VIDEO: ದಿಢೀರ್ ಚೆಂಡು ಬದಲಿಸಿದ ಅಂಪೈರ್: ಟಿಮ್ ಡೇವಿಡ್‌ಗೆ ಡೌಟ್..!
RCB vs MI: ಕುತೂಹಲಕಾರಿ ವಿಷಯ ಎಂದರೆ, ಚೆಂಡು ಬದಲಾವಣೆಯ ಬಳಿಕ, ಅಂದರೆ ಕೊನೆಯ 2 ಓವರ್ಗಳಲ್ಲಿ ಆರ್ಸಿಬಿ ಕಲೆಹಾಕಿರುವುದು ಕೇವಲ 23 ರನ್ಗಳು ಮಾತ್ರ. ಈ ಮೂಲಕ ಆರ್ಸಿಬಿ 20 ತಂಡವು 20 ಓವರ್ಗಳಲ್ಲಿ 240 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ 20 ಓವರ್ಗಳಲ್ಲಿ 222 ರನ್ಗಳಿಸಿ 18 ರನ್ಗಳಿಂದ ಸೋಲೊಪ್ಪಿಕೊಂಡರು.
ಈ ಪಂದ್ಯದ 18ನೇ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ ಎಸೆದ ಎಸೆತವನ್ನು ಟಿಮ್ ಡೇವಿಡ್ ಭರ್ಜರಿ ಸಿಕ್ಸರ್‌ಗೆ ಅಟ್ಟಿದ್ದರು. ಔಟ್‌ಫೀಲ್ಡ್‌ನಲ್ಲಿ ತೇವಾಂಶ ಇದ್ದ ಕಾರಣ ಚೆಂಡು ಒದ್ದೆಯಾಗಿತ್ತು. ನಿಯಮದಂತೆ ಅಂಪೈರ್‌ಗಳು ಹಳೆಯ ಚೆಂಡುಗಳ ಬಾಕ್ಸ್ ತರಿಸಿ ಹೊಸ ಚೆಂಡನ್ನು ಆಯ್ಕೆ ಮಾಡಿದರು.
ಆದರೆ, ಅಂಪೈರ್ ಆಯ್ಕೆ ಮಾಡಿದ ಚೆಂಡನ್ನು ಕೈಗೆತ್ತಿಕೊಂಡ ಟಿಮ್ ಡೇವಿಡ್, ಅದರ ಆಕಾರ ಮತ್ತು ತೂಕವನ್ನು ಪರೀಕ್ಷಿಸಲು ಶುರು ಮಾಡಿದರು. ಅಂಪೈರ್ ಸ್ವರೂಪಾನಂದ್ ಕಣ್ಣೂರ್ ಅವರು “ಚೆಂಡನ್ನು ಕೊಡಿ” ಎಂದು ಪದೇ ಪದೇ ಕೇಳಿದರೂ, ಡೇವಿಡ್ ಚೆಂಡಿನ ಆಕಾರದ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಾ ಪರೀಕ್ಷಿಸುತ್ತಿದ್ದರು.
ಇದರಿಂದ ಕೋಪಗೊಂಡ ಅಂಪೈರ್‌ಗಳಾದ ಸ್ವರೂಪಾನಂದ್ ಮತ್ತು ವೀರೇಂದರ್ ಶರ್ಮಾ ಅವರು ಟಿಮ್ ಡೇವಿಡ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ ಡೇವಿಡ್‌ಗೆ ಮೈದಾನದ ಶಿಸ್ತಿನ ಬಗ್ಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಈ ವೇಳೆ ಆರ್ಸಿಬಿ ಆಟಗಾರ ಚೆಂಡನ್ನು ಹಿಂತಿರುಗಿಸಿದರು.
ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಟಿಮ್ ಡೇವಿಡ್‌ಗೆ ಚೆಂಡಿನ ಬಗ್ಗೆ ಅನುಮಾನಗಳು ಇದ್ದ ಕಾರಣ ಪರೀಕ್ಷಿಸಿದ್ದಾರೆ. ಇದಾಗ್ಯೂ ಅಂಪೈರ್ ಅವರೊಂದಿಗೆ ಜಗಳಕ್ಕಿಳಿದಿರುವುದು ಏಕೆ? ಎಂದು ಆರ್ಸಿಬಿ ಅಭಿಮಾನಿಗಳು ಪ್ರಶ್ನಿಸಿದ್ದಾರೆ.
ಕುತೂಹಲಕಾರಿ ವಿಷಯ ಎಂದರೆ, ಚೆಂಡು ಬದಲಾವಣೆಯ ಬಳಿಕ, ಅಂದರೆ ಕೊನೆಯ 2 ಓವರ್ಗಳಲ್ಲಿ ಆರ್ಸಿಬಿ ಕಲೆಹಾಕಿರುವುದು ಕೇವಲ 23 ರನ್ಗಳು ಮಾತ್ರ. ಈ ಮೂಲಕ ಆರ್ಸಿಬಿ 20 ತಂಡವು 20 ಓವರ್ಗಳಲ್ಲಿ 240 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ 20 ಓವರ್ಗಳಲ್ಲಿ 222 ರನ್ಗಳಿಸಿ 18 ರನ್ಗಳಿಂದ ಸೋಲೊಪ್ಪಿಕೊಂಡರು.