿ ಮಲಗಿದ ವೇಳೆ ಗೋಡೆ ಕುಸಿದು ಬಿದ್ದು ಮಳೆಗೆ ಮನೆ ಗೋಡೆ ಕುಸಿದುಬಿದ್ದು ವ್ಯಕ್ತಿ ಸಾವನ್ನಪ್ಪಿರುವಂತಹ ಘಟನೆ ಸಿರಗುಪ್ಪ ತಾಲೂಕಿನ ನಾಡಂಗ ಗ್ರಾಮದಲ್ಲಿ ನಡೆದಿದೆ.