ನಿನ್ನೆ ರಾತ್ರಿ ಬೆಂಗಳೂರಲ್ಲಿ ಮತ್ತೇ ಧಾರಾಕಾರ ಮಳೆ, ಜಕ್ಕೂರಿನ ಸುರಭಿ ಲೇಔಟ್ ಜಲಾವೃತ

ಅರುಣ್​ ಕುಮಾರ್​ ಬೆಳ್ಳಿ

Updated on: Oct 22, 2024 | 11:30 AM

ಕಳೆದ 23 ವರ್ಷಗಳಿಂದ ಸುರಭಿ ಲೇಔಟ್​ನಲ್ಲಿ ವಾಸವಾಗಿರುವ ರೇಣುಕಾ ಹೆಸರಿನ ಗೃಹಿಣಿ ಹೇಳುವಂತೆ ಮೊದಲು ಯಾವತ್ತೂ ಇಂಥ ತೊಂದರೆ ಎದುರಾಗಿರಲಿಲ್ಲವಂತೆ. ಜಕ್ಕೂರು ಮತ್ತು ಯಲಹಂಕದಿಂದ ಮಳನೀರು ಹರಿದು ಬಂದು ಈ ಸ್ಥಿತಿ ಎದುರಾಗಿದೆ ಎಂದು ಅವರು ಹೇಳುತ್ತಾರೆ. ಅವರ ಇಡೀ ಮನೆ ಜಲಾವೃತ!

ಬೆಂಗಳೂರು: ನಿನ್ನೆ ರಾತ್ರಿ ನಗರದಲ್ಲಿ ಮತ್ತೊಮ್ಮೆ ಸುರಿದ ಭಾರೀ ಮಳೆಯಿಂದ ಹಲವಾರು ಏರಿಯಾಗಳಲ್ಲಿ ಮಳೆನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಇಲ್ಲಿ ಕಾಣುತ್ತಿರೋದು ಜಕ್ಕೂರು ರಸ್ತೆಯಲ್ಲಿರುವ ಸುರಭಿ ಲೇಔಟ್. ರಸ್ತೆಯ ಮೇಲೆ ಮೊಣಕಾಲು ಮಟ್ಟದವರೆಗೆ ನೀರು ನಿಂತಿದೆ. ಜನ ಓಡಾಡೋದು ಸಾಧ್ಯವೇ ಇಲ್ಲದಂಥ ಸ್ಥಿತಿ. ಕಾರು ಮತ್ತು ದ್ವಿಚಕ್ರವಾಹನಗಳ ಟೈರುಗಳು ನೀರಲ್ಲಿ ಮುಳುಗಿವೆ. ಸ್ಥಳಕ್ಕೆ ಬಿಬಿಎಂಪಿ ಸಿಬ್ಬಂದಿ ಅಗಮಿಸಿರುವುದು ನಿಜವಾದರೂ ಸಮಸ್ಯೆಗೆ ಅವರಲ್ಲಿ ಪರಿಹಾರ ಇಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಬೆಂಗಳೂರು ಮಳೆ ಅವಾಂತರ: ತುಂತುರು ಅಲ್ಲಿ ನೀರ ಹಾಡು, ಹಗಲಿನಲಿ, ಇರುಳಿನಲಿ, ಬಿಬಿಎಂಪಿ ಮಲಗಿರಲಿ!

Published on: Oct 22, 2024 10:32 AM
Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.