ವಿಜಯನಗರ; ತುಂಗಾಭದ್ರ ಜಲಾಶಯದ ಹಿನ್ನೀರಿನಲ್ಲಿ ಪ್ರವಾಸಿಗರ ಹುಚ್ಚಾಟ, ವಿಡಿಯೋ ನೋಡಿ

| Updated By: ಆಯೇಷಾ ಬಾನು

Updated on: Jul 15, 2024 | 12:47 PM

ಹೊಸಪೇಟೆ ಬಳಿ ಇರುವ ತುಂಗಾಭದ್ರ ಜಲಾಶಯದ ಹಿನ್ನೀರಿನಲ್ಲಿ ಪ್ರವಾಸಿಗರ ಹುಚ್ಚಾಟ ಜೋರಾಗಿದೆ. ಪ್ರೇಮಿಗಳು, ಕಾಲೇಜು ವಿದ್ಯಾರ್ಥಿಗಳು ಜಲಾಶಯದ ಹಿನ್ನೀರಿಗೆ ಇಳಿದು ಪ್ರಾಣದ ಜೊತೆ ಆಟ ಆಡುತ್ತಿದ್ದಾರೆ. ಸೆಲ್ಫಿ ಹುಚ್ಚಿಗೆ ಜಲಾಶಯದ ಹಿನ್ನೀರಿಗೆ ಇಳಿದು ಪ್ರವಾಸಿಗರು ಮೈ ಮರೆಯುತ್ತಿದ್ದಾರೆ. ಮುಂಜಾಗ್ರತ ಕ್ರಮವಿಲ್ಲದೆ ಡ್ಯಾಂ ಹಿನ್ನಿರಿಗೆ ಇಳಿಯುತ್ತಿದ್ದಾರೆ.

ವಿಜಯನಗರ, ಜುಲೈ.15: ವಿಜಯನಗರ (Vijayanagara) ಜಿಲ್ಲೆ ಹೊಸಪೇಟೆ ಬಳಿ ಇರುವ ತುಂಗಾಭದ್ರ ಜಲಾಶಯದ ಹಿನ್ನೀರಿನಲ್ಲಿ ಪ್ರವಾಸಿಗರ ಹುಚ್ಚಾಟ ಜೋರಾಗಿದೆ. ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬಂದಿದ್ರಿಂದ ಹಿನ್ನೀರಿನ ಜಾಗಕ್ಕೆ ಪ್ರವಾಸಿಗರು ಆಗಮಿಸಿದ್ದಾರೆ. ನೀರಿನ ಅಲೆಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳುತ್ತ ಹುಚ್ಚಾಟವಾಡುತ್ತಿದ್ದಾರೆ. ಪ್ರೇಮಿಗಳು, ಕಾಲೇಜು ವಿದ್ಯಾರ್ಥಿಗಳು ಜಲಾಶಯದ ಹಿನ್ನೀರಿಗೆ ಇಳಿದು ಪ್ರಾಣದ ಜೊತೆ ಆಟ ಆಡುತ್ತಿದ್ದಾರೆ.

ನೀರಿನ ಅಲೆಗಳ ಜೊತೆ ಎಂಜಾಯ್ ಮೂಡ್ ನಲ್ಲಿ ತಮ್ಮ ಪ್ರಾಣಕ್ಕೆ ಆಪಾಯ ತಂದುಕೊಳ್ಳುತ್ತಿದ್ದಾರೆ. ಜಲಾಶಯದಲ್ಲಿ ಸದ್ಯ 33 ಟಿಎಂಸಿ ನೀರು ಸಂಗ್ರಹ ಇದೆ. ಯುವಕ, ಯುವತಿಯರು ಹಿನ್ನೀರಿಗೆ ಇಳಿದ್ರೂ ಯಾವೊಬ್ಬ ಸೆಕ್ಯೂರಿಟಿ ಗಾರ್ಡ್ ಸ್ಥಳದಲ್ಲಿ ಇಲ್ಲ. ದಿನದಿಂದ ದಿನಕ್ಕೆ ತುಂಗಭದ್ರಾ ಜಲಾಶಯದ ಒಳ ಹರಿವಿನಲ್ಲಿ ಏರಿಕೆಯಾಗುತ್ತಿದೆ. ಸೆಲ್ಫಿ ಹುಚ್ಚಿಗೆ ಜಲಾಶಯದ ಹಿನ್ನೀರಿಗೆ ಇಳಿದು ಪ್ರವಾಸಿಗರು ಮೈ ಮರೆಯುತ್ತಿದ್ದಾರೆ. ಮುಂಜಾಗ್ರತ ಕ್ರಮವಿಲ್ಲದೆ ಡ್ಯಾಂ ಹಿನ್ನಿರಿಗೆ ಇಳಿಯುತ್ತಿದ್ದಾರೆ.

ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ