ದುರ್ಗಾ ಪೂಜೆ ವೇಳೆ ಭಾವುಕರಾಗಿ ಕಣ್ಣೀರಿಟ್ಟ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ; ವಿಡಿಯೋ ವೈರಲ್
ಕಲ್ಯಾಣ್ ಬ್ಯಾನರ್ಜಿ ಅವರ ಈ ಭಾವುಕ ಕ್ಷಣದ ವೀಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ನೆಟ್ಟಿಗರು ಹಾಗೂ ಬೆಂಬಲಿಗರು ದೇವಿಯ ಮೇಲಿನ ಅವರ ಅಪಾರ ಭಕ್ತಿ ಹಾಗೂ ನಿಷ್ಠೆಯನ್ನು ಶ್ಲಾಘಿಸಿದರೆ, ಇನ್ನೂ ಕೆಲವರು ಕೋಲ್ಕತ್ತಾದಲ್ಲಿ ಇತ್ತೀಚೆಗೆ ನಡೆದ ಪೆಂಡಾಲ್ ಅನಾಹುತಗಳ ಹಿನ್ನೆಲೆಯಲ್ಲಿ ಅವರು ಈ ರೀತಿ ಮನನೊಂದು ಕಣ್ಣೀರಿಟ್ಟಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಸಂಸದ ಕಲ್ಯಾಣ್ ಮುಖರ್ಜಿ ಈ ರೀತಿ ಹಠಾತ್ತನೆ ಭಾವುಕರಾಗಿ ನಿಯಂತ್ರಣ ತಪ್ಪಿ ಅಳಲು ತೊಡಗಿದ್ದನ್ನು ಕಂಡ ಪಕ್ಕದಲ್ಲಿದ್ದ ಬೆಂಬಲಿಗರು ಹಾಗೂ ಪೂಜಾ ಸಮಿತಿಯ ಸದಸ್ಯರು ತಕ್ಷಣವೇ ಅವರನ್ನು ಸಮಾಧಾನಪಡಿಸಲು ಮುಂದಾದರು. ಅವರ ಹೆಗಲ ಮೇಲೆ ಕೈಯಿಟ್ಟು, ನೀರು ನೀಡಿ ಸಮಾಧಾನಪಡಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ಕೊಲ್ಕತ್ತಾ, ಅಕ್ಟೋಬರ್ 19: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಹಿರಿಯ ನಾಯಕ ಹಾಗೂ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ದುರ್ಗಾ ಪೂಜೆಯ ಸಂಭ್ರಮದ ನಡುವೆ ದೇವಿಯ ಎದುರು ಕೈಮುಗಿದು ‘ಮಾ, ಮಾ’ (ಅಮ್ಮಾ, ಅಮ್ಮಾ) ಎಂದು ಕಣ್ಣೀರಿಟ್ಟ ಘಟನೆ ನಡೆದಿದೆ. ಕಲ್ಯಾಣ್ ಬ್ಯಾನರ್ಜಿ ಭಾವುಕರಾಗಿ ಕಣ್ಣೀರು ಹಾಕುತ್ತಿರುವ ವೀಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಕೊಲ್ಕತ್ತಾದ ದುರ್ಗಾ ಪೂಜಾ ಪೆಂಡಾಲ್ ಒಂದರಲ್ಲಿ ದುರ್ಗಾದೇವಿಯ ದರ್ಶನ ಪಡೆಯಲು ಆಗಮಿಸಿದ್ದ ಕಲ್ಯಾಣ್ ಬ್ಯಾನರ್ಜಿ, ದೇವಿಯ ಮೂರ್ತಿಯನ್ನು ನೋಡುತ್ತಿದ್ದಂತೆ ಅತ್ಯಂತ ಭಾವುಕರಾದರು. ದೇವಿಯ ಎದುರು ಕೈಮುಗಿದು ನಿಂತ ಅವರು ‘ಮಾ, ಮಾ’ ಎಂದು ಜೋರಾಗಿ ಉದ್ಗರಿಸುತ್ತಾ ಭಾವುಕರಾಗಿ ಕಣ್ಣೀರಿಡಲು ಪ್ರಾರಂಭಿಸಿದರು.
ಸಂಸದ ಕಲ್ಯಾಣ್ ಮುಖರ್ಜಿ ಈ ರೀತಿ ಹಠಾತ್ತನೆ ಭಾವುಕರಾಗಿ ನಿಯಂತ್ರಣ ತಪ್ಪಿ ಅಳಲು ತೊಡಗಿದ್ದನ್ನು ಕಂಡ ಪಕ್ಕದಲ್ಲಿದ್ದ ಬೆಂಬಲಿಗರು ಹಾಗೂ ಪೂಜಾ ಸಮಿತಿಯ ಸದಸ್ಯರು ತಕ್ಷಣವೇ ಅವರನ್ನು ಸಮಾಧಾನಪಡಿಸಲು ಮುಂದಾದರು. ಅವರ ಹೆಗಲ ಮೇಲೆ ಕೈಯಿಟ್ಟು, ನೀರು ನೀಡಿ ಸಮಾಧಾನಪಡಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ಕಲ್ಯಾಣ್ ಬ್ಯಾನರ್ಜಿ ಅವರ ಈ ಭಾವುಕ ಕ್ಷಣದ ವೀಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ನೆಟ್ಟಿಗರು ಹಾಗೂ ಬೆಂಬಲಿಗರು ದೇವಿಯ ಮೇಲಿನ ಅವರ ಅಪಾರ ಭಕ್ತಿ ಹಾಗೂ ನಿಷ್ಠೆಯನ್ನು ಶ್ಲಾಘಿಸಿದರೆ, ಇನ್ನೂ ಕೆಲವರು ಕೋಲ್ಕತ್ತಾದಲ್ಲಿ ಇತ್ತೀಚೆಗೆ ನಡೆದ ಪೆಂಡಾಲ್ ಅನಾಹುತಗಳ ಹಿನ್ನೆಲೆಯಲ್ಲಿ ಅವರು ಈ ರೀತಿ ಮನನೊಂದು ಕಣ್ಣೀರಿಟ್ಟಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ