ಹುಲಿ ಉಪಟಳಕ್ಕೆ ಬೇಸತ್ತ ಗ್ರಾಮಸ್ಥರು: ವ್ಯಾಘ್ರ ಸೆರೆಗೆ ಅರಣ್ಯ ಇಲಾಖೆ ಭರ್ಜರಿ ಕಾರ್ಯಾಚರಣೆ

|

Updated on: Oct 15, 2024 | 12:42 PM

ಮಡಿಕೇರಿ ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ವೆಸ್ಟ್ ನೆಮ್ಮಲೆ ಗ್ರಾಮದಲ್ಲಿ ವನ್ಯಜೀವಿ ಮಂಡಳಿ‌ ಸದಸ್ಯ ಸಂಕೇತ್ ಪೂವಯ್ಯ ನೇತೃತ್ವದಲ್ಲಿ ಹುಲಿ ಸೆರೆ ಕಾರ್ಯಾಚರಣೆ ನಡೆದಿದೆ. ಕಾರ್ಯಾಚರಣೆಯಲ್ಲಿ ಎರಡು ಸಾಕಾನೆ ಮತ್ತು 60 ಸಿಬ್ಬಂದಿ ಭಾಗಿಯಾಗಿದ್ದಾರೆ.

ಮಡಿಕೇರಿಯ ವೆಸ್ಟ್ ನೆಮ್ಮಲೆ, ತಾವಳಗೇರಿ, ಶೆಟ್ಟಿಗೇರಿ, ಶ್ರೀಮಂಗಲ, ಬೀರುಗ ಗ್ರಾಮದ ಜನರಿಗೆ ಹುಲಿ ಜೀವ ಕಂಟಕವಾಗಿದೆ. ಹುಲಿ ಕಳೆದ ಎರಡು ತಿಂಗಳಿಂದ ಈ ಗ್ರಾಮಗಳ ವ್ಯಾಪ್ತಿಯಲ್ಲೇ ಬೀಡುಬಿಟ್ಟಿದೆ. ಹುಲಿ ಏಳಕ್ಕೂ ಅಧಿಕ ಹಸುಗಳ ಕೊಂದಿದೆ. ಹುಲಿ ದಾಳಿ ಭೀತಿಯಿಂದ ಗ್ರಾಮಸ್ಥರು ರೋಸಿ ಹೋಗಿದ್ದಾರೆ. ಹೀಗಾಗಿ ಹುಲಿ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಪೊನ್ನಂಪೇಟೆ ತಾಲೂಕಿನ ವೆಸ್ಟ್ ನೆಮ್ಮಲೆ ಗ್ರಾಮದಲ್ಲಿ ವನ್ಯಜೀವಿ ಮಂಡಳಿ‌ ಸದಸ್ಯ ಸಂಕೇತ್ ಪೂವಯ್ಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಕಾರ್ಯಾಚರಣೆಯಲ್ಲಿ ಎರಡು ಸಾಕಾನೆ ಮತ್ತು 60 ಸಿಬ್ಬಂದಿ ಭಾಗಿಯಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ