ಚಾಮರಾಜನಗರದ ಗ್ರಾಮವೊಂದರಲ್ಲಿ ಪದೇಪದೆ ಕಾಣಿಸಿಕೊಳ್ಳುತ್ತಿರುವ ಹುಲಿ, ಆತಂಕದಲ್ಲಿ ಗ್ರಾಮಸ್ಥರು!
ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಗಮನಹರಿಸಿ ಕಾಡಿನಂಚಿನ ಗುಂಟ ಸೋಲಾರ್ ಬೇಲಿಯನ್ನು ಹಾಕಿಸಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.
ಚಾಮರಾಜನಗರ: ಕೇರಳದಿಂದ ಕರ್ನಾಟಕಕ್ಕೆ ಚಾಮರಾಜನಗರದ ಗುಂಡ್ಲುಪೇಟೆಯ ಬಂಡಿಪುರ ಹುಲಿ ರಕ್ಷಿತಾರಣ್ಯದ (BTR) ಮೂಲಕ ಕಾರಿನಲ್ಲಿ ಬರುತ್ತಿದ್ದ ದಂಪತಿಗೆ ಹುಲಿ ಎದುರಾಗಿದ್ದ ವಿಡಿಯೋವನನ್ನು ನಾವು ನಿಮಗೆ ಶನಿವಾರ ತೋರಿಸಿದ್ದೇವೆ. ಅಸಲು ಸಂಗತಿಯೆಂದರೆ ಈ ಭಾಗದಲ್ಲಿ ಅದರಲ್ಲೂ ವಿಶೇಷವಾಗಿ ಜಿಲ್ಲೆಯ ಚಿಕ್ಕರಂಗಶೆಟ್ಟಿದೊಡ್ಡಿ (Chikkarangashettydoddi) ಗ್ರಾಮದಲ್ಲಿ ಕಳೆದೊಂದು ವಾರದಿಂದ ಹುಲಿಯೊಂದು (tiger) ಪದೇಪದೆ ಕಾಣಿಸಿಕೊಳ್ಳುತ್ತಿರುವುದರಿಂದ ಗ್ರಾಮದ ಜನ ಭಯಭೀತರಾಗಿ ಆತಂಕದಲ್ಲಿ ಜೀವಿಸುತ್ತಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಗಮನಹರಿಸಿ ಕಾಡಿನಂಚಿನ ಗುಂಟ ಸೋಲಾರ್ ಬೇಲಿಯನ್ನು ಹಾಕಿಸಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.
Latest Videos