ತುಮಕೂರಿನಿಂದ ಸ್ಪರ್ಧಿಸುತ್ತೀರಾ ಅಂತ ಕೇಳಿದರೆ ಕಾಲವೇ ಎಲ್ಲವನ್ನು ನಿರ್ಣಯಿಸುತ್ತದೆ ಎಂದರು ಬಿವೈ ವಿಜಯೇಂದ್ರ

ತುಮಕೂರಿನಿಂದ ಸ್ಪರ್ಧಿಸುತ್ತೀರಾ ಅಂತ ಕೇಳಿದರೆ ಕಾಲವೇ ಎಲ್ಲವನ್ನು ನಿರ್ಣಯಿಸುತ್ತದೆ ಎಂದರು ಬಿವೈ ವಿಜಯೇಂದ್ರ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 12, 2022 | 9:51 PM

ಶ್ರೀಗಳ ಜಯಂತ್ಯುತ್ಸವ ಬಹಳ ಯಶಸ್ವೀಯಾಗಿ ನಡೆಯಿತು ಎನ್ನುವ ಕಾರಣಕ್ಕೆ ಅದರ ರಾಜಕೀಯ ಲಾಭ ಪಡೆದುಕೊಳ್ಳುವ ಉದ್ದೇಶ ತಮಗಿಲ್ಲ. ಆ ಕಾರ್ಯಕ್ರಮವನ್ನು ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಜನ ಮೆಚ್ಚಿದ್ದಾರೆ, ಶ್ರೀಗಳ ಆಶೀರ್ವಾದ ತಮ್ಮ ಕುಟುಂಬದ ಮೇಲೆ ನಿರಂತರವಾಗಿ ಇದೆ ಎಂದು ವಿಜಯೇಂದ್ರ ಹೇಳಿದರು.

Tumakuru: ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ (BY Vijayendra) ತುಮಕೂರು (Tumakuur) ಜಿಲ್ಲೆಯಲ್ಲಿ ಹೆಚ್ಚು ಓಡಾಡುತ್ತಿರುವುದು ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ (Assembly polls) ಜಿಲ್ಲೆಯ ಯಾವುದಾದರೂ ಕ್ಷೇತ್ರದಿಂದ ಸ್ಪರ್ಧಿಸಿಲು ಪೂರ್ವಭಾವಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆಯೇ ಎಂಬ ಗುಮಾನಿ ಮೂಡಿಸುತ್ತದೆ. ತುಮಕೂರು ನಗರದಲ್ಲಿ ಸುದ್ದಿಗಾರರು ಅವರಿಗೆ ಅದೇ ಪ್ರಶ್ನೆಯನ್ನು ಕೇಳಿದರು. ಸೋಜಿಗದ ಸಂಗತಿಯೆಂದರೆ ಆ ಸಾಧ್ಯತೆಯನ್ನು ಅವರು ನಿರಾಕರಿಸಲಿಲ್ಲ. ವೇದಾಂತಿಗಳ ಹಾಗೆ ಎಲ್ಲವನ್ನೂ ಕಾಲವೇ ನಿರ್ಣಯಿಸುತ್ತದೆ ಎಂದು ಹೇಳಿ ತಾನು ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡಿದರೂ ಸಮಾಜದ ಎಲ್ಲ ವರ್ಗಗಳ ಬೆಂಬಲ ಸಿಕ್ಕಿದೆ. ಕಾರ್ಯಕರ್ತರು ಕೂಡ ಬಹಳ ಸಂತೋಷದಿಂದ ಕೆಲಸಕ್ಕೆ ಮುಂದಾಗುತ್ತಾರೆ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ನಡೆದಾಡುವ ದೇವರೆಂದೇ ಕರೆಸಿಕೊಳ್ಳುತ್ತಿದ್ದ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಮತ್ತು ಮಠದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಶ್ರೀಗಳ ಜಯಂತ್ಯುತ್ಸವ ಬಹಳ ಯಶಸ್ವೀಯಾಗಿ ನಡೆಯಿತು ಎನ್ನುವ ಕಾರಣಕ್ಕೆ ಅದರ ರಾಜಕೀಯ ಲಾಭ ಪಡೆದುಕೊಳ್ಳುವ ಉದ್ದೇಶ ತಮಗಿಲ್ಲ. ಆ ಕಾರ್ಯಕ್ರಮವನ್ನು ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಜನ ಮೆಚ್ಚಿದ್ದಾರೆ, ಶ್ರೀಗಳ ಆಶೀರ್ವಾದ ತಮ್ಮ ಕುಟುಂಬದ ಮೇಲೆ ನಿರಂತರವಾಗಿ ಇದೆ ಎಂದು ವಿಜಯೇಂದ್ರ ಹೇಳಿದರು.

ಹಿಂದೆ ತಾನು ಕೆ ಅರ್ ಪೇಟೆ ಉಪಚುನಾಣೆಯಲ್ಲಿ ಕೆಲಸ ಮಾಡಿದಾಗ ಮತ್ತು ಶಿರಾ ಉಪಚುನಾವಣೆಯಲ್ಲಿ ತುಮಕೂರು ಭಾಗದಲ್ಲಿ ಕೆಲಸ ಮಾಡಿದಾಗ ಸಿಕ್ಕ ಬೆಂಬಲ ಮತ್ತು ಪ್ರೀತಿ-ವಿಶ್ವಾಸ ರಾಜ್ಯದ ಎಲ್ಲ ಭಾಗಗಳಲ್ಲಿ ಸಿಗುತ್ತದೆ ಎಂಬ ನಂಬಿಕೆಯಿದೆ ಎಂದು ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದರು.

ಇದನ್ನೂ ಓದಿ:  ತಮ್ಮ ಹುಳುಕು ಮುಚ್ಚಿಕೊಳ್ಳಲು ವಿರೋಧ ಪಕ್ಷದ ನಾಯಕರು ಇಲ್ಲಸಲ್ಲದ ಆರೋಪ ಮಾಡಿತ್ತಿದ್ದಾರೆ: ಬಿವೈ ವಿಜಯೇಂದ್ರ