ಕರುಣಾನಿಧಿಗಿಂತ ಸ್ಟಾಲಿನ್ ಅಪಾಯಕಾರಿ, ಆದರೆ ವಿಜಯ್ ಎಂಜಿಆರ್ ಗಿಂತ ಅಪಾಯಕಾರಿ: ರೊಚ್ಚಿಗೆದ್ದ ಅಭಿಮಾನಿಗಳು

Updated on: May 04, 2026 | 12:48 PM

ತಮಿಳುನಾಡು ರಾಜಕೀಯದಲ್ಲಿ ಸ್ಟಾಲಿನ್ ಮತ್ತು ವಿಜಯ್ ಅವರ ನಾಯಕತ್ವ ಕರುಣಾನಿಧಿ ಮತ್ತು ಎಂ.ಜಿ.ಆರ್. ಗಿಂತ ಹೆಚ್ಚು ಪ್ರಬಲವಾಗಿದೆಯೇ ಎಂಬ ಪ್ರಶ್ನೆ ಮೂಡಿದೆ. ಸ್ಟಾಲಿನ್ ಅವರ ವ್ಯವಸ್ಥಿತ ಆಡಳಿತ ಮತ್ತು ವಿಜಯ್ ಅವರ ಜನಪ್ರಿಯತೆ ಹೊಸ ರಾಜಕೀಯ ಸಮೀಕರಣಗಳಿಗೆ ನಾಂದಿ ಹಾಡಿವೆ. ಇಂದಿನ ನಾಯಕರು ಹಿರಿಯರ ಪರಂಪರೆಯನ್ನು ಮೀರಿ ಬದಲಾವಣೆ ತರುತ್ತಾರೆಯೇ ಎಂಬ ಕುತೂಹಲವಿದೆ.

ಚೆನ್ನೈ, ಮೇ.4: ತಮಿಳುನಾಡು ರಾಜಕೀಯ ಇತಿಹಾಸದ ದೊಡ್ಡ ನಾಯಕರಾದ ಕರುಣಾನಿಧಿ ಮತ್ತು ಎಂ.ಜಿ.ಆರ್ (MGR) ಅವರಿಗೆ ಹೋಲಿಸಿದರೆ ಇಂದಿನ ನಾಯಕರು ಹೆಚ್ಚು ಪ್ರಬಲವಾಗುತ್ತಿದ್ದಾರೆಯೇ ಎಂಬ ಪ್ರಶ್ನೆ ಎದ್ದಿದೆ. ಸ್ಟಾಲಿನ್ ಅವರ ರಾಜತಾಂತ್ರಿಕ ನಡೆಗಳು ಮತ್ತು ವಿಜಯ್ ಅವರ ಜನಪ್ರಿಯತೆ ಈಗ ಹೊಸ ಸಮೀಕರಣಗಳಿಗೆ ನಾಂದಿ ಹಾಡುತ್ತಿವೆ. ಕರುಣಾನಿಧಿ ಅವರಿಗಿಂತಲೂ ಸ್ಟಾಲಿನ್ ಅವರು ಹೆಚ್ಚು ವ್ಯವಸ್ಥಿತವಾಗಿ (Systematic) ಪಕ್ಷ ಮತ್ತು ಸರ್ಕಾರವನ್ನು ಮುನ್ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.ಎಂ.ಜಿ.ಆರ್ ನಂತರ ಅಷ್ಟೇ ಮಟ್ಟದ ಜನಬೆಂಬಲ ಹೊಂದಿರುವ ವಿಜಯ್, ರಾಜಕೀಯವಾಗಿ ಎಂ.ಜಿ.ಆರ್ ಅವರಿಗಿಂತಲೂ ದೊಡ್ಡ ಬದಲಾವಣೆ ತರಬಲ್ಲರೇ ಎಂಬ ಕುತೂಹಲ ಮೂಡಿದೆ. ಇದೀಗ ಸೋಶಿಯಲ್​ ಮೀಡಿಯಾದಲ್ಲಿ ಭಾರೀ ವಿಜಯ್​​ ಬಗ್ಗೆ  ಮೀಮ್ಸ್​​ಗಳು ವೈರಲ್​ ಆಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Akshay Pallamajalu

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More