ಸ್ಮಾರ್ಟ್ ಸಿಟಿ ಶಿವಮೊಗ್ಗದ ಅಶ್ವಥ್ ನಗರದಲ್ಲಿ ಕೃತಕ ಜಲಪಾತವೊಂದನ್ನು ಸೃಷ್ಟಿಸಿದ ಚರಂಡಿ!

ಅರುಣ್​ ಕುಮಾರ್​ ಬೆಳ್ಳಿ

Updated on: Aug 16, 2024 | 7:11 PM

ರಾಜ್ಯದ 6 ಸ್ಮಾರ್ಟ್ ಸಿಟಿ ಯೋಜನೆಯ ಆರು ನಗರಗಳಲ್ಲಿ ಶಿವಮೊಗ್ಗ ಕೂಡ ಒಂದು. ಉಳಿದ ಐದು; ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ದಾವಣಗೆರೆ, ತುಮಕೂರು ಮತ್ತು ಮಂಗಳೂರು. ವಿಷಾದಕರ ಸಂಗತಿಯೆಂದರೆ ಇವುಗಳಲ್ಲಿ ಯಾವ ನಗರವೂ ಸ್ಮಾರ್ಟ್ ಸಿಟಿಯಾಗಿ ರೂಪುಗೊಂಡಿಲ್ಲ.

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿರುವ ಜೋಗ ಜಲಪಾತ ವಿಶ್ವಪ್ರಸಿದ್ಧ. ಮಳೆಗಾಲದ ಸಮಯದಲ್ಲಿ ಅದನ್ನು ನೋಡಲು ಅಸಂಖ್ಯಾತ ಪ್ರವಾಸಿಗರು ದೇಶವಿದೇಶಗಳಿಂದ ಬರುತ್ತಾರೆ. ಅದರೆ ಶಿವಮೊಗ್ಗ ನಗರದ ಆಶ್ವಥ್ ನಗರದಲ್ಲಿರುವ ಈ ಜಲಪಾತದ ಬಗ್ಗೆ ನಗರದ ನಿವಾಸಿಗಳಿಗೂ ಗೊತ್ತಿರಲಿಕ್ಕಿಲ್ಲ. ಅಂದಹಾಗೆ, ಇದೊಂದು ಫೇಕ್ ಜಲಪಾತ ಮಾರಾಯ್ರೇ. ಅಸಲಿಗೆ ಶಿವಮೊಗ್ಗದಲ್ಲಿ ಜೋರಾಗಿ ಮಳೆ ಸುರಿದಿರುವುದರಿಂದ ಅಶ್ವಥ್ ನಗರದಲ್ಲಿರುವ ಗಾರೆ ಕಾಲುವೆ ತುಂಬಿ ಹರಿಯುತ್ತಿದ್ದು ಜಲಪಾತದಂಥ ಚಿತ್ರಣ ಮೂಡಿದೆ. ರಾಜ್ಯದ 6 ಸ್ಮಾರ್ಟ್ ಸಿಟಿ ಯೋಜನೆಯ ಆರು ನಗರಗಳಲ್ಲಿ ಶಿವಮೊಗ್ಗ ಕೂಡ ಒಂದು. ಉಳಿದ ಐದು; ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ದಾವಣಗೆರೆ, ತುಮಕೂರು ಮತ್ತು ಮಂಗಳೂರು. ವಿಷಾದಕರ ಸಂಗತಿಯೆಂದರೆ ಇವುಗಳಲ್ಲಿ ಯಾವ ನಗರವೂ ಸ್ಮಾರ್ಟ್ ಸಿಟಿಯಾಗಿ ರೂಪುಗೊಂಡಿಲ್ಲ. ಶಿವಮೊಗ್ಗದ ಈ ರಸ್ತೆಯನ್ನು ನೋಡಿ. ವಾಹನಗಳ ಅರ್ಧಚಕ್ರ ಮುಳುಗುವಷ್ಟು ಚರಂಡಿ ನೀರು ರಸ್ತೆಯ ಮೇಲಿದೆ. ಶಿವಮೊಗ್ಗದ ಸಂಸದ ಬಿವೈ ರಾಘವೇಂದ್ರ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ತಾನೊಬ್ಬ ಅಭಿವೃದ್ಧಿ ಹರಿಕಾರನೆಂಬಂತೆ ಮಾತಾಡಿದ್ದರು, ಜನರ ಕಣ್ಣಿಗೆ ಕಾಣಿಸುತ್ತಿರೋದೆ ಬೇರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Bengaluru Rains: ವಿಧಾನ ಸೌಧ, ಕಾರ್ಪೊರೇಷನ್ ಸರ್ಕಲ್, ಶಾಂತಿನಗರ ಸೇರಿದಂತೆ ಹಲವೆಡೆ ಭಾರೀ ಮಳೆ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.