ಸಮುದ್ರ ದಡಕ್ಕೆ ಬಂದು ಅಪ್ಪಳಿಸಿದ ರಾಶಿ ರಾಶಿ ಮೀನುಗಳು, ಜನರಿಗೆ ಖುಷಿಯೋ ಖುಷಿ

ಸಮುದ್ರ ದಡಕ್ಕೆ ಬಂದು ಅಪ್ಪಳಿಸಿದ ರಾಶಿ ರಾಶಿ ಮೀನುಗಳು, ಜನರಿಗೆ ಖುಷಿಯೋ ಖುಷಿ

TV9 Web
| Updated By: ಆಯೇಷಾ ಬಾನು

Updated on:Oct 28, 2022 | 3:54 PM

ಪಡುಕರೆಯ ಕಡಲ ತೀರಕ್ಕೆ ರಾಶಿ ರಾಶಿ ಭೂತಾಯಿ ಮೀನುಗಳು ಅಲೆಗಳ ಸಮೇತ ಬಂದಿವೆ. ಹಾಗೂ ಬಲೆ ಬೀಸಿದವರ ಬಲೆಗೆ ಬಲೆಯೇ ಕಿತ್ತುಕೊಂಡು ಹೋಗುವ ರೀತಿ ರಾಶಿ ರಾಶಿ ಮೀನುಗಳು ಕೈ ಸೇರುತ್ತಿವೆ.

ಉಡುಪಿ: ಬಲೆ ಹಾಕದೇ ರಾಶಿ ರಾಶಿ ಮೀನುಗಳು ಕೈ ಸೇರೋದು ಅಂದ್ರೆ ಎಷ್ಟು ಖುಷಿಯ ವಿಚಾರ ಅಲ್ವಾ. ಪಡುಕರೆ ಕಡಲ ತಡಿಗೆ ಬೈಗೆ ಮೀನು ಬಂದು ಅಪ್ಪಳಿಸಿವೆ. ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಡುಕರೆಯ ಕಡಲ ತೀರಕ್ಕೆ ರಾಶಿ ರಾಶಿ ಭೂತಾಯಿ ಮೀನುಗಳು ಅಲೆಗಳ ಸಮೇತ ಬಂದಿವೆ. ಹಾಗೂ ಬಲೆ ಬೀಸಿದವರ ಬಲೆಗೆ ಬಲೆಯೇ ಕಿತ್ತುಕೊಂಡು ಹೋಗುವ ರೀತಿ ರಾಶಿ ರಾಶಿ ಮೀನುಗಳು ಕೈ ಸೇರುತ್ತಿವೆ. ಕಡಲ ತೀರದಲ್ಲಿ ಮೀನಿಗಳನ್ನು ಖರೀದಿಸಲು ಜನ ಮುಗಿಬಿದ್ದಿದ್ದು ಸುಗ್ಗಿ ಶುರುವಾಗಿದೆ.

Published on: Oct 28, 2022 03:54 PM