Bumper price for tomato: ಪೊಲೀಸ್ ಕೆಲಸ ಮಾಡಿಕೊಂಡು ಟೊಮೆಟೊ ಬೆಳೆಗಾರನಾಗಿರುವ ಭೈರೇಶ್ ಈಗ ಲಕ್ಷಾಧಿಪತಿ!

|

Updated on: Jul 14, 2023 | 12:45 PM

ಹಿಂದೆಲ್ಲ ಕೇವಲ ರೂ.100 ಗಳಿಗೆ ಒಂದು ಕ್ರೇಟ್ ಟೊಮೆಟೊ ಮಾರುತ್ತಿದ್ದವರಿಗೆ ಈ ಬಾರಿ ಚಿಕ್ಕಮಗಳೂರು ಮಾರ್ಕೆಟ್ ನಲ್ಲಿ ಪ್ರತಿ ಕ್ರೇಟ್ ಗೆ ರೂ 3,800 ರವರೆಗೆ ಬೆಲೆ ಸಿಕ್ಕಿದೆಯಂತೆ!

ಹಾಸನ: ಈ ವರ್ಷ ಟೊಮೆಟೊ (tomato) ಬೆಳೆದ ರೈತ ಬಂಗಾರದ ಮನುಷ್ಯ ಮಾರಾಯ್ರೇ. ಬೆಳೆದ ಫಸಲಿಗೆ ಬೆಲೆಯಿಲ್ಲದೆ ರೈತರು ಟೊಮೆಟೊ ಹಣ್ಣು ರಸ್ತೆಗೆ ತಂದು ಬಿಸಾಡಿದ್ದನ್ನು ನಾವು ಹಲವಾರು ಬಾರಿ ವರದಿ ಮಾಡಿದ್ದೇವೆ. ಆದರೆ ಈ ವರ್ಷದ ಕತೆ ಸಂಪೂರ್ಣವಾಗಿ ಭಿನ್ನವಾಗಿದೆ. ವೃತ್ತಿಯಲ್ಲಿ ಪೊಲೀಸ್ ಕಾನ್ ಸ್ಟೇಬಲ್ (police constable) ಆಗಿದ್ದರೂ ಬೇಸಾಯ ಮತ್ತು ತೋಟಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಜಿಲ್ಲೆಯ ಬೇಲೂರು ತಾಲ್ಲೂಕಿನ ಬಸ್ತಿಹಳ್ಳಿಯ ಭೈರೇಶ್ (Bhyresh) ತಮ್ಮ ತೋಟದಲ್ಲಿ ಬೆಳೆದ ಟೊಮೆಟೊಗೆ ಬಂಪರ್ ಬೆಲೆ ಪಡೆದಿದ್ದಾರೆ. ತಮ್ಮ 1 ಎಕರೆ ಮತ್ತು 6 ಗುಂಟೆ ಜಮೀನಲ್ಲಿ ಅವರು 2 ಎಕರೆ ಜಮೀನಲ್ಲಿ ಬೆಳೆಯುವಷ್ಟು ಫಸಲು ಬೆಳೆದಿದ್ದಾರೆ. ಅವರು ಹೇಳುವಂತೆ ಹಿಂದೆಲ್ಲ ಕೇವಲ ರೂ.100 ಗಳಿಗೆ ಒಂದು ಕ್ರೇಟ್ ಟೊಮೆಟೊ ಮಾರುತ್ತಿದ್ದವರಿಗೆ ಈ ಬಾರಿ ಚಿಕ್ಕಮಗಳೂರು ಮಾರ್ಕೆಟ್ ನಲ್ಲಿ ಪ್ರತಿ ಕ್ರೇಟ್ ಗೆ ರೂ 3,800 ರವರೆಗೆ ಬೆಲೆ ಸಿಕ್ಕಿದೆಯಂತೆ! ದೇನೆವಾಲಾ ಜಬ್ ಭೀ ದೇತಾ ದೇತಾ ಛಪ್ಪಡ್ ಫಾಡ್ ಕೇ… ಅನ್ನೋದು ನಿಜ ಮಾರಾಯ್ರೇ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ