ಈಶ್ವರಪ್ಪಗೆ ವಿಧಾನಸಭಾ ಚುನಾವಣೆಯಲ್ಲಿ ಅನ್ಯಾಯವಾಗಿತ್ತು, ಈಗಲಾದರೂ ಟಿಕೆಟ್ ಕೊಡಬೇಕಿತ್ತು: ಎಂಪಿ ರೇಣುಕಾಚಾರ್ಯ

|

Updated on: Mar 21, 2024 | 10:42 AM

ತಮ್ಮ ವಿಷಯದಲ್ಲಿ ಮಾತಾಡಿದ ಅವರು, ದಾವಣಗೆರೆ ಟಿಕೆಟ್ ಬದಲಾವಣೆ ಕುರಿತು ತಮ್ಮ ನಿಲುವು ಸ್ಪಷ್ಟಪಡಿಸಿಯಾಗಿದೆ, ನಮ್ಮನ್ನು ಭಿನ್ನಮತೀಯರು, ರೆಬೆಲ್ ಗಳು ಎಂದು ಕರೆಯಲಾಗುತ್ತಿದೆ, ಅದ್ಯಾವುದೂ ನಾವಲ್ಲ, ಒಂದು ಗೌಪ್ಯ ಸ್ಥಳದಲ್ಲಿ ಸಭೆ ಸೇರಿ ನಾವೆಲ್ಲ ಒಂದು ನಿರ್ಣಯಕ್ಕೆ ಬರುತ್ತೇವೆ, ನಮ್ಮ ನಿರ್ಣಯವನ್ನು ಮಾಧ್ಯಮದವರಿಗೂ ತಿಳಿಸಲ್ಲ ಎಂದರು.

ದಾವಣಗೆರೆ: ಲೋಕಸಭಾ ಚುನಾವಣೆಗೆ ಬಿಜೆಪಿಯ ಟಿಕೆಟ್ ವಂಚಿತರನ್ನು ಸಮಾನಮನಸ್ಕ ನೊಂದಜೀವಿಗಳು ಅನ್ನಲಡ್ಡಿಯಿಲ್ಲ. ಮಾಜಿ ಶಾಸಕ ಮತ್ತು ದಾವಣಗೆರೆ ಟಿಕೆಟ್ ಆಕಾಂಕ್ಷಿಯಾಗಿದ್ದ ಎಂಪಿ ರೇಣುಕಾಚಾರ್ಯ (MP Renukacharya) ಮಾತು ಕೇಳಿದರೆ ಹಾಗನ್ನಿಸುತ್ತದೆ. ಇವತ್ತು ತಮ್ಮ ಬೆಂಬಲಿಗರೊಂದಿಗೆ ಮಾಧ್ಯಮಗಳೊಂದಿಗೆ ಮಾತಾಡುವಾಗ ಅವರು ತನ್ನಂತೆಯೇ ರಾಜ್ಯ ಬಿಜೆಪಿ ನಾಯಕತ್ವದ ವಿರುದ್ಧ ಬಂಡಾಯವೆದ್ದಿರುವ ಕೆಎಸ್ ಈಶ್ವರಪ್ಪ (KS Eshwarappa) ಬಗ್ಗೆ ಬಹಳ ಸಾಫ್ಟ್ ಆಗಿ ಮತ್ತು ಪರವಾಗಿ ಮಾತಾಡಿದರು. ವಿಧಾನಸಭಾ ಚುನಾವಣೆಯಲ್ಲಿ (Assembly polls) ಟಿಕೆಟ್ ಸಿಗದಿದ್ದಾಗ ಅವರು ಅದನ್ನು ಕ್ರೀಡಾಮನೋಭಾವದಿಂದ ಸ್ವೀಕರಿಸಿದರು. ಆದರೆ, ಲೋಕಸಭಾ ಚುನಾವಣೆಯಲ್ಲೂ ಅವರಿಗೆ ಅನ್ಯಾಯವಾಗಿದೆ. ಅವರಿಗೆ ಟಿಕೆಟ್ ಕೊಡಬೇಕಿತ್ತು ಎಂದು ರೇಣುಕಾಚಾರ್ಯ ಹೇಳಿದರು. ತಮ್ಮ ವಿಷಯದಲ್ಲಿ ಮಾತಾಡಿದ ಅವರು, ದಾವಣಗೆರೆ ಟಿಕೆಟ್ ಬದಲಾವಣೆ ಕುರಿತು ತಮ್ಮ ನಿಲುವು ಸ್ಪಷ್ಟಪಡಿಸಿಯಾಗಿದೆ, ನಮ್ಮನ್ನು ಭಿನ್ನಮತೀಯರು, ರೆಬೆಲ್ ಗಳು ಎಂದು ಕರೆಯಲಾಗುತ್ತಿದೆ, ಅದ್ಯಾವುದೂ ನಾವಲ್ಲ, ಒಂದು ಗೌಪ್ಯ ಸ್ಥಳದಲ್ಲಿ ಸಭೆ ಸೇರಿ ನಾವೆಲ್ಲ ಒಂದು ನಿರ್ಣಯಕ್ಕೆ ಬರುತ್ತೇವೆ, ನಮ್ಮ ನಿರ್ಣಯವನ್ನು ಮಾಧ್ಯಮದವರಿಗೂ ತಿಳಿಸಲ್ಲ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ನಿರ್ಧಾರದಿಂದ ಹಿಂತೆಗೆಯುವ ಮಾತೇ ಇಲ್ಲ: ಕೆಎಸ್ ಈಶ್ವರಪ್ಪ, ಬಿಜೆಪಿ ನಾಯಕ