DudhSagar: ದೂಧ್​ ಸಾಗರ್ ಜಲಪಾತದ ವೈಭೋಗಕ್ಕೆ ಪ್ರವಾಸಿಗರು ಫಿದಾ; ಇಲ್ಲಿದೆ ಅದರ ಝಲಕ್

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 23, 2023 | 2:50 PM

ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆ. ಬಹುತೇಕ ಎಲ್ಲ ನದಿಗಳು, ಜಲಪಾತಗಳು ತುಂಬಿ ಹರಿಯುತ್ತಿವೆ. ಇದೀಗ ದಟ್ಟಾರಣ್ಯದ ನಡುವೆ ಮೈದುಂಬಿ ಹರಿಯುವ ದೂದ್​ಸಾಗರ್​ ಜಲಪಾತವನ್ನ ಪ್ರವಾಸಿಗರು ನೋಡಿ ಫಿದಾ ಆಗಿದ್ದಾರೆ. ಅದರ ಝಲಕ್​ ಇಲ್ಲಿದೆ ನೋಡಿ.

ಉತ್ತರ ಕನ್ನಡ: ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆ. ಬಹುತೇಕ ಎಲ್ಲ ನದಿಗಳು, ಜಲಪಾತಗಳು ತುಂಬಿ ಹರಿಯುತ್ತಿವೆ. ಪರಿಣಾಮ ಜೊಯಿಡಾ ತಾಲೂಕಿನ ಲಕ್ಷ್ಮೀವಾಡಾ ಸೇತುವೆ ಮುಳುಗಡೆ ಆಗಿದ್ದು ಜೋಯಿಡಾ-ಕ್ಯಾಸಲರಾಕ್ ಸಂಪರ್ಕ ಕಡಿತಗೊಂಡಿದೆ. ಹೌದು ದೂಧ್​ಸಾಗರ್(DudhSagar)​​ಗೆ ಸಂಪರ್ಕಿಸುವ ಕ್ಯಾಸಲರಾಕ್​ ಸಂಪರ್ಕ ಕಡಿತವಾಗಿದ್ದು, ಕ್ಯಾಸಲರಾಕ್​ ಗ್ರಾಮದಲ್ಲಿ 281.6 ಮಿ.ಮೀ. ಮಳೆ ಪ್ರಮಾಣ ದಾಖಲಾಗಿದೆ. ಈ ಮಧ್ಯೆ ದೂದ್​ಸಾಗರ್​ಜಲಪಾತ ಮೈದುಂಬಿ ಹರಿಯುತ್ತಿದ್ದು, ಹೋದ ಪ್ರವಾಸಿಗರಿಗೆ ಪ್ರಕೃತಿ ಮಡಿಲಲ್ಲಿ ಕುಳಿತು ಸುಂದರ ಜಲಪಾತವನ್ನ ಸವಿಯುತ್ತಿದ್ದಾರೆ. ಅದರ ಒಂದು ಝಲಕ್​ ಇಲ್ಲಿದೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on