Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆತ್ಮಸಾಕ್ಷಿಯ ಬಗ್ಗೆ ಮಾತಾಡುವವರಿಂದ ನ್ಯಾಯಾಂಗ ವ್ಯವಸ್ಥೆ ಖರೀದಿಸುವ ಪ್ರಯತ್ನ: ಸಿಟಿ ರವಿ

ಆತ್ಮಸಾಕ್ಷಿಯ ಬಗ್ಗೆ ಮಾತಾಡುವವರಿಂದ ನ್ಯಾಯಾಂಗ ವ್ಯವಸ್ಥೆ ಖರೀದಿಸುವ ಪ್ರಯತ್ನ: ಸಿಟಿ ರವಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 15, 2024 | 11:38 AM

ವಸತಿ ಖಾತೆ ಸಚಿವ ಜಮೀರ್ ಅಹ್ಮದ್ ಕಂಡ ಜಮೀನೆಲ್ಲ ವಕ್ಫ್ ಬೋರ್ಡ್ ಗೆ ಸೇರಿದ್ದು ಎನ್ನುತ್ತಿದ್ದಾರೆ, ಅವರ ಮಾತಿಗೆ ಜನ ಕಾಲಲ್ಲಿರೋದನ್ನು ಕೈಗೆ ತೆಗೆದುಕೊಳ್ಳಬೇಕಾಗುತ್ತದೆ; ಅನುದಾನದ ರೂಪದಲ್ಲಿ ಸಿಕ್ಕಿದ್ದು, ದಾನವಾಗಿ ಸಿಕ್ಕಿದ್ದು ಮತ್ತು ಖರೀದಿ ಮಾಡಿದ್ದ ಜಮೀನನ್ನು ಮಾತ್ರ ಸ್ವಂತದ್ದು ಹೇಳಲು ಸಾಧ್ಯ ಎಂದು ನ್ಯಾಯಾಲಯ ಹೇಳಿದೆ ಎಂದು ರವಿ ಹೇಳಿದರು.

ಕಲಬುರಗಿ: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಬಿಜೆಪಿ ನಾಯಕ ಸಿಟಿ ರವಿ, ಪ್ರಜಾಪ್ರಭುತ್ವದಲ್ಲಿ ಜನಾಭಿಪ್ರಾಯಕ್ಕೆ ಮನ್ನಣೆ ಇದೆ, ಅದರ ವಿರುದ್ಧ ತಿರುಗಿಬಿದ್ದವರು ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾರೆ ಎಂದು ಹೇಳಿದರು. ಸಾರ್ವಜನಿಕವಾಗಿ ಅತ್ಮಸಾಕ್ಷಿಯ ಬಗ್ಗೆ ಮಾತಾಡುವವರು ಕೇಸೊಂದನ್ನು ತಮ್ಮ ಪರ ವಾಲಿಸಿಕೊಳ್ಳಲು ಮಧ್ಯವರ್ತಿಯೊಬ್ಬರಿಗೆ ಹಣದ ಆಮಿಷವೊಡ್ಡಿ ನ್ಯಾಯಾಂಗ ವ್ಯವಸ್ಥೆಯನ್ನು ಖರೀದಿಸುವ ಪ್ರಯತ್ನ ಮಾಡಿದ್ದಾರೆ, ಸಮಯ ಬಂದಾಗ ಎಲ್ಲವನ್ನು ಬಹಿರಂಗಪಡಿಸುವುದಾಗಿ ರವಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಅರ್ಕಾವತಿ ಡಿನೋಟಿಫಿಕೇಷನ್ ಕೇಸ್: ಕೆಂಪಣ್ಣ ಆಯೋಗದ ವರದಿ ಬಹಿರಂಗಪಡಿಸುವಂತೆ ಸಿಎಂಗೆ ಸಿಟಿ ರವಿ ಪತ್ರ