ಚಿಕ್ಕಬಳ್ಳಾಪುರ ಹೋಗಲ್ಲ, ಮಂಡ್ಯ ಬಿಡಲ್ಲ; ಜನವರಿ 22ರವರೆಗೆ ಕಾಯುವಂತೆ ವರಿಷ್ಠರು ಹೇಳಿದ್ದಾರೆ: ಸುಮಲತಾ ಅಂಬರೀಶ್

|

Updated on: Mar 20, 2024 | 6:51 PM

ಕ್ಷೇತ್ರದ ಬಗ್ಗೆ ಎಲ್ಲ ಮಾಹಿತಿಯನ್ನು ಅವರಿಗೆ ತಿಳಿಸಿದ್ದೇನೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ಎಲ್ಲ ಅಂಶಗಳನ್ನು ಗಮನಿಸಿ ಮಾರ್ಚ್ 22 ರಂದು ಹೆಸರನ್ನು ಪ್ರಕಟಿಸಲಿದ್ದಾರೆ, ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸಹ ಅದನ್ನೇ ಹೇಳಿದ್ದಾರೆ, ಎಂದು ಸುಮಲತಾ ಹೇಳಿದರು.

ಬೆಂಗಳೂರು: ದೆಹಲಿಯಿಂದ ವಾಪಸ್ಸಾದ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮಾತಾಡುವಾಗ ಬಿಜೆಪಿ ವರಿಷ್ಠರು ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ಇನ್ನೂ ಅಂತಿಮಗೊಳಿಸಿಲ್ಲ ಎಂದು ಹೇಳಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿಯವರ (HD Kumaraswamy) ತಲೆಬಿಸಿಯನ್ನು ಮತ್ತಷ್ಟು ಹೆಚ್ಚಿಸಿದರು. ದೆಹಲಿಯಲ್ಲಿ ವರಿಷ್ಠರೊಂದಿಗೆ ಮಾತಾಡುವಾಗ ಮಂಡ್ಯ ಕ್ಷೇತ್ರಕ್ಕೆ ಅವರು ಇನ್ನೂ ಅಭ್ಯರ್ಥಿಯನ್ನು ಅಂತಿಮಗೊಳಿಸದಿರುವುದು ಗೊತ್ತಾಯಿತು, ಕ್ಷೇತ್ರದ ಬಗ್ಗೆ ಎಲ್ಲ ಮಾಹಿತಿಯನ್ನು ಅವರಿಗೆ ತಿಳಿಸಿದ್ದೇನೆ, ಪ್ರಧಾನಿ ನರೇಂದ್ರ ಮೋದಿ (PM Narendra Modi) ಮತ್ತು ಅಮಿತ್ ಶಾ (Amit Shah) ಅವರು ಎಲ್ಲ ಅಂಶಗಳನ್ನು ಗಮನಿಸಿ ಮಾರ್ಚ್ 22 ರಂದು ಹೆಸರನ್ನು ಪ್ರಕಟಿಸಲಿದ್ದಾರೆ, ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸಹ ಅದನ್ನೇ ಹೇಳಿದ್ದಾರೆ, ಎಂದು ಸುಮಲತಾ ಹೇಳಿದರು. ತನಗೆ ಚಿಕ್ಕಬಳ್ಳಾಪುರ ಕ್ಷೇತ್ರ ನೀಡುವಂತೆ ಬೇರೆಯವರು ವರಿಷ್ಠರ ಮುಂದೆ ಪ್ರಸ್ತಾಪ ಮಾಡುತ್ತಿದ್ದಾರೆಯೇ ಹೊರತು ಅವರೇನೂ ತನ್ನ ಜೊತೆ ಅದರ ಬಗ್ಗೆ ಚರ್ಚೆ ಮಾಡಲಿಲ್ಲ, ಬೆಂಗಳೂರು ಉತ್ತರ ಕ್ಷೇತ್ರವನ್ನೇ ನಿರಾಕರಿಸಿದ ತಾನು ಚಿಕ್ಕಬಳ್ಳಾಪುರ ಒಪ್ಪಿಕೊಳ್ಳುವುದು ಸಾಧ್ಯವೇ? ತಾನೇನಿದ್ದರೂ ಮಂಡ್ಯದಿಂದಲೇ ಸ್ಪರ್ಧಿಸುವುದು ಎಂದು ಸುಮಲತಾ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಸಂಸದೆ ಸುಮಲತಾ ಅಂಬರೀಶ್​ ಬಿಜೆಪಿಯಲ್ಲೇ ಇರುತ್ತಾರೆ: ಸಚಿವ ಪ್ರಹ್ಲಾದ ಜೋಶಿ