ಸುಹಾಸ್​ಗೆ ನಿನ್ನೆ ಊರಿಗೆ ಬಾ ಅಂತ ಹೇಳಿದ್ದೆ, ಅದರೆ ಬರಲಿಲ್ಲ, ಕೊಲೆ ಸುದ್ದಿ ಬಂತು: ಮೋಹನ್ ಶೆಟ್ಟಿ, ಸುಹಾಸ್ ತಂದೆ

ಅರುಣ್​ ಕುಮಾರ್​ ಬೆಳ್ಳಿ

Updated on: May 02, 2025 | 12:15 PM

ಸುಹಾಸ್ ವಿರುದ್ಧ ಪ್ರಕರಣವೊಂದು ದಾಖಲಾಗಿತ್ತು ಮತ್ತು ಅದೇ ಕಾರಣಕ್ಕೆ ಅವನ ಕೊಲೆಯಾಗಿರುವ ಸಾಧ್ಯತೆ ಇದೆಯೆಂದು ಮೋಹನ್ ಶೆಟ್ಟಿ ಹೇಳುತ್ತಾರೆ. ಅವನಿಗಿನ್ನೂ ಮದುವೆಯಾಗಿರಲಿಲ್ಲ, ತಮ್ಮದೊಂದು ಹಳೆಯ ಇದ್ದು ಅದನ್ನು ಕೆಡವಿ ಹೊಸ ಮನೆ ಕಟ್ಟಿದ ನಂತರ ಮದುವೆಯಾಗೋದಾಗಿ ಸುಹಾಸ್ ಹೇಳುತ್ತಿದ್ದ ಎಂದು ಮೋಹನ್ ಶೆಟ್ಟಿ ಹೇಳುತ್ತಾರೆ.

ಮಂಗಳೂರು, ಮೇ 2: ನಿನ್ನೆ ಕೊಲೆಯಾದ ಸುಹಾಸ್ ಶೆಟ್ಟಿಯ ತಂದೆ ಮೋಹನ್ ಶೆಟ್ಟಿ (Mohan Shetty) ಅವರು ನಮ್ಮ ಮಂಗಳೂರು ವರದಿಗಾರನೊಂದಿಗೆ ಮಾತಾಡಿದ್ದು, ಕಳೆದ ಒಂದೂವರೆ ವರ್ಷದಿಂದ ತನ್ನ ಮಗ ಯಾವುದೇ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿರಲಿಲ್ಲ ಎಂದು ಹೇಳುತ್ತಾರೆ. ಬೆಳ್ತಂಗಡಿಯಲ್ಲಿ ತನ್ನ ತಮ್ಮನ ಮಗಳ ಮದುವೆ ಇತ್ತು, ಏಪ್ರಿಲ್ 29 ಮತ್ತು 30 ರಂದು ಅವನು ಅಲ್ಲೇ ಇದ್ದ, ನಂತರ ಮೇ 1ರಂದು ಬಜ್ಪೆಗೆ ಯಾವುದೋ ಕೆಲಸದ ನಿಮಿತ್ತ ಹೋಗಿದ್ದ ಎಂದು ಮೋಹನ್ ಶೆಟ್ಟಿ ಹೇಳುತ್ತಾರೆ. ಸುಹಾಸ್ ಹತ್ಯೆಯಾದ ಸುದ್ದಿ ಅವರಿಗೆ ನಿನ್ನೆ ರಾತ್ರಿ 9 ಗಂಟೆಗೆ ಗೊತ್ತಾಗಿದೆ.

ಇದನ್ನೂ ಓದಿ:  ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ: ಇಂದು ದಕ್ಷಿಣ ಕನ್ನಡ ಬಂದ್, ಮಂಗಳೂರಿನಲ್ಲಿ ನಿಷೇಧಾಜ್ಞೆ

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.