ಪ್ರಯಾಣ ವಿಮೆ ಪ್ರೀಮಿಯಂನ ಉಪಯೋಗವೇನು..! ಇಲ್ಲಿದೆ ಮಾಹಿತಿ

ಪ್ರಯಾಣ ಮಾಡುವಾಗ ಪ್ರಯಾಣ ವಿಮೆ ಹೊಂದುವುದು ಪ್ರಯೋಜನಕಾರಿಯಾಗಿದೆ. ಈ ವಿಮೆ ಅನೇಕ ಸಮಸ್ಯೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಪ್ರಯಾಣ ವಿಮೆ ಪ್ರೀಮಿಯಂನ ಹಿಂದಿರುವ ಲೆಕ್ಕಾಚಾರವೇನು.

TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

May 13, 2022 | 7:20 AM

ಪ್ರತಿಯೊಬ್ಬರ ಜೀವನದಲ್ಲಿ ಪ್ರಯಾಣವು ಒಂದು ಪ್ರಮುಖ ಮತ್ತು ನಿಯಮಿತ ಅಮಶವಾಗಿದೆ. (Travel Insurance) ಹೊಸ ಸ್ಥಳಗಳಿಗೆ ಪ್ರವಾಸ ಮಾಡುವುದು ಯಾವಾಗಲೂ ಸಂತೋಷ, ಉತ್ಸಾಹ ಮತ್ತು ಸಾಹಸವನ್ನು ತರುತ್ತದೆ. ಆದಾಗ್ಯೂ, ಹೊಸ ಸ್ಥಳಗಳನ್ನು ಅನ್ವೇಷಿಸುವಾಗ ನಿಮಗೆ ಸಾಮಾನು ಸರಂಜಾಮು, ಪ್ರಯಾಣ ವಿಳಂಬ ಅಥವಾ ವೈದ್ಯಕೀಯ ತುರ್ತುಸ್ಥಿತಿ ಮುಂತಾದ ಅನಿರೀಕ್ಷಿತ ತುರ್ತುಸ್ಥಿತಿಗಳಿಂದ ನಿಮ್ಮನ್ನು ರಕ್ಷಿಸುವ ಬೆಂಬಲ ವ್ಯವಸ್ಥೆಯ ಅಗತ್ಯವಿರಬಹುದು. ಆದ್ದರಿಂದ ಪ್ರಯಾಣದಂತಹ ಅತ್ಯಗತ್ಯ ಪ್ರಯಾಣ ವಿಮೆ ಬಹಳ ಮುಖ್ಯ.

ಪ್ರಯಾಣ ಮಾಡುವಾಗ ಪ್ರಯಾಣ ವಿಮೆ ಹೊಂದುವುದು ಪ್ರಯೋಜನಕಾರಿಯಾಗಿದೆ. ಈ ವಿಮೆ ಅನೇಕ ಸಮಸ್ಯೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಪ್ರಯಾಣ ವಿಮೆ ಪ್ರೀಮಿಯಂನ ಹಿಂದಿರುವ ಲೆಕ್ಕಾಚಾರವೇನು. ಹಾಗಾದ್ರೆ ಈ ಪ್ರೀಮಿಯಂ ಹೇಗೆ ನಿರ್ಧಾರವಾಗುತ್ತೆ ಎಂಬುವುದನ್ನು ನಾವು ನಿಮಗೆ ತಿಳಿಸುತ್ತೇವೆ ಮುಂದೆ ಓದೆ. ಪ್ರೀಮಿಯಂ ಹಲವು ಅಂಶಗಳ ಮೇಲೆ ನಿರ್ಧಾರವಾಗುತ್ತದೆ. ಇದರಲ್ಲಿ ಸಮ್ ಇನ್ ಶ್ಶೂರ್ಡ್ ವಿಮೆ ಯೋಜನೆಯ ವಿಧಾನ. ಕವರೇಜ್ ಸೇರಿರುತ್ತದೆ. ಪ್ರಯಾಣದ ಅವಧಿ, ಸ್ಥಳ, ಪ್ರಯಾಣದ ಆವರ್ತನ, ಆರೋಗ್ಯ ಮತ್ತು ವಯಸ್ಸು ಪರಿಗಣನೆಯಾಗುತ್ತದೆ. ಸಮ್ ಇನ್ ಶ್ಶೂರ್ಡ್ ನಿಂದ ಪ್ರೀಮಿಯಮ್ ಮೊತ್ತ ನಿರ್ಧಾರವಾಗುತ್ತದೆ. ಬಡ್ಡಿ ದರ ಹಾಗೂ ಸಮ್ ಇನ್ ಶ್ಶೂರ್ಡ್ ನಡುವೆ ಗಮನಾರ್ಹ ಸಂಬಂಧವಿದೆ. ಸಮ್ ಇನ್ ಶ್ಶೂರ್ಡ್ ನಿರ್ಧರಿಸುವಾಗ ಪ್ರಯಾಣದ ಸ್ಥಳ ಗಮನದಲ್ಲಿಡಿ. ಸಮ್ ಇನ್ ಶ್ಶೂರೆನ್ಸ್​ ಯೋಜನೆ ವಿಧಾನಗಳ ಬಗ್ಗೆ ನೋಡುವುದಾದರೆ, ಸಿಂಗಲ್ ಟ್ರಿಪ್ ಪ್ಲಾನ್, ಮಲ್ಟಿ ಟ್ರಿಪ್ ಪ್ಲಾನ್ ಮುಂತಾದವು ಪ್ರಮುಖ ಪ್ರಯಾಣ ವಿಮೆ ಯೋಜನೆಗಳಾಗಿವೆ. ಯೋಜನೆ ಆಯ್ಕೆ ಆಧರಿಸಿ, ಪ್ರೀಮಿಯಮ್ ಲೆಕ್ಕ ಹಾಕಲಾಗುತ್ತದೆ. ಪ್ರಾಯಾಣ ವಿಮೆ ಯೋಜನೆಯಡಿಯಲ್ಲಿ ನೀವು ಹೆಚ್ಚಿನ ಕವರೇಜ್ ಪಡಯಬಹುದು. ನೀವು ಹೋಮ್ ಇನ್​ ಶ್ಶೂರೆನ್ಸ್ ಸಹ ಸೇರಿಸಬಹುದು. ನೀವು ದುಬಾರಿ ವಸ್ತುಗಳು ಹಾಗೂ ಪ್ರಮುಖ ದಾಖಲಾತಿಗಳನ್ನು ಕವರೇಜ್​ನಲ್ಲಿ ಸೇರಿಸಬಹುದು.

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow us on

Click on your DTH Provider to Add TV9 Kannada