ಕೊಲ್ಕತ್ತಾದ ದುರ್ಗಾ ಪೂಜೆ ಪೆಂಡಾಲ್ ಕಾಲ್ತುಳಿತ ದುರಂತ; ಇಂದು ಸಂಜೆ 7.40ಕ್ಕೆ ನಿಜಕ್ಕೂ ಆಗಿದ್ದೇನು?
ಪಶ್ಚಿಮ ಬಂಗಾಳದ ಕೊಲ್ಕತ್ತಾದ ಚೋರ್ಬಗನ್ ಪೆಂಡಾಲ್ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಈಗಾಗಲೇ 17 ಭಕ್ತರು ಮೃತಪಟ್ಟಿದ್ದಾರೆ. ಸುಮಾರು 35 ಜನರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಸಿಎಂ ಸುವೇಂದು ಅಧಿಕಾರಿ ಈಗಾಗಲೇ ಆಸ್ಪತ್ರೆಗೆ ಭೇಟಿ ನೀಡಿ ಗಾಯಗೊಂಡವರ ಆರೋಗ್ಯ ವಿಚಾರಿಸಿದ್ದಾರೆ. ದುರ್ಗಾ ಪೂಜಾ ಪೆಂಡಾಲ್ನಲ್ಲಿ ಕಾಲ್ತುಳಿತವಾಗಿದ್ದು ಹೇಗೆ? ಇಂದು ಸಂಜೆ 7.30ಕ್ಕೆ ಆ ಪೆಂಡಾಲ್ನಲ್ಲಿ ಏನಾಯಿತು? ಎಂಬ ಪೂರ್ತಿ ಮಾಹಿತಿ ಇಲ್ಲಿದೆ.

ಕೊಲ್ಕತ್ತಾ, ಅಕ್ಟೋಬರ್ 17: ಕರ್ನಾಟಕದಲ್ಲಿ ದಸರಾ ಹಬ್ಬವನ್ನು ಹೇಗೆ ವಿಜೃಂಭಣೆಯಿಂದ ಆಚರಿಸುತ್ತೇವೋ ಹಾಗೇ ಪಶ್ಚಿಮ ಬಂಗಾಳದಲ್ಲಿ ನವರಾತ್ರಿಯ ಸಂದರ್ಭದಲ್ಲಿ ದುರ್ಗಾ ಪೂಜೆ ಬಹಳ ವಿಶೇಷವಾದುದು. ಪ್ರಮುಖ ಬೀದಿಗಳಲ್ಲಿ ದುರ್ಗಾ ಪೂಜಾ ಪೆಂಡಾಲ್ ಹಾಕಿ 9 ದಿನವೂ ವಿಶೇಷ ಪೂಜೆ ನಡೆಸಲಾಗುತ್ತದೆ. ಆದರೆ, ಇಂದು ಸಂಜೆ ಕೊಲ್ಕತ್ತಾದ ಚೋರ್ಬಗನ್ ದುರ್ಗಾ ಪೂಜಾ ಪೆಂಡಾಲ್ನಲ್ಲಿ ದೇವಿಯ ದರ್ಶನಕ್ಕೆ ಬಂದಿದ್ದ ಭಕ್ತರಿಗೆ ಕರಾಳ ದಿನವಾಗಿತ್ತು. ಜನದಟ್ಟಣೆ ಹೆಚ್ಚಾಗಿದ್ದರಿಂದ ಪೆಂಡಾಲ್ನ ಒಂದು ಭಾಗ ಕುಸಿದುಬಿದ್ದಿತು. ಈ ವೇಳೆ ಕಾಲ್ತುಳಿತ ಉಂಟಾಗಿ 17 ಜನರು ಮೃತಪಟ್ಟಿದ್ದಾರೆ. 30ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ನಡೆದಿದ್ದು ಹೇಗೆಂಬ ಮಾಹಿತಿ ಇಲ್ಲಿದೆ.
ಪೆಂಡಾಲ್ ಒಳಗೆ ಕಡಿಮೆ ಬೆಳಕಿನಿಂದಾಗಿ ಏನೂ ಸರಿಯಾಗಿ ಕಾಣುತ್ತಿರಲಿಲ್ಲ. ಬೆಳಕಿನಿಂದ ಕತ್ತಲೆಯಾದ ಪ್ರದೇಶಕ್ಕೆ ಪ್ರವೇಶಿಸಲು ಮತ್ತು ನಿರ್ಗಮಿಸಲು ಒಂದೇ ದಾರಿಯಿತ್ತು. ಪೆಂಡಾಲ್ ಕುಸಿದುಬೀಳುತ್ತಿದ್ದಂತೆ ಆತಂಕಗೊಂಡ ಭಕ್ತರು ಒಳಗಿಂದ ಹೊರಗೆ ಓಡಿಬರಲಾರಂಭಿಸಿದರು. ಆಗ ನೂಕುನುಗ್ಗಲು ಉಂಟಾಗಿ ಅನೇಕ ಜನರು ಕೆಳಗೆ ಬಿದ್ದರು. ಜೀವ ಉಳಿಸಿಕೊಳ್ಳಲು ಓಡುತ್ತಿದ್ದ ಜನರಿಗೆ ಕೆಳಗೆ ಬಿದ್ದವರು ಕಾಣಲಿಲ್ಲ. ಹೀಗಾಗಿ, ತೀವ್ರವಾಗಿ ಗಾಯಗೊಂಡ ಅವರು ಮೃತಪಟ್ಟಿದ್ದಾರೆ. ಇನ್ನೂ 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಇದನ್ನೂ ಓದಿ: ಕೊಲ್ಕತ್ತಾದ ದುರ್ಗಾ ಪೂಜಾ ಪೆಂಡಾಲ್ ಕುಸಿದು ಕಾಲ್ತುಳಿತ; 17 ಭಕ್ತರು ಸಾವು
ಇಂದು ಸಂಜೆ 7.40ರ ವೇಳೆ ಈ ಘಟನೆ ನಡೆದಿದೆ. ಹೊರಗೆ ಮಳೆಯೂ ಬರುತ್ತಿದ್ದರಿಂದ ಆ ಸ್ಥಳ ಪೂರ್ತಿ ಅಸ್ತವ್ಯಸ್ತವಾಗಿತ್ತು. ಈ ಘಟನೆಯಲ್ಲಿ ಗಾಯಗೊಂಡವರನ್ನು ತಕ್ಷಣವೇ ರಕ್ಷಿಸಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೊಲ್ಕತ್ತಾ ಪೊಲೀಸರ ಪ್ರಕಾರ, ಭಕ್ತರ ಭಾರೀ ಜನದಟ್ಟಣೆಯ ನಡುವೆ ಶಾರದಾ ಪಾರ್ಕ್ (ಚೋರ್ಬಗನ್) ಪೂಜಾ ಪೆಂಡಾಲ್ನ ಎಕ್ಸಿಟ್ ಗೇಟ್ ಬಳಿ ಏಕಾಏಕಿ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ. ಸದ್ಯ ಸುಮಾರು 35 ಜನರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
Just in:- I’m praying for the safety of those present at the Chorbagan Kolkata #DurgaPuja pandal. The images are concerning. The situation is akin to a stampede. More than 30 people have been injured. The injured have been taken to the hospital.
#Stampede https://t.co/JAQGoSDv0R
— 𝐂𝐚𝐫𝐩𝐞𝐝𝐢𝐞𝐦 (@the_carpdiem1) October 17, 2026
ಈ ಘಟನೆ ತಿಳಿಯುತ್ತಿದ್ದಂತೆ ಪೊಲೀಸ್ ಸಿಬ್ಬಂದಿ, ಅಗ್ನಿಶಾಮಕ ದಳ, ವಿಪತ್ತು ನಿರ್ವಹಣಾ ಗುಂಪು (DMG) ಹಾಗೂ ವೈದ್ಯಕೀಯ ತಂಡಗಳೊಂದಿಗೆ ಆಂಬ್ಯುಲೆನ್ಸ್ಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದವು. ಅನಾಹುತದ ಬೆನ್ನಲ್ಲೇ ಪೂಜಾ ಪೆಂಡಾಲ್ ಅನ್ನು ಸಾರ್ವಜನಿಕರ ಪ್ರವೇಶಕ್ಕಾಗಿ ತಾತ್ಕಾಲಿಕವಾಗಿ ಮುಚ್ಚಲಾಗಿದೆ.
ಅಮಿತ್ ಶಾ ಬೇಸರ:
ಕೊಲ್ಕತ್ತಾದಲ್ಲಿ ನಡೆದ ಕಾಲ್ತುಳಿತದ ಘಟನೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. ನಾಳೆಯ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಿರುವ ಅಮಿತ್ ಶಾ ಆಸ್ಪತ್ರೆಗೆ ತೆರಳಿ ಗಾಯಾಳುಗಳನ್ನು ಭೇಟಿಯಾಗಲಿದ್ದಾರೆ.
Kolkata’s Chorbagan Sarbojanin Durga Puja stampede incident | Union Home Minister Amit Shah tweets, “I have spoken with Chief Minister Suvendu Adhikari regarding this incident. I will postpone all my scheduled programs in West Bengal for tomorrow and visit the hospital to meet the injured…”
“I pray for the peace of the souls of the devotees who lost their lives in this tragedy and extend my condolences to their families. The administration is providing all possible medical assistance to those injured. I will postpone all my scheduled programs in West Bengal for tomorrow and visit the hospital to meet the injured. I pray to Maa Durga for the speedy recovery of all those who have been hurt”
— ANI (@ANI) October 17, 2026
ಮಮತಾ ಬ್ಯಾನರ್ಜಿ ಸಂತಾಪ:
ಈ ದುರ್ಘಟನೆಯ ಕುರಿತು ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತೀವ್ರ ಆಘಾತ ವ್ಯಕ್ತಪಡಿಸಿದ್ದು, “ಚೋರ್ಬಾಗನ್ ಪೂಜಾ ಪೆಂಡಾಲ್ನಲ್ಲಿ ನಡೆದ ಕಾಲ್ತುಳಿತದ ಸುದ್ದಿ ತಿಳಿದು ನನಗೆ ತೀವ್ರ ಆಘಾತ ಮತ್ತು ದುಃಖವಾಗಿದೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಮಾ ದುರ್ಗಾದೇವಿಯಲ್ಲಿ ಪ್ರಾರ್ಥಿಸುವುದಾಗಿ ಅವರು ತಿಳಿಸಿದ್ದಾರೆ.
ಪರಿಸ್ಥಿತಿಯನ್ನು ಹತೋಟಿಗೆ ತರಲು ಮತ್ತು ಹೆಚ್ಚಿನ ಮಾಹಿತಿ ಕಲೆಹಾಕಲು ಪೊಲೀಸ್ ಹಾಗೂ ತುರ್ತು ಸೇನಾಪಡೆಗಳು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿವೆ. ಈಗಾಗಲೇ ಸಹಾಯವಾಣಿಯನ್ನು ಕೂಡ ತೆರೆಯಲಾಗಿದೆ.
ಈ ಘಟನೆ ನಡೆದಾಗ ಪೆಂಡಾಲ್ನ ಸ್ವಯಂ ಸೇವಕರು ಏನು ಮಾಡುತ್ತಿದ್ದರು? ಆಡಳಿತ ಮಂಡಳಿ ಯಾಕೆ ಸರಿಯಾದ ವ್ಯವಸ್ಥೆ ಮಾಡಲಿಲ್ಲ? ಎಂಬ ಭಕ್ತರು ಪ್ರಶ್ನೆ ಮಾಡಿದ್ದಾರೆ. ಈ ದುರಂತ ಸಂಭವಿಸಿದಾಗ ಆ ಸ್ಥಳದಲ್ಲಿ ಆ್ಯಂಬುಲೆನ್ಸ್ ಕೂಡ ಇರಲಿಲ್ಲ. ಹೀಗಾಗಿ, ಸ್ಥಳೀಯರ ವಾಹನಗಳಲ್ಲೇ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




