ತೊಗರಿ ಇಳುವರಿ, ಬೆಲೆ ಕಡಿಮೆ: ತೊಗರಿ ಕಣಜ ಕಲಬುರಗಿಯಲ್ಲಿ ಬೆಳೆಗಾರರು ಕಂಗಾಲು
Toor dal prices down kalaburagi farmers worried lot ತೊಗರಿ ಇಳುವರಿ, ಬೆಲೆ ಕಡಿಮೆ: ತೊಗರಿ ಕಣಜ ಕಲಬುರಗಿಯಲ್ಲಿ ಬೆಳೆಗಾರರು ಕಂಗಾಲು ರಾಜ್ಯದ ತೊಗರಿ ಕಣಜ ಅಂತ ಖ್ಯಾತಿ ಪಡೆದಿರೋದು ಕಲಬುರಗಿ ಜಿಲ್ಲೆ. ಆದ್ರೆ ಕಲಬುರಗಿಯಲ್ಲಿಯೇ ಈ ವರ್ಷ ತೊಗರಿ ಇಳುವರಿ ಕಡಿಮೆಯಾಗಿದೆ. ಇನ್ನೊಂದಡೆ ರಾಜ್ಯ ಸರ್ಕಾರ ತೊಗರಿ ಬೆಳೆಗಾರರಿಗೆ ಶಾಕ್ ನೀಡಿದೆ. ಇದನ್ನು ಖಂಡಿಸಿ ರೈತರು ಇದೀಗ ಬೀದಿಗಿಳಿದಿದ್ದಾರೆ. ತೊಗರಿಗೆ ಪ್ರೋತ್ಸಾಹಧನ ನೀಡಬೇಕು ಅಂತ ಆಗ್ರಹಿಸುತ್ತಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಮುಂದೆ ತೊಗರಿಯನ್ನು ಹಾಕಿ ಆಕ್ರೋಶ […]
Toor dal prices down kalaburagi farmers worried lot ತೊಗರಿ ಇಳುವರಿ, ಬೆಲೆ ಕಡಿಮೆ: ತೊಗರಿ ಕಣಜ ಕಲಬುರಗಿಯಲ್ಲಿ ಬೆಳೆಗಾರರು ಕಂಗಾಲು
ರಾಜ್ಯದ ತೊಗರಿ ಕಣಜ ಅಂತ ಖ್ಯಾತಿ ಪಡೆದಿರೋದು ಕಲಬುರಗಿ ಜಿಲ್ಲೆ. ಆದ್ರೆ ಕಲಬುರಗಿಯಲ್ಲಿಯೇ ಈ ವರ್ಷ ತೊಗರಿ ಇಳುವರಿ ಕಡಿಮೆಯಾಗಿದೆ. ಇನ್ನೊಂದಡೆ ರಾಜ್ಯ ಸರ್ಕಾರ ತೊಗರಿ ಬೆಳೆಗಾರರಿಗೆ ಶಾಕ್ ನೀಡಿದೆ. ಇದನ್ನು ಖಂಡಿಸಿ ರೈತರು ಇದೀಗ ಬೀದಿಗಿಳಿದಿದ್ದಾರೆ. ತೊಗರಿಗೆ ಪ್ರೋತ್ಸಾಹಧನ ನೀಡಬೇಕು ಅಂತ ಆಗ್ರಹಿಸುತ್ತಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಮುಂದೆ ತೊಗರಿಯನ್ನು ಹಾಕಿ ಆಕ್ರೋಶ ವ್ಯಕ್ತಪಡಿಸುತ್ತಿರುವ ರೈತರು…. ಪ್ರತಿಭಟನಾ ನಿರತ ರೈತರನ್ನು ವಶಕ್ಕೆ ಪಡೆಯುತ್ತಿರುವ ಪೊಲೀಸರು… ಈ ದೃಶ್ಯ ಕಂಡುಬಂದಿದ್ದು ಕಲಬುರಗಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ.
ಹೌದು, ರಾಜ್ಯದ ತೊಗರಿ ಕಣಜ ಅಂತ ಖ್ಯಾತಿ ಪಡೆದಿರುವ ಕಲಬುರಗಿ ಜಿಲ್ಲೆಯಲ್ಲಿ ಪ್ರತಿ ವರ್ಷ ನಲವತ್ತೈದು ಸಾವಿರ ಕ್ವಿಂಟಲ್ ತೊಗರಿಯನ್ನು ಬೆಳೆಯಲಾಗುತ್ತಿತ್ತು. ಆದ್ರೆ ಈ ಭಾರಿ ರೈತರು ಹೆಚ್ಚಿನ ಭೂಮಿಯಲ್ಲಿ ತೊಗರಿಯನ್ನು ಬಿತ್ತನೆ ಮಾಡಿದ್ರು ಕೂಡಾ, ನಿರೀಕ್ಷಿತ ಇಳುವರಿ ಬಂದಿಲ್ಲ. ಜಿಲ್ಲೆಯಲ್ಲಿ ಹೆಚ್ಚಿನ ತೊಗರಿ ಪ್ರವಾಹ ಮತ್ತು ಮಳೆಯಿಂದಾಗಿ ಹಾಳಾಗಿ ಹೋಗಿದೆ. ಹೀಗಾಗಿ ಪ್ರತಿ ಎಕರೆಗೆ ಐದರಿಂದ ಎಂಟು ಕ್ವಿಂಟಲ್ ವರಗೆ ಬರ್ತಾಯಿದ್ದ ತೊಗರಿ ಇಳುವರಿ ಈ ಬಾರಿ ಪ್ರತಿ ಎಕರೆಗೆ ಎರಡರಿಂದ ಮೂರು ಕ್ವಿಂಟಲ್ ಗೆ ಬಂದಿದೆ. ತೊಗರಿ ಇಳುವರಿ ಕಡಿಮೆಯಾಗಿರುವದರಿಂದ ತೊಗರಿ ಬೆಳೆಗಾರರು ಕಂಗಾಲಾಗಿದ್ದಾರೆ.